ಎಗ್ಗಿಲ್ಲದೆ ಸುಗ್ಗಿಯಂತೆ ಸಾಗಿದೆ ಅಕ್ರಮ ಮರಳು ಗಣಿಗಾರಿಕೆ

ಹರಿಹರ

       ತಾಲೂಕಿನ ವಿವಿಧೆಡೆ ತುಂಗಭಧ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಹಾಗೂ ಅಧಿಕೃತ ಮರಳು ವಿತರಣ ಕೇಂದ್ರದಲ್ಲಿ ಮರಳು ನೀತಿಯನ್ನು ಪಾಲಿಸದೇ ಮನಬಂದಂತೆ ವಿತರಿಸುತ್ತಿದ್ದಾರೆ ಆದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ.

      ಕಳೆದ ಹಲವು ದಿನಗಳಿಂದ ಹಗಲು-ರಾತ್ರಿ ಎನ್ನದೆ, ಯಾರ ಭಯವೂ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

      ಎಲ್ಲೆಲ್ಲಿ ಅಕ್ರಮ ನಡೆಯುತ್ತೆ? ನಗರದ ಹೊಸ ಭರಂಪುರ, ಮೆಟ್ಟಿಲುಹೊಳೆ ರಸ್ತೆ, ದಾವಣಗೆರೆ ವಾಟರ್ ವಕ್ರ್ಸ ಹಿಂಭಾಗ, ಹಳೆಹರ್ಲಾಪುರ, ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲೂ ರಾತ್ರೋರಾತ್ರಿ ಆಕ್ರಮ ಮರಳು ದಂದೆ ನಡೆಯುತ್ತಿದೆ. ಕೈಲಾಸ ನಗರದ ನದಿ ದಡದಲ್ಲಿ ಸಂಜೆಯಾಗುತ್ತಲೆ ಸಿಮೆಂಟ್ ಚೀಲಗಳು, ತೆಪ್ಪ ಮತ್ತು ರಬ್ಬರ್ ಟೂಬ್‍ಗಳ ಸಹಾಯದಿಂದ ನದಿಯಲ್ಲಿರುವ ಮರಳನ್ನು ಹಣದ ಆಸೆಗಾಗಿ ಜೀವದ ಹಂಗನ್ನು ಬಿಟ್ಟು ದಡಕ್ಕೆ ತಂದು ನಂತರ ಮಜಡಾ, ಟರಾಸ್ ಲಾರಿಗಳಲ್ಲಿ ತುಂಬಿ ರಾತ್ರೋರಾತ್ರಿ ಸಾಗಣಿಕೆ ನಡೆಯುತ್ತಿದೆ.

     ಹರಿಹರ ತುಂಗಾಭದ್ರಾ ನದಿಯ ದಡದ ಸ್ಥೀತಿ ಹಿಗಾದರೆ ಇನ್ನೂ ರಾಣೇಬೆನ್ನೂರು ತಾಲೂಕಿನ ನಲವಾಗಲು, ಹಿರೇಬಿದರಿ, ಐರಣಿ, ಮಾಕನೂರು, ಹಾಗೂ ಹರಪ್ಪನಹಳ್ಳಿಯ ಹಲವಾಗಲು ಈ ಪ್ರದೇಶದ ನದಿಯ ದಡದಲ್ಲಿರುವ ಮರಳನ್ನು ನೂರಾರು ಟ್ರ್ಯಾಕ್ಟರ್‍ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ನಲವಾಗಲು ಗ್ರಾಮದ ಮೂಲಕ ಮರಳ ತರುವಾಗ ಕೆಲವು ರಾಜಕೀಯ ಮುಖಂಡರಿಗೂ ಹಾಗೂ ಗ್ರಾಮಸ್ಥರಿಗೂ ವಾಗ್ವಾದಗಳು ನಡೆದಿವೆ. ಆದರೂ ರಾಜಕಾರಣಿಗಳು ತಮ್ಮ ಶಕ್ತಿ ಬಳಸಿ, ಮರಳು ದಂದೆಯನ್ನು ನಡೆಸುತ್ತಿದ್ದಾರೆ ಎಂದು ಸ್ಥಳಿಯರ ದೂರು.

     ಇತ್ತಿಚಿಗೆ ದಾವಣಗೆÉರೆ ಜಿಲ್ಲೆಗೆ ನೂತನವಾಗಿ ಆಗಮಿಸಿದ ಗ್ರಾಮಾಂತರ ಡಿವೈಎಸ್‍ಪಿಯವರು ತಾಲೂಕಿಗೆ ರಾತ್ರೋರಾತ್ರಿ ಆಗಮಿಸಿ ನದಿದಡದಲ್ಲಿ ಲಾರಿಗಳ ಮುಖಾಂತರ ಅಕ್ರಮವಾಗಿ ಮರಳುಸಾಗಿಸುತ್ತಿದ್ದವರನ್ನು ಪ್ರತ್ಯಕ್ಷವಾಗಿ ಹಿಡಿದು ಪ್ರಕರಣ ದಾಖಲಿಸಿದ್ದರು. ಆದರೂ ಇದರ ಅರಿವೇ ಇಲ್ಲದೆ ಎಂದಿನಂತೆ ನಿರಾಂತಕವಾಗಿ ಎರಡೂ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಪುಷ್ಠಿ ನೀಡುವಂತಿದೆ.

     ಇಷ್ಟೆಲ್ಲ ಅಕ್ರಮ ಚಟುವಟಿಕೆಗಳು ತಾಲೂಕಿನಲ್ಲಿ ನಡೆಯುತ್ತಿದ್ದರೂ ಜಾಣ ಕುರುಡರಂತೆ ಮೌನವಹಿಸಿರುವ ತಾಲೂಕು ಆಡಳಿತ ಹಾಗೂ ಜಾಗೃತ ಸಮಿತಿಯ ವೈಪಲ್ಯವನ್ನು ಎತ್ತಿ ತೋರಿಸುತ್ತಿದೆ.ರಂಗೋಲಿ ಕೆಳಗೆ ನುಸುಳುವ ದಂದೆಕೋರರು: ಅಕ್ರಮ ಮರಳುಗಾರಿಕೆ ತಡೆಗಟ್ಟಲು ಸರ್ಕಾರ ಏನೇ ಬಿಗಿ ನಿಯಂತ್ರಣ ಜಾರಿಗೊಳಿಸಿದರೂ ತಾಲೂಕಿನ ದಂದೆಕೋರರು ಮಾತ್ರ ರಂಗೋಲಿ ಕೆಳಗೆ ನುಸುಳುವಲ್ಲಿ ನಿಸ್ಸೀಮರಾಗಿದ್ದಾರೆ. ಮರಳು ಸಾಗಿಸುವ ವಾಹನಕ್ಕೆ ಜಿಪಿಎಸ್ ಅಳವಡಿಕೆ, ಪರ್ಮಿಟ್ ಕಡ್ಡಾಯ, ಬೋಟ್-ಜೆಸಿಬಿ ಬಳಸುವುದು ಹಾಗೂ ರಾತ್ರಿ ವೇಳೆ ಮರಳುಗಾರಿಕೆ ನಿಷೇಧ ಮುಂತಾದ ಕ್ರಮ ಕೈಗೊಂಡರೂ ತಮ್ಮ ಚಾಣಾಕ್ಷ ತಂತ್ರಗಳನ್ನು ಬಳಸಿ ಇವುಗಳನ್ನೆಲ್ಲ ಉಲ್ಲಂಘಿಸಿ ಮರಳುಗಾರಿಕೆ ನಡೆಸುತ್ತಿದ್ದಾರೆ.

ಜೀವಕ್ಕೆ ಯಾರು ಹೊಣೆ ?:

     ಮರಳು ದಂದೆ ಕೊರರು ಸುಲಭವಾಗಿ ಹಣಗಳಿಸುವ ಉದ್ದೇಶ ದಿಂದ ಬಡ ಕೂಲಿ ಕಾರ್ಮಿಕರನ್ನೇ ಬಳಸಿಕೊಂಡು ರಾತ್ರೀಯ ವೇಳೆ ನದಿಗಿಳಿಸಿ ಮರಳನ್ನು ತುಂಬಿಸುತ್ತಿದ್ದಾರೆ ಇವರು ಕೊಡುವ ಹಣದ ಆಮಿಷಕ್ಕೆ ಜೀವದ ಹಂಗು ತೊರೆದು ಕೆಸಲ ಮಾಡುತ್ತಿದ್ದಾರೆ. ಆದರೆ ಇವರು ಜೀವ ಕಳೆದುಕೊಂಡರೆ ಯಾರು ಹೊಣೆ ಎಂಬಾತಾಗಿದೆ.

ಲಾರಿಗಳ ಸದ್ದಿನಿಂದ ನಿದ್ದೆಯಿಲ್ಲ:

       ರಾತ್ರೀ ವೇಳೆಯಲ್ಲಿ ಪೈಪೋಟಿಗೆ ಬಿದ್ದರಂತೆ ಹೊಗುವ ಸದ್ದಿಗೆ ಜನರು ನಿದ್ದೆ ಯಿಂದ ಎದ್ದು ಜಾಗರಣೆ ಮಾಡುವ ಸ್ಥಿತಿ ಬಂದೊದಗಿದೆ. ಹಳ್ಳಿಗಾಡಿನಲ್ಲೂ ಇದೆ ಸ್ಥಿತಿಯಿದ್ದು, ನದಿ ಪಾತ್ರದಿಂದ ಮುಖ್ಯ ರಸ್ತೆಗೆ ಬರುವ ಕಚ್ಚಾ ರಸ್ತೆ ಮಾರ್ಗಗಳ ಅಕ್ಕಪಕ್ಕದ ಜಮೀನುಗಳಲ್ಲಿ ರೈತರು ಕೃಷಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಮರಳು ಲಾರಿಗಳು ಸಾಗುವ ಮಾರ್ಗ ಮಧ್ಯೆದ ಗ್ರಾಮಗಳು ಧೂಳುಮಯವಾಗಿವೆ.

ದಂದೆಕೊರರಿಗೆ ಜನಪ್ರತಿ ನಿಧಿಗಳ ಕೃಪೆ ?:

       ಕಳೆದ ಹಲವಾರು ವರ್ಷಗಳಿಂದ ತುಂಗಭದ್ರ ನದಿಯ ಒಡಲನ್ನು ಬಗೆದು ಮರಳನ್ನು ಸಾಗಿಸುತ್ತಿರುವ ದಂದೆ ಕೋರರಿಗೆ ಜನಪ್ರತಿನಿದಿಗಳ ಕೃಪಾಕಟಾಕ್ಷ ಇದೆ, ಮರಳಿನ ವಾಹನವನ್ನು ಜಪ್ತಿ ಮಾಡಿದ ತಕ್ಷಣ ಅಧಿಕಾರಿಗಳಿಗೆ ಪ್ರಕರಣ ದಾಖಲಿಸದಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಮಾತುಗಳು..

ಮರಳು ನೀತಿ ಉದ್ದೇಶ ಈಡೇರಲಿ:

     ನದಿ ಪಾತ್ರದಲ್ಲಿ ಮರಳಿನ ನಿಕ್ಷೇಪವಿರುವ ಸ್ಥಳದಲ್ಲಿ ಜಲಚರ ಪ್ರಾಣಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರವಾನಿಗೆ ಪಡೆದ ಅದಿಕೃತ ಗುತ್ತಿಗೆದಾರರು ಮಾತ್ರ ಮರಳುನ್ನು ಬೆಳಗ್ಗೆ 8 ರಿಂದ ಸಂಜೆ 6ರವರೆಗೂ ಗಣಿಗಾರಿಕೆ ನಡೆಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ತಾಲೂಕಿನಲ್ಲಿ ಪರ್ಮಿಟ್ ಇಲ್ಲದೆ, ಒಂದೇ ಪರ್ಮಿಟ್‍ನಲ್ಲಿ ಎರಡರಿಂದ ಮೂರು ಗಾಡಿಗಳನ್ನು ಸಾಗಿಸಿ ಅಧಿಕಾರಿಗಳಿಗೆ ಕಣಿಗೆ ವiಣ್ಣನ ಎರಚ್ಚುವ ದಂದೆಕೊರರು ಜಿಪಿಎಸ್ ಟ್ರ್ಯಾಕ್ ಮಾಡದೆ, ಯಂತ್ರೋಪಕರಣ ಬಳಸಿ, ರಾತ್ರಿಯಿಡೀ ಮರಳು ಸಾಗಣಿಕೆ ಮಾಡಲಾಗುತ್ತಿದೆ.

    ಇದರಿಂದ ಸರ್ಕಾರಕ್ಕೆ ರಾಯಲ್ಟಿ ನಷ್ಟವಾಗುವುದಲ್ಲದೆ, ಜನಜೀವನ, ಜಲಚರ ಜೀವಿಗಳು, ಪರಿಸರಕ್ಕೂ ಹಾನಿಯಾಗುತ್ತಿದೆ. ಅಲ್ಲದೇ ಯುವಕರು ಈಜಲು ತೆರಳಿದಾಗ ಮತ್ತು ಮಹಿಳೆಯರು ಬಟ್ಟೆ ತೊಳೆಯುವಾಗ, ಜಾನುವಾರುಗಳು ನೀರು ಕುಡಿಯಲು ಹೋದಾಗ ನದಿಯಲ್ಲಿ ಮರಳು ತೋಡಿದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಅನೇಕ ಪ್ರಕರಣಗಳ ನಡೆದಿವೆ. ಇವುಗಳ ಮಧ್ಯೆ ಅಕ್ರಮ ಮರಳು ದಂದೆ ಕೋರರಿಂದ ಮತ್ತೊಷ್ಟು ಗುಂಡಿಗಳು ನಿರ್ಮಾಣ ಮಾಡುತ್ತಿರುವುದು ಜನರಿಗೆ ಮತ್ತೊಷ್ಟು ಭಯ ಭೀತಿ ಹುಟ್ಟಿಸಿದೆ.

    ಆದ್ದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸರ್ಕಾರದ ಮರಳು ನೀತಿಯ ಉದ್ದೇಶ ಈಡೇರಿಸಬೇಕು, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸುಲಭ- ಸುಲಲಿತವಾಗಿ ಮರಳು ದೊರೆಯುವಂತೆ ನೋಡಿಕೊಳ್ಳಬೇಕೆಂಬುದು ಜನರ ಆಶಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link