ಅಕ್ರಮ ಮರಳು-ಟ್ರ್ಯಾಕ್ಟರ್ ವಶಕ್ಕೆ

ವೈ.ಎನ್.ಹೊಸಕೋಟೆ

    ಚಿಕ್ಕಜಾಲೋಡು ಸಮೀಪ ದೊಡ್ಡಹಳ್ಳದಲ್ಲಿ ಅಕ್ರಮವಾಗಿ ಮರಳನ್ನು ತುಂಬುತ್ತಿದ್ದ ಟ್ರ್ಯಾಕ್ಟರನ್ನು ಗಸ್ತಿನಲ್ಲಿದ್ದ ವೈ.ಎನ್.ಹೊಸಕೋಟೆ ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

     ಚಿಕ್ಕ ಜಾಲೋಡು ಗ್ರಾಮದ ಸಮೀಪ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತೆ ದೊಡ್ಡಹಳ್ಳ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ದಂಧೆಕೋರರು ಅಕ್ರಮ ಮರಳು ಸಾಗಿಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ವೈ.ಎನ್.ಹೊಸಕೋಟೆ ಪಿಎಸ್‍ಐ ಕೋದಂಡÀರಾಮಯ್ಯ ಭಾನುವಾರ ಮಧ್ಯಾಹ್ನ 3.30 ರ ಸಮಯದಲ್ಲಿ ದಾಳಿ ನಡೆಸಿ ಟ್ರ್ಯಾಕ್ಟರ್ ಮತ್ತು ಮರಳನ್ನು ವಶಪಡಿಸಿಕೊಂಡಿದ್ದಾರೆ. ಪೋಲೀಸರ ಕಣ್ಣು ತಪ್ಪಿಸಿ ಹಲವು ದಿನಗಳಿಂದ ಈ ದಂಧೆ ನಡೆಯುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link