ತುರುವೇಕೆರೆ:
ತುಮಕೂರು ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೇ ಕಾಂಗ್ರೆಸ್ ನಿಂದ ಟಿಕೇಟ್ ನೀಡಬೇಕು ಎಂದು ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ ಸೇರಿದಂತೆ ಪಟ್ಟಣ ಪಂಚಾಯ್ತಿಯ ಹಲವು ಸದಸ್ಯರು ಕಾಂಗ್ರೆಸ್ ಹೈಕಮಾಂಡ್‍ಗೆ ಒತ್ತಾಯ ಮಾಡಿದ್ದಾರೆ.
ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಾಲಿ ಸಂಸದರಾಗಿರುವ ಎಸ್.ಪಿ.ಮುದ್ದಹನುಮೇ ಗೌಡರು ಸಜ್ಜನರಾಗಿದ್ದಾರೆ. ಓರ್ವ ಉತ್ತಮ ಸಂಸತ್ ಪಟುವಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಬೆಳೆಸಲು ಕಾರಣರಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಅವರನ್ನು ಜನರು ಪ್ರೀಸಿಸುತ್ತಾರೆ. ಇಂತಹ ವ್ಯಕ್ತಿತ್ವ ಉಳ್ಳ ಮುದ್ದಹನುಮೇ ಗೌಡರಿಗೆ ಟಿಕೇಟ್ ಯಾವುದೇ ಕಾರಣಕ್ಕೂ ತಪ್ಪಬಾರದು ಎಂದು ಆಗ್ರಹಿಸಿದರು. ಮುದ್ದಹನುಮೇಗೌಡರು ಪ್ರತಿಭಾನ್ವಿತರಾಗಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹೆಗ್ಗಳಿಕೆ ಅವರಿಗಿದೆ. ಅವರ ಸಾಧನೆ ಕಾಂಗ್ರೆಸ್ ಗೆ ವರ್ಚಸ್ಸು ತಂದಿದೆ. ಅವರು ಜಿಲ್ಲೆಯ ಜನರೊಂದಿಗೆ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸದಿಂದಾಗಿ ಗೆಲುವು ಸಾಧಿಸುವುದರಲ್ಲಿ ಸಂಶಯವೆ ಇಲ್ಲ ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಮುದ್ದಹನುಮೇಗೌಡರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕೆಂದು ಒತ್ತಾಯಿಸಿ ಹಾಲಿ ಸಂಸದರಿಗೇ ಟಿಕೇಟ್ ನೀಡದಿದ್ದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಮೂಡುತ್ತದೆ. ಕಾರ್ಯಕರ್ತರ ಅಸಮಾಧಾನ ಹೆಚ್ಚುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ.ಎನ್.ಶಶಿಶೇಖರ್, ಯಜಮಾನ್ ಮಹೇಶ್, ಶ್ರೀನಿವಾಸ್, ಮುಖಂಡರಾದ ಅರಳೀಕೆರೆ ರವಿಕುಮಾರ್, ಹಟ್ಟಿಹಳ್ಳಿ ಪುಟ್ಟಣ್ಣ ಸೇರಿದಂತೆ ಇತರ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
