ವರದಾ ನದಿ ಒಡಲಿಗೆ ಕನ್ನಾ ಹಾಕಿದವರ ಬಂಧನ..!

ಹಾನಗಲ್ಲ :

    ತಾಲೂಕಿನ ಆಡೂರ ಭಾಗದ ಬಹುತೇಕ ಕಡೆ ವರದಾ ನದಿ ತಟದಲ್ಲಿ ನಿರತಂತರವಾಗಿ ಅಕ್ರಮವಾಗಿ ಮರಳು ದಂದೆ ನಡೆಯುತ್ತಿರುವ ಮಾಹಿತಿಯನ್ನು ಆದರಿಸಿ ತಾಲೂಕ ತಹಶೀಲ್ದಾರ ಪಿ.ಎಸ್.ಎರ್ರಿಸ್ವಾಮಿ ಮರಳುಗಾರಿಕೆ ಘಟಕಗಳ ಮೇಲೆ ಮಂಗಳವಾರ ದಾಳಿ ನಡೆಸಿ ಟ್ರಾಕ್ಟರ್‍ನೊಂದಿಗೆ ಚಾಲಕನನ್ನೂ ವಶಪಡಿಸಿಕೊಂಡು ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ.

    ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಹಾಯ್ದು ಹೋಗಿರುವ ವರದಾ ನದಿ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ಗ್ರಾಮಸ್ಥರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ ಈ ದಾಳಿ ಕೈಗೊಂಡಿದ್ದಾರೆ. ವರದಾ ನದಿ ಪಾತ್ರದ 25 ಕಿಮಿ ಗಿಂತಲೂ ಹೆಚ್ಚು ಸ್ಥಳಗಳಲ್ಲಿ ರಾಜಾರೋಷವಾಗಿ ಹಗಲಿನಲ್ಲಿ ನಡೆಯುತ್ತಿರುವ ಅಕ್ರಮವಾಗಿ ಮರಳು ತೆಗೆಯಲಾಗುತ್ತದೆ.

    ರಾತ್ರಿ ಸಮಯದಲ್ಲಿ ಈ ನದಿಯಲ್ಲಿ ಮರಳು ತೆಗೆಯಲು ಹತ್ತಾರು ಜನರ ತಂಡಗಳು ಬೆಳಗಿನವರೆಗೂ ಕೆಲಸ ಮಾಡುತ್ತವೆ. ಬೆಳಗಿನ ಜಾವದಿಂದ ಈ ಮರಳನ್ನು ಟ್ರಾಕ್ಟರ್‍ಗಳಲ್ಲಿ ತುಂಬಿ ತಾಲೂಕು ಹಾಗೂ ಹೊರ ತಾಲೂಕುಗಳಿಗೂ ರವಾನಿಸಲಾಗುತ್ತದೆ. ಮರಳು ತುಂಬಿದ ಟ್ರಾಕ್ಟರ್‍ವೊಂದಕ್ಕೆ 5000 ದಿಂದ 6000 ರೂಗಳಿಗೆ ಮಾರಾಟ ಮಾಡಲಾಗುತ್ತದೆ ಎಂಬ ಮಾಹಿತಿ ತಾಲೂಕು ಆಡಳಿತಕ್ಕೆ ದೊರೆತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿ :

    ನದಿಗಳಲ್ಲಿರುವ ಮರಳು ಉತ್ತಮ ಗುಣಮಟ್ಟದ್ದಾಗಿಲ್ಲವಾದರೂ ಅದನ್ನೇ ಬಗೆದು ಕೈಗೆ ಬಂದಷ್ಟಕ್ಕೆ ಮಾರಾಟ ಮಾಡುತ್ತಿದ್ದಾರೆ. ಮರಳನ್ನು ತಮ್ಮ ಸ್ವಂತದ ಆಸ್ತಿ ಎಂಬಂತೆ ರಾತ್ರಿಯೆಲ್ಲ ಬಗೆದು ಗುಡ್ಡೆ ಹಾಕಲಾಗುತ್ತಿದೆ. ಪ್ರತಿ ದಿನವೂ ಇಪ್ಪತೈದಕ್ಕೂ ಅಧಿಕ ವಾಹನಗಳಲ್ಲಿ ಮರಳು ರವಾನೆಯಾಗುತ್ತಿರುವ ಮಾಹಿತಿಯಿದೆ. ಪೊಲೀಸ್ ಹಾಗೂ ಗ್ರಾಮ ಪಂಚಾಯತಿಗಳು ಇಂಥ ದಂಧೆಕೋರರನ್ನು ಹಿಡಿದು ದೂರು ದಾಖಲಿಸುವ ಕ್ರಮ ಕೈಗೊಳ್ಳಲು ಆರಂಭಿಸಬೇಕಿದೆ.

   ಆದರೆ ಮರಳು ಮಾಫಿಯಾದ ದಂಧೆಕೋರರು ಅಕ್ರಮ ಚಟುವಟಿಕೆಯನ್ನು ಅವಿರತವಾಗಿ ನಡೆಸುತ್ತಿದ್ದರೂ ಯಾರೂ ಇದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಮರಳು ತುಂಬಿದ ವಾಹನಗಳನ್ನು ಹಿಡಿಯುವ, ದಂಡ ವಿಧಿಸುವ ಅಧಿಕಾರ ತಮ್ಮ ಇಲಾಖೆಗಳಿಗಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ವಾದವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap