ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆಯಾಗಿದ್ದು, ನೀರಿನ ಸಮಸ್ಯೆ ಬಗೆ ಹರಿಸಿ- ತಿಪ್ಪೇಸ್ವಾಮಿ

ಜಗಳೂರು

         ನೂರಾರು ವರ್ಷಗಳಿಂದ ಜಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಉಳಿದುಕೊಂಡಿದೆ. ಬೇಸಿಗೆ ಮುನ್ನವೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮುಜಾಗೃತವಾಗಿ ಪೂರ್ವ ಸಿದ್ದತೆ ಮಾಡಿಕೊಂಡು ನೀರಿನ ತೊಂದರೆಯಾಗದಂತೆ ನಿಗಾವಹಿಸಬೇಕು ಎಂದು ಹಿರಿಯ ನಾಗರೀಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಹೇಳಿದರು.

           ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗಿದ್ದು, ಪಟ್ಟಣದ 18 ವಾರ್ಡ್‍ಗಳಲ್ಲೂ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಹಿರಿಯ ನಾಗರೀಕರ ಸಂಘದ ವತಿಯಿಂದ ಪ.ಪಂ ಮುಖ್ಯಾಧಿಕಾರಿ ಕಂಪಳಮ್ಮ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.

          ಆದರೆ ಅಧಿಕಾರಿಗಳು ಜಬಾಬ್ದಾರಿ ತೆಗೆದುಕೊಳ್ಳದೇ ನಾಗರೀಕರು ಪ್ರತಿಭಟನೆ, ಮುತ್ತಿಗೆ, ಧರಣಿ ನಡೆಸಿದ ಮೇಲೆ ಬೋರ್‍ವೆಲ್ ಕೊರೆಸುವುದು, ಟ್ಯಾಂಕರ್‍ಗಳಿಗೆ ಟೆಂಡರ್ ಕರೆಯುವುದು ಉತ್ತಮ ಬೆಳಣಿಗೆಯಲ್ಲಾ ದೂರಿದರು. ಪಟ್ಟಣದ ಪ್ರತಿ ವಾರ್ಡ್‍ಗಳಲ್ಲೂ ಕುಡಿಯುವ ನೀರಿಗೆ ಮಹಿಳೆಯರು ಮತ್ತು ಮಕ್ಕಳು ಕೊಡಗಳನ್ನು ಹಿಡಿದುಕೊಂಡು ನಳಗಳ ಮುಂದೆ ಸಾಲಾಗಿ ನಿಂತುಕೊಳ್ಳಬೇಕು. ನಳಗಳಲ್ಲಿ ಬರುವ ಬೆರಳು ಗಾತ್ರ ನೀರಿಗೆ ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕು.

        ವಿದ್ಯುತ್ ಇಲ್ಲವಾದರೆ ಜನರ ಸಮಸ್ಯೆ ಏಳ ತೀರದಾಗಿದೆ. ನೀರು ಗಂಟಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಣಕ್ಕಾಗಿ ನೀರು ಎನ್ನುವಂತಾಗಿದೆ. ಆದ್ದರಿಂದ ಜನರಿಗೆ ಅಗತ್ಯವಾಗಿ ಕುಡಿಯುವ ನೀರು ಮುಖ್ಯವಾಗಿದ್ದು ಬೇಸಿಗೆ ಮುಗಿಯುವವರೆಗೂ ಎಚ್ಚರಾಗಿ ಕೆಲಸ ಮಾಡಬೇಕು ಎಂದರು.

        ಹಿರಿಯ ನಾಗರೀಕರ ಸಂಘದ ಸಂಘದ ಉಪಾಧ್ಯಕ್ಷ ರಂಗಪ್ಪ ಮಾತನಾಡಿ ಶಾಂತಿಸಾಗರದಿಂದ ಬರುವ ನೀರು ಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ. ಒಂದೆರಡು ವಾರ್ಡ್‍ಗಳಲ್ಲಿ ಬಿಟ್ಟರೆ ಉಳಿ ಬಡಾವಣೆಗಳಲ್ಲಿ ಸೂಳೆಕೆರೆ ನೀರು ಕನಸ್ಸಾಗಿದೆ. ಪಟ್ಟಣ ಪಂಚಾಯಿತಿಯಿಂದ ಪ್ರತಿ ತಿಂಗಳು ಲಕ್ಷ ಲಕ್ಷ ಖರ್ಚು ಮಾಡಲಾಗುತ್ತಿದೆ. ಆದರೆ ಜನರಿಗೆ ನೀರು ಸಿಗುತಿಲ್ಲ. ಬೆಳಗ್ಗೆ, ಸಂಜೆ, ರಾತ್ರಿ ವೇಳೆಯಲ್ಲಿ ಮಹಿಳೆಯರು ಜಗಳ ಮಾಡುತ್ತಾರೆ. ಟ್ಯಾಂಕರ್ ಮೂಲಕ ನೀರು ಬಿಡುತ್ತಿರುವುದು ಪ್ರಯೋಜನವಿಲ್ಲವೆಂದು ಎಂದವರು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹಾದೇವಪ್ಪಗೌಡ, ಹಿರಿಯನಾಗರೀಕರಾದ ರಂಗಪ್ಪ, ಕರಿಯಪ್ಪ, ಅಡಿವಪ್ಪ, ಕೋರಪ್ಪ, ತಿಮ್ಮಣ್ಣ, ಮಲ್ಲಿಕಾರ್ಜುನ , ರೇವಣ್ಣ, ಪೂಜಾರಿ ನಾಗೆಂದ್ರಪ್ಪ, ಲಕ್ಷ್ಮೀರೆಡ್ಡಿ, ಮಹಾಸ್ವಾಮಿ, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap