ನಕ್ಸಲ್‍ವಾದ ಅಪರಾಧವಲ್ಲ, ಕೊಂದರೆ ಅಪರಾಧ

ದಾವಣಗೆರೆ:

     ನಕ್ಸಲ್‍ವಾದ ಅಪರಾಧವಲ್ಲ, ಹಿಂಸೆ ಮಾಡಿದರೆ, ಕೊಂದರೆ ಅಪರಾಧ ಎಂದು ಚಿಂತಕ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.

      ನಗರದ ಎವಿಕೆ ಮಹಿಳಾ ಕಾಲೇಜು ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧೀಜಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನಕ್ಸಲ್ ವಾದದಲ್ಲಿ ಅನೇಕ ಮಾರ್ಗಗಳಲಿವೆ. ಆದರೆ, ನನ್ನಂತೆ ಯೋಚನೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಗರ ನಕ್ಸಲರ ಹಸರಿನಲ್ಲಿ ಬಂಧಿಸಿ, ಗೃಹಬಂಧನದಲ್ಲಿ ಇಡುವುದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.
ನಗರದ ನಕ್ಸಲರ ಹೆಸರಿನಲ್ಲಿ ಆಂಧ್ರಪ್ರದೇಶದ ಕವಿ ವರವರರಾವ್, ಸಮಾಜಿಕ ಹೋರಾಟಗಾರ್ತಿ ಸುಧಾ ಭಾರಧ್ವಾಜ್ ಅವರನ್ನು ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ. ಈ ಬಗ್ಗೆ ನಮ್ಮ ನ್ಯಾಯಾಲಯಗಳು ಸಹ ಮಾತನಾಡದಿರುವುದು ನನ್ನಂಥವರಲ್ಲಿ ದುಃಖ ಉಂಡು ಮಾಡಿದೆ ಎಂದರು.

      ಪ್ರಸ್ತುತ ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಚಿಂತನೆ ನಡೆಸಿದರೆ, ದೇಶದ್ರೋಹಿಗಳ ಹಣೆಪಟ್ಟಿ ಕಟ್ಟಲಾಗುತ್ತಿದೆ. ಹೀಗಾಗಿ ಗಾಂಧೀಜಿ ಅವರಲ್ಲಿದ್ದ ವಿರೋಧ ಅಭಿಪ್ರಾಯಗಳನ್ನು ಗೌರವಿಸುವ ಗುಣ ಕಲಿಸಬೇಕಾಗಿದೆ ಎಂದರು.

      ನೆಹರು ವಿರುದ್ಧ ಲೋಹಿಯಾ, ಅಟಲ್ ಬಿಹಾರಿ ವಾಜಪೇಯಿ ಟೀಕೆಗಳ ಸುರಿ ಮಳೆಯನ್ನೇ ಸುರಿಯುತ್ತಿದ್ದರೂ ನೆಹರು ಎಂದೂ ಅವರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಿಲ್ಲ. ಆದರೆ, ಈಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ದನಿ ಅಡಗಿಸುವ ಪ್ರಯತ್ನ ನಡೆಯುತ್ತಿದೆ. ಇಂದಿರಾಗಾಂಧೀ ಹಿಂದೆ ಕಾನೂನುಗಳ ಮೂಲಕ ತುರ್ತು ಪರಿಸ್ಥಿತಿ ಹೇರಿದ್ದರು. ಆದರೆ, ಇಂದು ಕಾನೂನು ಇಲ್ಲದೆಯೇ ತುರ್ತು ಪರಿಸ್ಥಿತಿ ಹೇರಿರುವ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap