ರೇವಣ್ಣವರು ಈ ದೇಶ ಬಿಟ್ಟು ಎಲ್ಲಿಯಾದ್ರೂ ಓಡಿ ಹೋಗ್ತಾರಾ? : ರೆಡ್ಡಿ ಹೇಳಿದ್ಯಾಕೆ ….?

ಕೊಪ್ಪಳ

    ಎಚ್‌ಡಿ ರೇವಣ್ಣ ಕೇಸ್‌ನಲ್ಲಿ ರಾಜಕೀಯವಾಗಿ ಇದರಿಂದ ಲಾಭ ಪಡೆಯಬೇಕೆಂದು ಮಾಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಾಣ್ತಿದೆ. ರೇವಣ್ಣವರು ಈ ದೇಶ ಬಿಟ್ಟು ಎಲ್ಲಿಯಾದ್ರೂ ಓಡಿ ಹೋಗ್ತಾರಾ?ದೇಶ ಬಿಟ್ಟು ಓಡಿಹೋಗುವ ಕುಟುಂಬನಾ?   ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಶ್ನಿಸಿದರು.

    ಕೊಪ್ಪಳದಲ್ಲಿ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಆಶ್ಲೀಲ ಪ್ರಕರಣದ ಕುರಿತು ನಾನು ಮಾತನಾಡುವುದು ಸೂಕ್ತವಲ್ಲ, ಕಾನೂನು ಏನು ಕ್ರಮ ಜರುಗಿಸಬೇಕು ಅವರು ಜರುಗಿಸುತ್ತಾರೆ. ಎಲ್ಲದರ ಬಗ್ಗೆ ಚುನಾವಣೆಗಳು ಆದ್ಮೇಲೆ ಕಥೆಗಳು ಗೊತ್ತಾಗುತ್ತವೆ, ಎಚ್‌ಡಿ ರೇವಣ್ಣನವರು ಈ ದೇಶ ಬಿಟ್ಟು ಎಲ್ಲಿಯಾದ್ರೂ ಓಡಿ ಹೋಗ್ತಾರಾ?, ರೇವಣ್ಣ ಕುಟುಂಬ ದೇಶ ಬಿಟ್ಟು ಓಡಿಹೋಗುವ ಕುಟುಂಬನಾ?,ಇದು ರಾಜಕೀಯ ಕುತಂತ್ರ ಬಿಟ್ರೆ ಏನಿಲ್ಲ ಎಂದು ಹರಿಹಾಯ್ದರು.

    ಪ್ರಜ್ವಲ್ ರೇವಣ್ಣ ಸಿಡಿ, ಪೆನ್ ಡ್ರೈವ್ ಮತ್ತೊಂದು ಪೊಲೀಸ್ ತನಿಖೆಯಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ರೇವಣ್ಣ ಅವರ ವಯಸ್ಸಿಗೆ, ದೇವಗೌಡರಿಗೆ ಗೌರವ ಇದೆ ಚುನಾವಣೆ 48 ಗಂಟೆಗಳಲ್ಲಿ ಈ ರೀತಿ ನಾಟಕ ಮಾಡೋದು ಸರಿಯಲ್ಲ, ಕರ್ನಾಟಕ ಜನರು ದಡ್ಡರೇನಲ್ಲ, ಈ ದೇಶದಲ್ಲಿ ಮೋದಿ ಮೂರನೇ ಬಾರಿ ಪ್ರಧಾನಿಯಾಗೋದು ನಿಶ್ಚಿತ, ಕಾಂಗ್ರೆಸ್ ನಾಟಕ ನಿಲ್ಲೋದು ಖಚಿತ ಎಂದರು.

    ನನ್ನ ಮನೆ ಬಾಗೀಲಿಗೆ ಬಂದು ದುಡ್ಡು ತಗೊಂಡು ಶಾಸಕನಾದವನು ಅವ್ನು. ಶಾಸಕನಾಗಿ ನನ್ನ ಮನೆಗೆ ಬಂದು ಬಿಜೆಪಿನ ಬೆಂಬಲಿಸುದ್ದು ಅವ್ನು, ಇದರಲ್ಲಿ ವಿಶೇಷ ಏನಿದೆ ಎಂದು ಸಚಿವ ಶಿವರಾಜ್ ತಂಗಡಗಿಗೆ ಮತ್ತೆ ಏಕವಚನದಲ್ಲಿ ಜನಾರ್ದನರೆಡ್ಡಿ ವಾಗ್ದಾಳಿ ನಡೆಸಿದರು.

    ಯಾರು ಯಾರ ಮನೆಗೆ ಓಡಾಡಿದ್ರು ನೀವೆ ನೋಡಿದ್ದೀರಿ. ಅವ್ನು ಆಫ್ ಟರಲ್ ನನಗೆ ಯಾವಲೆಕ್ಕ? ಅವನ ಯೋಗ್ಯತೆ ಏನು, ನನ್ನ ಲೇವಲ್ ಏನು? ಅವನ ದುರಾಹಂಕಾರಿ ಮಾತ್ನಾಡಿದರೆ ಅವ್ನ ಲೇವಲಿಗೆ ಎಲ್ಲಿ ಇಡಬೇಕು ಅಲ್ಲಿ ಇಡ್ತೀನಿ. ನಾನು, ನಮ್ಮ ಯುವಕರು ಚಾಲೆಂಜ್ ಮಾಡಿದ್ರು. ಮೋದಿ ಮೋದಿ ಎನ್ನುತ್ತೇವೆ ಕಪಾಳಕ್ಕೆ ಹೊಡಿ ಬಾ ಎಂದು ಅವನ ಒಂದು ಅದೃಷ್ಟದಲ್ಲಿ ಸಚಿವನಾಗಿದ್ದಾನೆ. ಅವನ ದುರಾಹಂಕಾರದ ಮಾತುಗಳನ್ನು ಬಿಡಬೇಕು. ಇಲ್ಲವಾದ್ರೆ ಅವನಿಗೆ ಕನಕಗಿರಿ ಕ್ಷೇತ್ರದ ಜನರು ತಕ್ಕಪಾಠ ಕಲಿಸುತ್ತಾದೆ ಎಂದ ಮಾಜಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.ಪುಲ್ವಾಮ ದಾಳಿಯ ಆರ್ ಡಿಎಕ್ಸ್ ಬಗ್ಗೆ ಮಾತ್ನಾಡುತ್ತಾನೆ

    ಬಾಂಬ್ ಎಲ್ಲಿಂದ ಬರುತ್ತೆ ಎಲ್ಲಾ ಜನರಿಗೆ ಗೊತ್ತಿದೆ. ಅದು ಪಾಕಿಸ್ತಾನದಿಂದ ಬರುತ್ತೆ ಎನ್ನುವುದು ಗೊತ್ತು, ಇಂದು ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ಕೆಲಸ ಮಾಡಿದ್ದಾರೆ. ಒಬ್ಬ ಜಿಲ್ಲಾ ಮಂತ್ರಿಯಾಗಿ ಅವ್ನಿಗೆ ಜ್ಞಾನವಿಲ್ಲ. ಅವನು ನಿಜವಾಗಲು ತಲೆಕೆಟ್ಟು ಮಾತ್ನಾಡುತ್ತಾನೆ. ಶಿವರಾಜ್ ತಂಗಡಗಿ ತನ್ನ ಯೋಗ್ಯತೆ ಮೀರಿ ಮಾತ್ನಾಡುತ್ತಾನೆ. ಮೋದಿ ಅವರ ಬಗ್ಗೆ ನನ್ನ ಬಗ್ಗೆ ಮಾತ್ನಾಡುತ್ತಾನೆ. ಮೋದಿ ಏನು ಮೇಲಿಂದ ಬಂದಿದ್ದಾರೇನು ಅಂತಾನೆ. ಇವನೇನು ಮೇಲಿಂದ ಬಂದಿದ್ದಾನೇನು

   ಈ ತಂಗಡಗಿ ವಿರುದ್ಧ ಕನಕಗಿರಿ ಕ್ಷೇತ್ರದ ಜನರು ಮಾತ್ನಾಡುತ್ತಿದ್ದಾರೆ. ಇಲ್ಲಸಲ್ಲದ ಕೇಸ್ ಗಳನ್ನು ಹಾಕಿ ಬೆದರಿಸುತ್ತಿದ್ದಾನೆ. ಅವನ ಬಹಳ ಎಚ್ಚರಿಕೆಯಿಂದ ಇರಬೇಕು, ಅಷ್ಟೋ ಇಷ್ಟೋ ಗೌರವ ಇರುತ್ತೆ. ಪ್ರಧಾನಿಗಳ ಬಗ್ಗೆ ಮಾತ್ನಾಡಿದರೆ ನೀನು ದೊಡ್ಡವನು ಆಗ್ತಿಯಾ ಅಂದ್ಕೊಂಡಿದ್ದಿ. ಆದರೆ ನೀನು ನೆಲದಲ್ಲಿಯೇ ಇರ್ತಿಯಾ ಎಂದ ತಂಗಡಗಿ ವಿರುದ್ಧ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap