ಸಾಮಾಜಿಕ ಸಿದ್ದಾಂತಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಕರೆ

ಕುಣಿಗಲ್

       ಸಮಾಜ ವಿಜ್ಞಾನಗಳ ಮಹತ್ವವನ್ನ ಜನರಿಗೆ ಮುಟ್ಟಿಸಬೇಕಾಗಿದೆ, ಸಾಮಾಜಿಕ ಸಿದ್ಧಾಂತಗಳನ್ನ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ವಿ.ಕೃಷ್ಣಮೂರ್ತಿ ತಿಳಿಸಿದರು.

          ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾಜಶಾಸ್ತ್ರ ವಿಭಾಗದಿಂದ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಸಮಾಜದ ಅರಿವನ್ನ ಸಂಬಂಧಗಳನ್ನ ಸೂಕ್ಷ್ಮಮತಿಗಳಾಗಿ ತಿಳಿಯಬೇಕು ಇಲ್ಲದಿದ್ದರೆ ಗೋಜಲಾಗುತ್ತದೆ. ಸಾಮಾಜಿಕ ಜೀವನವೂ ಕ್ಲಿಷ್ಟವಾಗಿದೆ. ಅದಕ್ಕಾಗಿ ಸಮಾಜ ವಿಜ್ಞಾನಗಳ ಅಭ್ಯುದಯಕ್ಕೆ ನೆರವನ್ನ ಪಡೆಯಬೇಕಾಗಿದೆ, ಜನಸಾಮಾನ್ಯರಿಗೆ ಸಮಾಜ ವಿಜ್ಞಾನಗಳ ಮಹತ್ವವನ್ನ ಮುಟ್ಟಿಸುವಂತಹ ಜ್ಞಾನ ಪ್ರತಿಯೊಬ್ಬ ಪ್ರಜೆಗಳಲ್ಲೂ ಅಳವಡಿಸಿಕೊಳ್ಳುವುದರ ಮೂಲಕ , ಸಮಾಜ ಶಾಸ್ತ್ರ, ಸಮಾಜ ವಿಜ್ಞಾನಗಳು ಮಹತ್ವವಾಗಿದ್ದು, ಇದನ್ನ ಕಲಿತರೆ ಸಾಮಾಜಿಕ ಜೀವನ ಸುಖ, ಶಾಂತಿ, ಸಂತೋಷವೂ ಸಿಗುವಂತಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಮಾಜಶಾಸ್ತ್ರದ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಎಂದರು.

           ಕಾಲೇಜಿನ ಸಂಪನ್ಮೂಲ ವ್ಯಕ್ತಿಗಳಾದ ಎಂ.ಪಿ.ಶಂಕರ್ ಮಾತನಾಡಿ, ಸಮಾಜದ ಅರಿವನ್ನ ತಿಳಿಯಬೇಕು, ಇಲ್ಲದಿದ್ದರೆ ಸಂಬಂಧಗಳು ಮನೆಯ ಪರಿಸ್ಥಿತಿ ಸರಿಯಾಗಿರುವುದಿಲ್ಲ. ಮಾನಸಿಕ ಸ್ಥಿತಿ ಜವಾಬ್ದಾರಿ ತಿಳಿಯಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಕರ್ತವ್ಯ ಜವಾಬ್ದಾರಿ ಸಂಬಂಧದಿಂದಲೇ ರೂಪುಗೊಂಡಿರುತ್ತದೆ. ಜೀವನ ಚೈತನ್ಯ ಸಂಬಂಧಗಳನ್ನ ಗೌರವಿಸುವಂತಾಗಬೇಕೆಂದರು.
ಸಮಾಜ ವಿಭಾಗದ ಸಂಚಾಲಕರಾದ ಡಾ ಆರ್.ಪುಟ್ಟರಾಜು ಮಾತನಾಡಿದರು.

           ಪ್ರಾಚಾರ್ಯರಾದ ಡಾ ಎಂ.ಎಸ್.ನರಸಿಂಹನ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ಈ ಕಾಲೇಜಿನ ಪ್ರಾಚಾರ್ಯರುಗಳಾದ ಬಿ.ಕೆ.ಶಿವಣ್ಣ, ಪ್ರೊ.ಕಲ್ಲಪ್ಪ, ಕೋದಂಡಸ್ವಾಮಿ ಇವರುಗಳು ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದು,ಈ ಕಾಲೇಜಿನ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿರುತ್ತಾರೆ. ವಿಜ್ಞಾನ ಮತ್ತು ಸಮಾಜವನ್ನ ನಿರ್ಣಯಿಸುವ ಕಾಲಘಟ್ಟದಲ್ಲಿದ್ದು ಭೌತಿಕ ಸಂಪನ್ಮೂಲದ ಬೆಲೆ ಹೆಚ್ಚಾಗುತ್ತಿದ್ದು, ಸಮಾಜ ವಿಜ್ಞಾನಗಳ ಸಿಂಚನ ಇಲ್ಲದೆ ದ್ವೇಷ, ಅಶಾಂತಿ, ಅಸಹನೆ ಹೆಚ್ಚಾಗುತ್ತಿದೆ. ಸಾಮಾಜಿಕ ಆರೋಗ್ಯ ಸ್ವಾದಕ್ಕೆ ಧಕ್ಕೆ ಉಂಟಾಗುತ್ತಿದೆ. ಸಮಾಜ ವಿಜ್ಞಾನವನ್ನ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

         ಮುಖ್ಯ ಅತಿಥಿಯಾಗಿದ್ದ ಸಹ ಪ್ರಾಧ್ಯಾಪಕರಾದ ಡಾ.ಟಿ.ನಿಂಗಯ್ಯ, ವಿದ್ಯಾರ್ಥಿಗಳಾದ ಉಮಾರಾಣಿ, ಯಶಸ್ವಿನಿ, ಪ್ರಿಯದರ್ಶಿನಿ, ಭಾರತಿ, ಪ್ರೊ.ರವಿಕುಮಾರ್, ಡಾ ಎಂ.ಗೋವಿಂದರಾಯ್, ಡಾ.ಲಕ್ಷ್ಮೀನರಸಮ್ಮ, ಪ್ರೊ.ವಿಶ್ವೇಶ್ವರಯ್ಯ, ಗ್ರಂಥಪಾಲಕರಾದ ಮಮತಾ, ಪ್ರೊ.ಚಂದ್ರಶೇಖರಯ್ಯ, ಪ್ರೊ.ಕೃಷ್ಣ, ಪ್ರೊ.ವನಜಾ, ಮೈಲಾರಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap