ದೊಡ್ಡರಂಗೇಗೌಡ ಏನೇ ಆಗಿದ್ದರೂ ತುಮಕೂರೇ ಕಾರಣ!

ತುಮಕೂರು :

     ಇಂದು ನನಗೆ ಪದ್ಮಶ್ರೀ, ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ…, ಹೀಗೆ ಯಾವುದೆಲ್ಲ ಪದವಿ, ಪುರಸ್ಕಾರಗಳು ದೊರೆತಿದ್ದರೂ, ಅದಕ್ಕೆ ನನ್ನ ತವರು ಜಿಲ್ಲೆ ತುಮಕೂರಿನ ನಾಣ್ಣುಡಿ, ನುಡಿಗಟ್ಟುಗಳು ಕಾರಣ. ನನ್ನ ಸಾಹಿತ್ಯ ರಚನೆಯ ಹಿಂದೆ ಜಿಲ್ಲೆಯ ಸಂಸ್ಕøತಿ ಸೊಗಡಿನ ಪ್ರಭಾವ ಹೆಚ್ಚಿದೆ ಎಂದು 86ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

      ನಗರದ ಕುಂಚಿಟಿಗ ಒಕ್ಕಲಿಗರ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರುಇತ್ತೀಚಿನ ದಿನಗಳಲ್ಲಿ ಸ್ನೇಹ, ವಿಶ್ವಾಸಕ್ಕೆ ಬೆಲೆ ಇಲ್ಲದಂತಾಗಿದ್ದು, ಸಂಬಂಧಗಳು ಶಿಥಿಲವಾಗುತ್ತಿವೆ. ಅವನು, ಅವಳು ಮೊಬೈಲ್ ಎನ್ನುವಂತಾಗಿದ್ದು ಜಾತಿ, ಮತ, ಧರ್ಮದ ಹೆಸರಿನಲ್ಲಿ ಹಲವು ತಾರತಮ್ಯಗಳನ್ನು ಕಾಣುತ್ತಿದ್ದು, ಹಲವು ಏಳುಬೀಳಿಗೆ ಕಾರಣವಾಗಿದೆ. ನಾವೆಲ್ಲಾ ಮನುಷ್ಯರು ಎಂಬುದನ್ನು ಮರೆತು ಮೃಗೀಯ ವರ್ತನೆ ತೋರುತ್ತಿದ್ದು, ನಮ್ಮ ಮನೆಯವರೇ ನಮಗೆ ಪರಕೀಯರಾಗುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಹಿಂದುಳಿದವರು ಎನಿಸಿಕೊಳ್ಳಲು ಹೋರಾಟಗಳು ನಡೆಯುತ್ತಿದ್ದು, ಅವಕಾಶಗಳನ್ನು ಸದ್ಬಳಕೆ ಮಾಡಿ ಮುಂದುವರಿಯಬೇಕಿದೆ ಎಂದರು.

      ಜಿಲ್ಲೆಯ ಚಿತ್ರಣವನ್ನೊಳಗೊಂಡ ಮಧ್ಯವರ್ತಿ ಹೆಸರಿನ ಕಥಾ ಸಂಕಲವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದ ದೊಡ್ಡರಂಗೇಗೌಡರು ನನ್ನ ಜಿಲ್ಲೆ ತುಮಕೂರಿಗೆ ಭೇಟಿಕೊಡುವುದೆಂದರೆ ನನಗೆ ಎಲ್ಲಿಲ್ಲದ ಸಂತಸ. ನನ್ನ ಮೊಟ್ಟಮೊದಲ ಕಾದಂಬರಿ ಸಿದ್ದವಾಗಿದ್ದು ಇದೇ ನೆಲದಲ್ಲಿ, ನನ್ನ ಗುರುಗಳಾದ ಪ್ರೊ.ಹೆಚ್.ಜಿ.ಸಣ್ಣಗುಡ್ಡಯ್ಯ, ಪ್ರೊ.ಎಸ್.ಜಿ.ಸಿದ್ದಲಿಂಗಯ್ಯ, ಹಾಗೂ ಕವಿ ವಿ. ಚಿಕ್ಕವೀರಯ್ಯ ಅವರನ್ನು ಮರೆಯಲು ಸಾಧ್ಯವೇ ಇಲ್ಲ.ಅವರೆಲ್ಲರ ಪ್ರೀತಿಯೇ ನಾನು ಜನಮುಖಿ ಗೀತೆಗಳನ್ನು ರಚಿಸಲು ಕಾರಣವಾಯಿತು ಎಂದು ಹೇಳಿ 86ನೇ ಸಮ್ಮೇಳನಾಧ್ಯಕ್ಷನಾದ ಮೇಲೆ ಹೊರಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಭಿನಂದನಾ ಸಮಾರಂಭ ಅದು ತುಮಕೂರಿನ ಕುಂಚಿಟಿಗ ಒಕ್ಕಲಿಗ ವಿದ್ಯಾಭಿವೃದ್ಧಿ ಸಂಘದ್ದು ಎಂದು ಡಾ.ದೊಡ್ಡರಂಗೇಗೌಡರು ಹರ್ಷ ವ್ಯಕ್ತಪಡಿಸಿದರು.

ಕುಂಚಿಟಿಗರು ಸಂಸ್ಕøತಿ, ಪ್ರಿಯರು, ಸೌಜನ್ಯಶೀಲರು : ಡಾ.ಸಿ.ಸೋಮಶೇಖರ್

     ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಡಿನಾಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಪ್ರಕೃತಿಯನ್ನೇ ತನ್ನ ಕಾವ್ಯದ ವಸ್ತುವಾಗಿಸಿಕೊಂಡ ಡಾ.ದೊಡ್ಡರಂಗೇಗೌಡ ಅವರನ್ನು ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ, ಸ್ಥಾನಮಾನಗಳು ಹರಸಿಕೊಂಡು ಬರುವಂತಾಗಿದೆ ಎಂದು ಹೇಳಿ ಪಲ್ಲವರು ವಂಶಜರಾದ ಕುಂಚಿಟಿಗರು ಸಂಸ್ಕøತಿಪ್ರಿಯರು ಸೌಜನ್ಯಶೀಲರು ಎಂದು ಬಣ್ಣಿಸಿದರು.

     ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಚಟಿಗ ವಿದ್ಯಾಭಿವೃದ್ದಿ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜು ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 1946ರ ಫೆಬ್ರವರಿ 07 ರಂದು ಜನಿಸಿದ ಡಾ.ದೊಡ್ಡರಂಗೇ ಗೌಡರು,ಈ ಜಿಲ್ಲೆಯ ಹೆಮ್ಮೆಯ ಮತ್ತು ಸ್ವಾಭಿಮಾನದ ಪ್ರತೀಕ. ಸಾಹಿತ್ಯ, ಗೀತರಚನೆಯ ಜೊತೆಗೆ ಬಹುಮುಖ ಪ್ರತಿಭೆ.ಇವರು ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.

      ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಪ್ರೊ.ಎಚ್.ಎಸ್.ಶೇಷಾದ್ರಿ, ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಕೆ.ಚಂದ್ರಣ್ಣ, ಕುಂಚಿಟಿಗ ಒಕ್ಕಲಿಗ ಸಂಘದ ಗೌರವಾಧ್ಯಕ್ಷ ಆರ್.ದೊಡ್ಡಲಿಂಗಪ್ಪ, ಕಾರ್ಯದರ್ಶಿ ಬಿ.ಕೆ.ದೊಡ್ಡವೀರಯ್ಯ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ, ವೆಂಕಟಗಿರಿಯಪ್ಪ, ಮಹಿಳಾ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. ಸಮಾಜದ ಮುಖಂಡರು, ಸಾರ್ವಜನಿಕರು ನಿಯೋಜಿತ ಸಮ್ಮೇಳನಾಧ್ಯಕ್ಷರಿಗೆ ಇದೇ ವೇಳೆ ಗೌರವ ಅರ್ಪಿಸಿದರು.

ದೊಡ್ಡರಂಗೇಗೌಡರು ಬತ್ತದ ಚಿಲುಮೆ :

      ರೆಡ್‍ಕ್ರಾಸ್ ರಾಜ್ಯ ಸಭಾಪತಿ ಹಾಗೂ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ ದೊಡ್ಡರಂಗೇಗೌಡರು ಬತ್ತದ ಚಿಲುಮೆ, ಅವರ ಲೇಖನಿ ಜೀವನದಿಯಂತೆ ಸದಾ ಸಾಹಿತ್ಯ ಬರವಣೆಗೆಯಲ್ಲಿ ತೊಡಗಿಕೊಂಡಿರುತ್ತದೆ. ಸಮ್ಮೇಳನಾಧ್ಯಕ್ಷರಾದ ಗೌಡರನ್ನು ಸನ್ಮಾನಿಸುವ ಮೂಲಕ ಕುಂಚಿಟಿಗ ಸಂಘದವರು ಸಾಹಿತಿ, ಕಲಾವಿದರನ್ನು ಸತ್ಸಂಪ್ರದಾಯವನ್ನು ಮುಂದುವರಿಸಿಒದ್ದಾರೆ.ದೊರಂಗೌ ಸಾಧನೆ ಹಿರಿದಾದುದು. ಅಂತೆಯೇ ಜನಮುಖಿ ಸೇವೆ ಮಾಡುವ ಅಧಿಕಾರಿಗಳ ಕೊರತೆ ಇರುವ ಈ ಸಂದರ್ಭದಲ್ಲಿ ಡಾ.ಸಿ.ಸೋಮಶೇಖರ್ ಜಿಲ್ಲಾಧಿಕಾರಿಗಳಾಗಿದ್ದಾಗ ಜನಾನುರಾಗಿಯಾಗಿದ್ದರು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link