ರಾಜ್ಯದ 135 ಹೊಸ ಕೊರೋನಾ ಪ್ರಕರಣಗಳಲ್ಲಿ 116 ಹೊರ ರಾಜ್ಯ, 2 ಹೊರ ದೇಶದಿಂದ ಬಂದವರು

ಬೆಂಗಳೂರು

     ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 135 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ಪೈಕಿ 116 ಮಂದಿ ಹೊರ ರಾಜ್ಯ ಹಾಗೂ ಇಬ್ಬರು ಹೊರ ದೇಶಗಳಿಂದ ಬಂದವರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

     ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬರುಗಿ 28, ಯಾದಗಿರಿ 16, ಹಾಸನ 15, ಬೀದರ್ 13, ದಕ್ಷಿಣ ಕನ್ನಡ 11, ಉಡುಪಿ, ಹಾಗೂ ಬೆಂಗಳೂರು ನಗರದಲ್ಲಿ ತಲಾ 6 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2418ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 1588 ಸಕ್ರಿಯ ಪ್ರಕರಣಗಳಾಗಿವೆ. 14 ಮಂದಿ ಐಸಿಯುನಲ್ಲಿದ್ದು, ಇಂದು 17 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 781ಕ್ಕೆ ಏರಿಕೆಯಾಗಿದೆ ಎಂದರು.

    ಮಂಗಳವಾರ ಒಂದೇ ದಿನ 12,694 ಪರೀಕ್ಷೆಗಳನ್ನು ನಡೆಸಲಾಗಿದ್ದು, ದಿನೇ ದಿನೇ ಪರೀಕ್ಷೆಗಳ ಪ್ರಮಾಣ ಹೆಚ್ಚಾಗುತ್ತಿದೆ. ಇವತ್ತು 60ನೇ ಪ್ರಯೋಗಾಲಯಕ್ಕೆ ಅನುಮತಿ ದೊರೆತಿದ್ದು, ಈ ಲ್ಯಾಬ್ ಎರಡು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮೇ ಅಂತ್ಯಕ್ಕೆ 60 ಪ್ರಯೋಗಾಲಯ ಆರಂಭಿಸುವ ಗುರಿಯನ್ನು ಅವಧಿಗೆ ಮುನ್ನವೇ ಸಾಧಿಸಿ ತೋರಿಸಿದ್ದೇವೆ. ಮೊದಲ ಪ್ರಯೋಗಾಲಯ ಫೆಬ್ರವರಿ 1 ರಂದು ಆರಂಭವಾಗಿತ್ತು ಎಂದರು.

    ಇಂದು ಮೂವರು ಮೃತಪಟ್ಟಿದ್ದಾರೆ. ಯಾದಗಿರಿಯ 69 ವರ್ಷದ ಮಹಿಳೆಯಾಗಿದ್ದು, ಇವರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಬೀದರ್ ನ 49 ವರ್ಷದ ನಿವಾಸಿಗೆ ಮೊದಲಿನಿಂದಲೂ ಉಸಿರಾಟದ ಸಮಸ್ಯೆ ಇತ್ತು. ವಿಜಯಪುರದ 80 ವರ್ಷದ ವ್ಯಕ್ತಿ ಸಹ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಶ್ವಾಸಕೋಶ ಸಮಸ್ಯೆ, ಮದುಮೇಹದಿಂದಲೂ ಇವರು ಬಳಲುತ್ತಿದ್ದರು ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link