ದಾವಣಗೆರೆ:
ಜಗತ್ತಿನಾದ್ಯಾಂತ ಕೊರೋನಾ ಸಾಂಕ್ರಾಮಿಕ ವೈರಸ್ ನಿಂದ ಜನರು ತೊಂದರೆಗೊಳಗಾದ್ದು ದೇಶದಲ್ಲಿಲಾಕ್ ಡೌನ್ ಕಾರಣದಿಂದ ದಿನಗೂಲಿ ನೌಕರರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದವರು, ಬಡವರು ತೀವ್ರ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹರಿಹರ ಶಾಸಕರಾದ ಎಸ್ ರಾಮಪ್ಪನವರು
ಹರಿಹರದ ಪ್ರಶಾಂತ್ ನಗರ ಮತ್ತು ಮಹಾತ್ಮ ಗಾಂಧಿ ನಗರದಲ್ಲಿ ವಾಸಿಸುವ ನಿರ್ಗತಿಕರಿಗೆ ಮತ್ತು ದಾವಣಗೆರೆ ನಗರದಲ್ಲಿ ಸಮಾಜದ ಯುವಕರು ಮತ್ತು ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ರವರು ಆಯೋಜಿಸಿದ್ದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರ ಮುಖಾಂತರ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿತ್ತಾ ಮಾತನಾಡಿದ ಶ್ರೀಗಳು ಇಡೀ ದೇಶ ಬಿಕ್ಕಟ್ಟಿಗೆ ಸಿಲುಕಿದೆ ಹಾಗಾಗಿ ಜನ ಪ್ರತಿನಿಧಿಗಳು, ಸ್ಥಿತಿವಂತರು, ಉಳ್ಳವರು ತೊಂದರೆಗೆ ಸಿಲುಕಿದವರ ನೆರವಿಗೆ ಉದಾರ ಮನಸ್ಸಿನಿಂದ ಮುಂದೆ ಬರಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
