ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ.? ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಸರಕಾರದ ಜನ ವಿರೋಧಿ ನಡೆ ಕುರಿತ ಗೀತೆಗಳುಳ್ಳ ಆಡಿಯೋ-ವಿಡಿಯೋ ಸಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು,ದೇಶದಲ್ಲಿ ಅತಿ ದೊಡ್ಡ ಬಹುಮತ ಇರುವ ಸರ್ಕಾರ ಇದೆ.ಇದು ಜನ ರು ಕೊಟ್ಟ ತೀರ್ಪು.ನಾವು ಅದರ ಬಗ್ಗೆ ಮಾತನಾಡುವುದಿಲ್ಲ.ಆದರೆ ಸರ್ಕಾರ ನುಡಿದಂತೆ ನಡೆ ಯಿತಾ? ಕೊಟ್ಟ ಮಾತು ಉಳಿಸಿಕೊಂಡಿತಾ? ಈ ದೇಶಕ್ಕೆ ಆದ ಲಾಭ ಏನು? ಹಿಂದೆ ಆರ್ಥಿಕ ತಜ್ಞರು ಪ್ರಧಾನ ಮಂತ್ರಿಯಾಗಿದ್ದಾ ಗ ದೇಶ ಹೇಗಿತ್ತು? ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷ ಆಯ್ತು.ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ? ಜನರಿಗೆ ಅವರು ಉದ್ಯೋಗ ಕೊಟ್ಟರಾ? ಕಪ್ಪು ಹಣ ತಂದರಾ? ರಾಜ್ಯದಲ್ಲಿ ಶಾಂತಿ ಕಾಪಾಡಿದರಾ? ದೇಶದ ಗಡಿ ಉಳಿಸಿಕೊಂಡರಾ? ದೇಶದ ಐಕ್ಯತೆ,ಸಮಗ್ರತೆ,ಶಾಂತಿ ಉಳಿಸಿಕೊಂಡರಾ? ರೈತ ಉಳಿದನಾ? ಕಾರ್ಮಿ ಕ ಉಳಿದನಾ? ಇದರ ಬಗ್ಗೆ ಬಿಜೆಪಿ ಸ್ನೇಹಿತರು ಉತ್ತರಿಸಬೇಕು.
ನಾನು ಪ್ರಕೃತಿ ನಿಯಮದಲ್ಲಿ ನಂಬಿಕೆ ಇಟ್ಟವನು.ಇಡೀ ಪ್ರಪಂಚ,ಮನುಕುಲ ನರಳುತ್ತಿದೆ.ಇಂತಹ ಸಂದರ್ಭ ದಲ್ಲಿ ಜನರನ್ನು ಕಾಪಾಡದ ಸರ್ಕಾರ ನಮಗೆ ಬೇಕೇ? ಶಾಲೆಗೆ ಹೋಗುವ ಚಿಕ್ಕ ಮಕ್ಕಳು,ಅವರ ಪೋಷಕರು ಆತಂಕ ಪಡುವಂತಾಗಿದೆ.ಈ ದೇಶದಲ್ಲಿ ಶಾಂತಿ ಕಾಪಾಡಿ,ಅಭಿವೃದ್ಧಿ ಮಾಡಬೇಕು.ಜನರ ಬದುಕಿನ ಬಗ್ಗೆ ಕಾಳ ಜಿ ವಹಿಸಿ,ನಾವೆಲ್ಲರೂ ಕೆಲಸ ಮಾಡಬೇಕು.ಚುನಾವಣಾ ಅಧಿಸೂಚನೆ ಇನ್ನೂ ಬಿಡುಗಡೆ ಆಗಿಲ್ಲ.ಅದಕ್ಕಾಗಿ ನಾವು ಕಾಯುತ್ತಿದ್ದೇವೆ.ಅದಾದ ನಂತರ 14 ನೇ ತಾರೀಖು ರಾಜರಾಜೇಶ್ವರಿ ನಗರ ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ.15 ರಂದು ಶಿರಾದಲ್ಲಿ ನಾವೆ ಲ್ಲರೂ ಹೋಗಿ ನಾಮಪತ್ರ ಸಲ್ಲಿಸುತ್ತೇವೆ.ಎರಡೂ ಕಡೆ ನಾನು ಹಾಗೂ ಸಿಎಲ್ ಪಿ ನಾಯಕರಾದ ಸಿದ್ದರಾಮ ಯ್ಯನವರು ಇರುತ್ತಾರೆ.
ನನಗೆ ರಾಜೇಶ್ ಗೌಡ ಯಾರೂ ಅಂತಾನೆ ಗೊತ್ತಿಲ್ಲ.ರಾಜಣ್ಣ ಅವರು ಜಯಚಂದ್ರ ಅವರ ಹೆಸರು ಪ್ರಸ್ತಾಪ ಮಾಡಿದರು.ಪರಮೇಶ್ವರ್ ಅವರು ಅದಕ್ಕೆ ಒಪ್ಪಿದರು.ನಾವೆಲ್ಲ ಒಮ್ಮತದಿಂದ ಒಂದೇ ಅಭ್ಯರ್ಥಿ ಹೆಸರನ್ನು ಹೈಕಮಾಂಡ್ ಗೆ ರವಾನಿಸಿದೆವು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ರಾಜರಾಜೇಶ್ವರಿ ನಗರ ಸೇರಿದಂತೆ ವಿಧಾನಸಭೆ,ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಮಾಡು ವಾಗ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆ ಚರ್ಚಿಸಿ ಅಂತಿಮಗೊಳಿಸಲಾಗಿದೆ.
ನಾನು ಭ್ರಷ್ಟನೋ ಅಥವಾ ತತ್ವಜ್ಞಾನಿಯೋ ಎಂಬುದನ್ನು ಸಿ.ಟಿ ರವಿ ಅವರು ಜನರ ಮುಂದೆ ಇಡಲಿ.ನನ್ನ ವಿರುದ್ಧ ಎಷ್ಟು ತನಿಖೆಯಾಗಿದೆ? ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದೆ ಇಡಲಿ.ಅವರ ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷರಾದ ಬಂಗಾರು ಲಕ್ಷ್ಮಣ್ ಸೇರಿದಂತೆ ಎಷ್ಟು ಜನ ನಾಯಕರು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದರು.ಅವರ ಆಸ್ತಿಪಾಸ್ತಿಗಳೆಷ್ಟು ಎಂಬುದನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.ಸಿ.ಟಿ.ರವಿ ಬಿಜೆಪಿಯ ರಾಷ್ಟ್ರೀಯ ನಾಯಕರಾಗಿದ್ದಾರೆ.ಅವರರೂ ಸೇರಿದಂತೆ ಕೆಲವರಿಗೆ ನನ್ನ ಹೆಸರು ಹೇಳಿದರೆ ಮಾರ್ಕೆಟ್ ಸಿಗುತ್ತದೆ,ಹೀಗಾಗಿ ನನ್ನ ಬಗ್ಗೆ ಮಾತನಾಡುತ್ತಾರೆ.ಮಾತಾಡಿಕೊಳ್ಳಲಿ ಬಿಡಿ.ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಲೇವಡಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
