ಹಾವೇರಿ:
ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಜುಲೈ16, ಮಂಗಳವಾರ ದಿವಸ ಬೆಳಿಗ್ಗೆ 11 ಗಂಟೆಗೆ ಗುರುಪೂರ್ಣಿಮಾ ಮಹೋತ್ಸವ ಹಾಗೂ ಬ್ರಹ್ಮಲೀನ ಜಗದ್ಗುರು ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯಾರಾಧನೆ ಮತ್ತು ನೂತನ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಜರುಗಲಿದೆ.
ಪ್ರತಿ ವರ್ಷದಂತೆ ಈ ವರ್ಷದ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯ ಕುರುಬ ಸಮಾಜ ಬಾಂಧವರು ಸೇವಾರ್ಥಿಗಳಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೆಳಗಿನ ಜಾವ 5 ಗಂಟೆಗೆ ಶ್ರೀ ಮಠದ ದೇವಾನುತೇವತೆಗಳಾದ ಶ್ರೀ ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ,ಭಕ್ತ ಕನಕದಾಸ ಹಾಗೂ ಬ್ರಹ್ಮಲೀನ ಜಗದ್ಗುರುಗಳ ಅಧಿಷ್ಠಾನ ರುದ್ರಾಭೀಷೇಕ ಪೂಜಾ ಕಾರ್ಯ ನಡೆಯಲಿದೆ.
ನಂತರ ಶ್ರೀಮಠದ ಅಹಲ್ಯಬಾಯಿ ಹೊಲ್ಕರ್ ಸಭಾಂಗಣದಲ್ಲಿ ಪಾವನ ಸಾನಿಧ್ಯ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಆಶಿನರಾಗಲಿದ್ದು, ದಿವ್ಯ ಸಾನಿಧ್ಯ ಕಲ್ಲೋಡ ಶಾಖಾಮಠದ ಶ್ರೀ ಈಶ್ವರಾನಂದಪುರಿ ವಹಿಸಲಿದ್ದು, ಸಾನಿಧ್ಯವನ್ನು ಕೆ.ಆರ್ ನಗರದ ಶಾಖಾಮಠದ ಶ್ರೀ ಶಿವಾನಂದಪುರಿ, ಸಮ್ಮುಖ ತಿಂಥಣಿ ಶಾಖಾಮಠದ ಸಿದ್ಧರಾಮನಂದಪುರಿ, ನೇತೃತ್ವ ಕುರುಬರ ಜಡೆದೇವರಮಠದ ಅಮೋಘ ಸಿದ್ಧೇಶ್ವರಾನಂದರು ಭಾಗವಹಿಸಲಿದ್ದಾರೆ.
ಈ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಕುರುಬ ಸಮಾಜ ಬಾಂಧವರು, ಜನಪ್ರತಿನಿಧಿಗಳು, ಗಣ್ಯಮಾನ್ಯರು ಮುಖಂಡರು, ಕನಕಾಭಿಮಾನಿಗಳು ಕುರುಬ ಸಮಾಜದ ವಿವಿಧ ಸಂಘಟನೆ ಸರ್ವರು ಹಾಗೂ ಸಮಸ್ತ ಕನಕಭಕ್ತಾಧಿಗಳು ಸಮಾರಂಭಕ್ಕೆ ಆಗಮಿಸ ಬೇಕೆಂದು ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಮಾರುತಿ ಹರಿಹರ, ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜೀಗೌಡ್ರ ಜಂಟಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.