ಹರಿಹರ:
ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆ ಹಾಗೂ ಪ್ರಥಮ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಶಾಸಕ ಎಸ್ ರಾಮಪ್ಪ ಚಾಲನೆ ನಿಡಿದರು.ಶಾಸಕರು ಪಾಲ್ಗೊಂಡಿದ್ದು ಟಿಪ್ಪು ಕೇಶವನಗರ,ಪಟೇಲ್ ಬಡಾವಣೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಮುಗಿದ ನಂತರ ಅಲ್ಲಿನ ನಿವಾಸಿಗಳ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು.ಬಡಾವಣೆಗಳಲ್ಲಿನ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಚರಂಡಿ ರಸ್ತೆ, ಹಾಗೂ ಶೌಚಾಲಯ ಇನ್ನಿತರ ಸಮಸ್ಯೆಗಳನ್ನು ಆಲಿಸಿ ನಂತರ ಸ್ಥಳದಲ್ಲಿಯೇ ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸುವಂತೆ ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಮೂರು ಬಡಾವಣೆಗಳನ್ನು ವೀಕ್ಷಿಸಿ ಅಲ್ಪಸಂಖ್ಯಾತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು,ಈ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ಸಚಿವರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನವನ್ನು ನಗರಕ್ಕೆ ತರುವಲ್ಲಿ ಪ್ರಯತ್ನಿಸುವುದಾಗಿ ಆ ಭಾಗದ ನಿವಾಸಿಗಳಿಗೆ ಆಶ್ವಾಸನೆ ನೀಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರಿಗೆ ಯಾವುದೇ ಗುರುತರವಾದ ಸೌಲಭ್ಯ ನೀಡದೆ ಬರೀ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸೈನ್ಯದ ವಿಷಯದಲ್ಲಿ ನಡೆದಿರುವ ವಿಜಯವನ್ನು ತಮ್ಮದೇ ವಿಜಯವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ದೇಶದ ಇನ್ನಿತರೆ ಯಾವುದೇ ವಿಚಾರಗಳಲ್ಲಿ ಇಂದಿನ ಸರ್ಕಾರ ಎಂದು ಹೇಳದೇ ತಾವೇ ಕೈಗೊಂಡಿದ್ದೇವೆ ಎಂದು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಅಲ್ಲಿನ ನಿವಾಸಿಗಳಿಗೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪೌರಾಯುಕ್ತ ಎಸ್.ಲಕ್ಷ್ಮಿ ,ಎಂಜಿನಿಯರ್ಗಳಾದ ಎಸ್.ಎಸ್.ಬಿರಾದಾರ,ಎಚ್. ಟಿ.ನೌಶಾದ್,ಮಹೇಶ್ ಕೋಡಬಾಳ್,ಹಿರಿಯ ಆರೋಗ್ಯ ನಿರೀಕ್ಷ ಕರುಗಳಾದ , ಸಂತೋಷನಾಯಕ್,ಕೋಡಿಭೀಮರಾಯ, ಸಿಬ್ಬಂದಿಗಳಾದ ಡಿ.ಬಸವರಾಜ್, ಕುಮಾರ್, ನಗರಸಭೆ ಸದಸ್ಯಕೆ.ಮರಿದೇವ, ಮುಖಂಡರುಗಳಾದ ,ರೆಹಮಾನ್, ಅನ್ವರ್ ಸಾದಿಕ್, ರಹಮತ್ತುಲ್ಲಾ,ಅಮ್ಜಾದ್, ಅಬ್ದುಲ್ ಖಲೀಲ್, ಮುಬಾರಕ್, ದೂಡಾ ಮಾಜಿ ಸದಸ್ಯ ಜಿ.ವಿ.ವಿರೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ,ಅಮರಾವತಿ ರೇವಣಸಿದ್ದಪ್ಪ ವಿಜಯಕುಮಾರ್ ಒಂದನೇ ವಾರ್ಡ್ ನ ಅಧ್ಯಕ್ಷ ಎಂ.ಎಸ್.ಆನಂದ್ ಕುಮಾರ್ ಅಲ್ಲದೇ ಇನ್ನೂ ಅನೇಕ ಮುಖಂಡರುಗಳು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








