ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ

ಚಿತ್ರದುರ್ಗ;

        ಮುರುಘಾಮಠದಲ್ಲಿ ನಡೆಯತ್ತಿರುವ ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಕ್ರೀಡಾಕೂಟಕ್ಕೆ ಭಾನುವಾರ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು ಚಾಲನೆ ನೀಡಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಜಯಮ್ಮ ಬಾಲರಾಜ್, ಬಸವಣ್ಣನವರು ಅಂದು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಿದ್ದರು. ಇಂದು ಮುರುಘಾ ಶರಣರು ಮಹಿಳಾ ಕ್ರೀಢಾಕೂಟವನ್ನು ಏರ್ಪಡಿಸಿ ಮಹಿಳೆಯರಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ನೆರವಾಗಿದ್ದಾರೆ ಎಂದರು

       ಇಂದಿಗೂ ನೆಲ ಮತ್ತು ಜಲದ ಹೆಸರುಗಳು ಸ್ತ್ರೀಯರ ಹೆಸರಿನಿಂದಲೇ ಕರೆಯಲ್ಪಡುತ್ತಿವೆ. ಮಹಿಳೆಯರಲ್ಲಿ ಸಾಧಿಸುವ ಶಕ್ತಿ ಅಪಾರವಾಗಿದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನ ಅರಿತು ಎಲ್ಲಾ ಮಹಿಳೆಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

       ಮಹಿಳಾ ಕ್ರೀಢಾಕೂಟದ ದಿವ್ಯಸಾನಿದ್ಯ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು, ಮಹಿಳೆಯರ ಶಕ್ತಿ, ಯುಕ್ತಿ, ಭಕ್ತಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಧ್ವನಿಸುತ್ತಿದೆ. ಶಿಸ್ತು ಮತ್ತು ದಕ್ಷತೆಯಲ್ಲಿ ಮಹಿಳೆಯರು ಪುರುಷರಿಗಿಂತ ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿ.

       ಮಹಿಳಾ ಕ್ರೀಡಾಕೂಟ ಮಹಿಳಯರ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಉತ್ತಮ ಸದಾವಕಾಶ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳಾ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಹಾರೈಸಿದರು.

      ಕ್ರೀಡಾಕೂಟದಲ್ಲಿ 18-30, 31-50, 50 ವರ್ಷ ವಯೋಮಾನದ ಮಹಿಳೆಯರಿಗೆ ಥ್ರೋಬಾಲ್, ಟೆನಿಕಾಯ್ಟ್, ಲೆಮನ್ & ಸ್ಪೂನ್, ರಿಲೇ, ಗುಂಡು ಎಸೆತ, ಗೋಣಿಚೀಲದ ಓಟ, ಮಡಕೆ ಒಡೆಯುವ ಸ್ಪರ್ಧೆ, ಮ್ಯೂಸಿಲ್ ಛೇರ್, ಬಾಲ್ ಇನ್ ದ ಬಕೆಟ್, ಸ್ಪರ್ಶಜ್ಞಾನ ಪರೀಕ್ಷೆ, ಏಕಪಾತ್ರ ಅಭಿನಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ ಸರ್ವೋತ್ತಮ ಕ್ರೀಡಾಪಟುವಿಗೆ ಶರಣೆ ಅಕ್ಕನಾಗಮ್ಮ, ಶರಣೆ ಒನಕೆ ಓಬವ್ವ, ಶರಣೆ ಅಕ್ಕವiಹಾದೇವಿ ಪ್ರಶಸ್ತಿಗಳನ್ನು ನೀಡಲಾಗುವುದು.

        ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ 2018ರ ನಾಗಗೊಂಡನಹಳ್ಳಿ ಚಿಲುಮೆಮಠದ ಬಸವಕಿರಣಸ್ವಾಮಿಜಿ, ಹರಚರ ಗುರುಮೂರ್ತಿಗಳು , ಉತ್ಸವ ಸಮಿತಿ ಕಾರ್ಯಧ್ಯಕ್ಷರಾದ ಪಟೇಲ್‍ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಎಸ್.ಜೆ.ಎಮ್.ವಿದ್ಯಾಪೀಠದ, ಆಡಳಿತ ಮಂಡಳಿ ಸದಸ್ಯರುಗಳು, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ.ಶಾಂತಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಪ್ರೊ.ರೂಪವಿಜಯಕುಮಾರ್ ಸ್ವಾಗತಿಸಿ, ಶ್ರೀಮತಿ.ಗಾಯತ್ರಿ ಶಿವರಾಂ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link