ಶಿಗ್ಗಾವಿ :
ನರೇಂದ್ರ ಮೋದಿಯವರ ಕನಸ್ಸಾದ ಎಲ್ಲರೂ ಸ್ವಾವಲಂಬಿಯಾಗಿ ಬದುಕಬೇಕಾದರೆ ಸರಕಾರದ ಇಂತಹ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸುವರ್ಣಕಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಲನಕರ ಹೇಳಿದರು.
ಪಟ್ಟಣದ ವಿಠಲ ಮಂದಿರದಲ್ಲಿ ನೆಡೆದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಅಭಿವೃದ್ದಿ ಯೋಜನೆಯಡಿಯಲ್ಲಿ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನ ಮಾಡಿ ಮಾತನಾಡಿದ ಅವರು ಇಂದು ನಾವು ಸ್ವಾವಲಂಬಿಯಾಗಿ ಬದುಕಲು ಅನೇಕ ಯೋಜನೆಳಿವೆ ಅದರ ಉಪಯೋಗವನ್ನ ಪಡೆದುಕೊಂಡರೆ ನಮಗೆ ಸರಕಾರದಿಂದ ಅನೇಕ ಸೌಲಭ್ಯಗಳ ಸಿಗುತ್ತವೆ. ಆ ನಿಟ್ಟಿನಲ್ಲಿ ಮೂರು ದಿನದ ತರಬೇತಿ ಕಾರ್ಯಕ್ರಮವನ್ನು ನಾವು ಸಂಘಟಿಸಿದ್ದು ಇದರ ಸದುಪಯೋಗ ಎಲ್ಲರೂ ಪಡೆದುಕೊಂಡು ಯಶಸ್ವಿಗೋಳಿಸಬೇಕೆಂದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪುರಸಭೆ ಸದಸ್ಯರಾದ ವೀಣಾ ಕುರ್ಡೇಕರ್, ಪ್ರಕಾಶ ವೇರ್ಣೇಕರ, ದಿವಾಕರ ವೇರ್ಣೇಕರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ನಾಗೇಶ ವೇರ್ಣೇಕರ್, ವಿನಾಯಕ ರಾಯ್ಕರ್, , ಪ್ರಕಾಶ ಪಾಲನಕರ, ವಿಠಲ ಶೇಟ, ನಾಗೇಶ ರಾಯ್ಕರ್, ನಾಗರಾಜ ಶೇಟ, ಸುರೇಶ ರಾಯ್ಕರ್, ವಿಶ್ವನಾಥ ದೈವಜ್ಞ ಉಪಸ್ಥಿತರಿದ್ದರು.
ಮದುರೈ ಗೋಲ್ಡ್ ಸ್ಮೀತ್ ಅಕಾಡೆಮಿಯ ತರಬೇತಿದಾರರಾದ ರಜನಿಕಾಂತ ಹಾಗೂ ಮಣಿವಣ್ಣನ ತರಬೇತಿಯನ್ನು ನೀಡಿದರು. ರಾಮಕೃಷ್ಣ ರಾಯ್ಕರ್ ಸ್ವಾಗತಿಸಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ