ಭಾರತದ ಆರ್ಥಿಕತೆಯಲ್ಲಿ ಸಾಮಾಜಿಕ, ರಾಜಕೀಯ ಅಂಶಗಳೂ ಬೆರೆತಿವೆ – ಪ್ರೊ. ಪಿ ಕಣ್ಣನ್

ದಾವಣಗೆರೆ

        ದಾವಣಗೆರೆ ವಿ.ವಿ, ಆವರಣದಲ್ಲಿ ನಡೆದ ಭಾರತೀಯ ಅರ್ಥಶಾಸ್ತ್ರ-2018, ಸುಸ್ಥಿರ ಅಭಿವೃದ್ಧಿಗೆ ಸಮಸ್ಯೆಗಳು ಮತ್ತು ತಂತ್ರಗಳು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಎರಡು ದಿನದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ ಪ್ರೊ.ಪಿ.ಕಣ್ಣನ್ ಮಾತನಾಡಿದರು.

       ಭಾರತದ ಆರ್ಥಿಕತೆಯಲ್ಲಿ ಸಾಮಾಜಿಕ, ರಾಜಕೀಯ ಅಂಶಗಳೂ ಬೆರೆತಿವೆ. ಹಿಂದಿನ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆ ಇತ್ತು. ಸಂವಿಧಾನದ ರಚನೆಯಾದ ಬಳಿಕ ನಾವು ನಮ್ಮದೇ ನೀತಿ ನಿಯಮಗಳನ್ನು ರೂಪಿಸಿಕೊಳ್ಳಲು ಅವಕಾಶಗಳಿವೆ. ಆದರೆ, ನಾವಿಂದು ಭಾರತೀಯಅರ್ಥಶಾಸ್ರ್ತವನ್ನೇ ಮರೆತಿದ್ದೇವೆ. ಯಾವುದಕ್ಕೆ ಮಹತ್ವ ಕೊಡಬೇಕು ಎಂಬುದರ ಪರಿಕಲ್ಪನೆಯೂ ಇಲ್ಲ. ಭಾರತವನ್ನು ಕಂಡುಹಿಡಿದ ವಾಸ್ಕೋಡಿಗಾಮನನ್ನು ನಾವು ನೆನೆಯುತ್ತೇವೆ. ಆದರೆ ಆತ ತನ್ನ ದೇಶದ ಅಭಿವೃದ್ಧಿಗಾಗಿ ಭಾರತವನ್ನು ಉಪಯೋಗಿಸಿಕೊಂಡ ಎಂಬ ತಿಳುವಳಿಕೆಯೂ ನಮಗಿಲ್ಲ ಎಂದರು.

        ಹಲವಾರು ಅವೈಜ್ಞಾನಿಕ ಕಾರಣದಿಂದಾಗಿ ನಾವಿಂದು ಶೋಷಣೆಗೆ ಒಳಗಾಗುತ್ತಿದ್ದೇವೆ. ಪ್ರತಿಯೊಂದು ಸಿದ್ಧಾಂತದ ಹಿಂದೆ ಅದನ್ನು ಪ್ರತಿಪಾದಿಸಿದ ವ್ಯಕ್ತಿಯ ಬುದ್ಧಿವಂತಿಕೆ ಕೆಲಸ ಮಾಡಿರುತ್ತದೆ. ಆ ಬುದ್ಧಿವಂತಿಕೆ ಮತ್ತು ಅದರ ಮೂಲ ಉದ್ಧೇಶ ನಮಗೆ ಅರ್ಥವಾಗಬೇಕು. ವಿದೇಶಗಳಲ್ಲಿ ಬರಗಾಲವೆಂದರೆ ಅದು ಕೇವಲ ಅಲ್ಲಿಯ ಆರ್ಥಿಕತೆಯ ಸೋಲಾಗುತ್ತದೆ. ಆದರೆ, ಭಾರತದಲ್ಲಿ ಬರಗಾಲವೆಂದರೆ ಅದು ಆರ್ಥಿಕತೆಯೊಟ್ಟಿಗೆ ಸಾಮಾಜಿಕ ಮತ್ತು ರಾಜಕೀಯ ಕಾರಣಗಳನ್ನು ಹೊಂದಿರುವುದು ಖೇದನೀಯ ಎಂದರು.ಆದ ಕಾರಣ ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಜೋತುಬೀಳದೆ ಇಂತಹ ವಿಚಾರಸಂಕಿರಣಗಳಿಂದ ಹೊರಗಿನ ಜ್ಞಾನವನ್ನು ಪಡೆದು ದೇಶದಆರ್ಥಿಕತೆಯೆಡೆಗೆ ಗಮನಹರಿಸಬೇಕುಎಂದು ಕಿವಿಮಾತು ಹೇಳಿದರು.

        ಮುಖ್ಯ ಅತಿಥಿಯಾಗಿ ಕುವೆಂಪು ವಿ.ವಿಯ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಆರ್. ಮಂಜುನಾಥ್ ಪಾಲ್ಗೊಂಡು ಮಾತನಾಡಿ, ಭಾರತದಲ್ಲಿನ ಕೃಷಿ, ಸಾಮಾಜಿಕ ಕ್ಷೇತ್ರಗಳಲ್ಲಿ ಸರ್ಕಾರ ಬಂಡವಾಳ ಹೂಡಬೇಕು. ಆಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಭಾರತದಂಥ ದೊಡ್ಡ ಆರ್ಥಿಕ ವಲಯದಲ್ಲಿ ವಿಪುಲ ಅವಕಾಶಗಳಿವೆ. ಅವುಗಳ ಸದ್ಭಳಕೆಯಿಂದ ನಾವು ಮುನ್ನಡೆಯಬೇಕು. ಜಿ.ಎಸ್.ಟಿ. ಮತ್ತು ಜನ್‍ಧನ್ ಗಳಂತಹ ಯೋಜನೆಗಳಿಂದ ಹಣ ಸೋರಿಕೆ ಕಡಿಮೆಯಾಗಿ ಆರ್ಥಿಕ ವಲಯದಲ್ಲಿ ಬದಲಾವಣೆ ಕಂಡಿದ್ದೇವೆ ಎಂದು ತಿಳಿಸಿದರು. ದಾವಣಗೆರೆ ವಿ.ವಿ ಕಲಾನಿಕಾಯದ ಡೀನ್ ಬಿ.ಪಿವೀರಭದ್ರಪ್ಪ, ಪ್ರೊ.ಎನ್.ಕೆ.ಗೌಡ, ಪ್ರೊ.ರಂಗಪ್ಪ, ಪ್ರೊ. ಸುಚಿತ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಿಥಿಲಾ ಮಮತಾ, ಸಲೀಲಾ ಅಭಿಪ್ರಾಯ ವ್ಯಕ್ತಪಡಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap