ಜಗಳೂರು :
ಬಡ ವರ್ಗದವರಿಗೆ ಇಂದಿರಾ ಕ್ಯಾಂಟಿನ್ ವರದಾನ ವಾಗಲಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು
ಪಟ್ಟಣದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟಿನ್ ನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಕಡಿಮೆ ದರದಲ್ಲಿ ತಿಂಡಿ , ಊಟ ದೊರೆಯುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಹಾಗೂ ಕೂಲಿ ಕಾರರಿಗೆ ಅನುಕೂಲವಾಗಲಿದೆ . ಗುತ್ತಿಗೆ ದಾರರು ಗುಣ ಮಟ್ಟದ ಆಹಾರ ತಯಾರಿಸಿ ಜನತೆಗೆ ನೀಡ ಬೇಕು ಇಲ್ಲದಿದ್ದಾರೆ ನಿಮ್ಮ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. ಶಾಲಾ ಆವರಣದಲ್ಲಿ ಮಾಡುವ ಬದಲು ತಾಲೂಕು ಕಚೇರಿ ಅಥವಾ ಬಸ್ ನಿಲ್ದಾಣದಲ್ಲಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು.
ಹಿಂದುಳಿದ ಜಗಳೂರು ತಾಲ್ಲೂಕಿನ ಜನತೆಯ ಹಿತ ದೃಷ್ಠಿ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಇನ್ನೂಂದು ಇಂದಿರಾ ಕ್ಯಾಂಟಿನ್ ತೆರೆಯುವಂತೆ ಸರಕಾರಕ್ಕೆ ಸಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು. ಶಾಸಕರು ,ತಹಶಿಲ್ದಾರ್ ಸೇರಿದಂತೆ ಚುನಾಯಿತ ಸದಸ್ಯರುಗಳು ಇಂದಿರಾ ಕ್ಯಾಂಟೀನ್‍ನಲ್ಲಿ ತಯಾರಾದ ತಿಂಡಿಯನ್ನು ಸೇವಿಸಿದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ಶ್ರೀಧರ್‍ಮೂರ್ತಿ , ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಂಪಳಮ್ಮ , ಕಿರಿಯ ಅಬಿಯಂತರ ನಾಗರಾಜ್, ಆರೋಗ್ಯ ನಿರಿಕ್ಷಕ ಕಿಫಾಯತ್ , ಪಟ್ಟಣ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಪಾಪಲಿಂಗಪ್ಪ , ರಮೇಶ್, ರವಿಕುಮಾರ್, ಲೂಕ್ಮಾನ್ ಖಾನ್, ಶಕೀಲ್, ಮುಖಂಡರಾದ ಗೌರಿಪುರ ಶಿವಣ್ಣ ,ಹಫಿಜ್,ನಸರುಲ್ಲಾ , ಓಬಳೇಶ್, ಸೆರಿದಂತೆ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ