ದ.ಸ.ಸ ದಿಂದ ಸಾಂಕೇತಿಕ ಧರಣಿ

ಹಾವೇರಿ :

       ಸರ್ಕಾರವೇ ರೂಪಿಸಿರುವ ಕಾಯ್ದೆಯ ವಿರುದ್ದ ಸುಪ್ರೀಂ ಕೋರ್ಟ ಆದೇಶಗಳು ಪ್ರಜಾಪ್ರಭುತ್ವದ ನೆಲೆಗೆ ಪೂರಕ ಎಂಬಂತಿಲ್ಲ. ಶೋಷಿತರ ಹಿತ ಕಾಯಲು ಪಿ.ಟಿ.ಸಿ.ಎಲ್ ಕಾಯ್ದೆಯನ್ನು ಯತಾವತ್ತಾಗಿ ಕಾಪಾಡಬೇಕು ಮತ್ತು ಖಾಸಗಿ ಕ್ಷೇತ್ರಗಳನ್ನೆ ಪ.ಜಾತಿ / ವರ್ಗದವರಿಗೆ ಮೀಸಲಾತಿ ತರಬೇಕೆಂದು ಹಲವಾರು ಹಕ್ಕೊತ್ತಾಯಗಳೊಂದಿಗೆ 2019-20ರ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಪಿ.ಟಿ.ಸಿ.ಎಲ್ ಕಾಯ್ದೆಗೆ ಸುಗ್ರೀವಾಜ್ಞೆ ತರಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದರು ಸಾಂಕೇತಿಕ ಧರಣಿ ಮಾಡಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಲಾಯಿತು.

     ಬಾಬಾಸಾಹೇಬ್ ಅಂಬೇಡ್ಕರರವರು ಈ ದೇಶದ ಭೂಮಿ ರಾಷ್ಟ್ರೀಕರಣವಾಗಬೇಕು ಆಶಿಸಿದರು, ಭೂಮಿಸರ್ಕಾರದ ಅಧೀನದಲ್ಲಿದ್ದು ಕೃಷಿಯನ್ನೆ ರಾಷ್ಟ್ರದ ಕೈಗಾರಿಕೆಯಂದು ಪರಿಗಣಿಸಿ ಎಲ್ಲಾ ಜಾತಿ, ಮತಬೇದವಿಲ್ಲದೇ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಭೂಮಾಲೀಕತ್ವ, ಜೀತಗಾರ, ಶ್ರಮೀಕ ಎನ್ನುವ ಬೇದ ಭಾವವಿಲ್ಲದೇ ರಾಷ್ಟ್ರದ ಉನ್ನತಿಗಾಗಿ ಎಲ್ಲರೂ ಶ್ರಮಿಸುತ್ತಾರೆಂದಿದ್ದಾರೆ. ನಮ್ಮ ಸಂವಿದಾನದಲ್ಲಿಯೂ ಸಮಾನ ಹಕ್ಕು ಅಧಿಕಾರದ ಬಗ್ಗೆ ಪ್ರಸ್ತಾವನೆಯಲ್ಲೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟಗಳು ಸಾಗಬೇಕಾಗಿದೆ.

      ಕರ್ನಾಟಕ ಪ.ಜಾತಿ / ವರ್ಗ ಭೂ ಪರಬಾರ ನಿಶೇದ ಕಾಯ್ದೆಯ (ಪಿ.ಟಿ.ಸಿ.ಎಲ್)ವಿರುದ್ದ ಸುಪ್ರೀಂ ಕೋರ್ಟ ನೀಡಿರುವ ಆದೇಶದ ವಿರುದ್ದ ರಾಜ್ಯ ಸರ್ಕಾರ ಕೂಡಲೇ ಸುಗ್ರಿವಾಜ್ಞೆ ತಂದು ಸುಪ್ರೀಂ ಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಲೇಬೇಕು.ನ್ಯಾ|| ಎ.ಜೆ. ಸದಾಶೀವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಶೀಫಾರಸ್ಸು ಮಾಡಬೇಕು.

        ಕರ್ನಾಟಕ ಭೂ ಮಂಜೂರಾತಿ ಕಾಯ್ದ 1969 ರ ಪ್ರಕಾರ ಪ.ಜಾತಿ/ವರ್ಗಗಳಿಗೆ ಶೇ 50% ಭೂಮಿಯನ್ನು ಈಗ ಹಾಲಿ ವಿಲೆ ಇರುವ ಭೂಮಿಯಲ್ಲಿ ಕಾಯ್ದಿರಿಸಿ ಮಂಜೂರಾತಿ ಮಾಡಲೇ ಬೇಕು.ರಾಜ್ಯದ ಪ್ರತಿ ಗ್ರಾಮಗಳಲ್ಲೂ ಪ.ಜಾತಿ/ವರ್ಗಗಳಿಗೆ ನಿವೇಶನಕ್ಕೆ ಸ್ಮಶಾನಕ್ಕೆ ನಿಯಮಾನುಸಾರ ಭೂಮಿ ಮೀಸಲಿಟ್ಟು, ದಲಿತರು ವಾಸವಿರುವ ಎಲ್ಲಾ ಗ್ರಮಗಳನ್ನು ಕಂದಾಯ ಗ್ರಾಮವೆಂದು ಧಾಖಲಿಸಲೇ ಬೇಕು.ಪ.ಜಾತಿ / ವರ್ಗಗಳಿಗೆ ಸಂವಿಧಾನ ಭದ್ದವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ಇರುವಂತೆ ಖಾಸಗೀ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಖಾಸಗೀ ಕ್ಷೇತ್ರದಲ್ಲೂ ಪ.ಜಾತಿ / ವರ್ಗಗಳಿಗೆ ಮೀಸಲಾತಿ ಕಲ್ಪಿಸುವಂತಹ ಕಾಯದೆ ರೂಪಿಸಬೇಕು.

       ಭೂಮಂಜೂರಾತಿಯಲ್ಲಿ ಶೇ 50 ಭೂಮಿಯನ್ನು ಪ.ಜಾತಿ / ವರ್ಗಗಳಿಗೆ ಮೀಸಲಿಟ್ಟು ಮಂಜೂರು ಮಾಡಬೇಕೆಂದಿದ್ದರೂ ಬಗರ ಹುಕುಂ ಸಾಗುವಳಿ ಸಕ್ರಮೀಕರಣ ಸಂದರ್ಭದಲ್ಲಿ ಈ ನಿಯಮ ಪಾಲಿಸದೇ ದಲಿತರ ಅರ್ಜಿಗಳನ್ನೇ ವಜಾ ಮಾಡಿರುವುದನ್ನು ಪುನರ್ ಪರಿಶೀಲಿಸಲು ಸರ್ಕಾರ ವಿಶೇಷ ನಿಯಮ ರೂಪಿಸಿ ಭೂ ಮಂಜೂರಾತಿಯಲ್ಲಿ ಪ.ಜಾತಿ / ವರ್ಗಗಳು ಭೂ ಹೀನರಾಗದಂತೆ ಎಲ್ಲಾಕುಟುಂಬಗಳಿಗೂ 5ಎಕರೆ ಭೂಮಿ ನೀಡಲೇ ಬೇಕು.ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ / ವರ್ಗಗಳ ವಿದ್ಯಾರ್ಥಿಗಳ ವೇತನವನ್ನು ಹೆಚ್ಚಿಸಬೇಕು. ಹಾಸ್ಟೇಲ್‍ಗಳಿಗೆ ಮೂಲ ಭೂತ ಸೌಲಬ್ಯ ನೀಡಬೇಕು. ಹಾಗೂ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಹಾಸ್ಟೇಲ್‍ಗಳಿಗೆ ಕೂಡಲೇ ಸ್ವಂತ ಕಟ್ಟಡ ಕಟ್ಟಲು ಬಜೆಟ್‍ನಲ್ಲಿ ಹಣ ಇಡಬೇಕು.

        ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್‍ಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ಕೂಡಲೇ ನೇಮಿಸಬೇಕು. ಹಾಸ್ಟೇಲ ಮೇಲ್ವಿಚಾರಕರ ಹುದ್ದೆಗೆ ಅಡುಗೆಯವರನ್ನು ನೇಮಿಸುವ ಅವೈಜ್ಞಾನಿಕ ಕ್ರಮವನ್ನು ಬಿಟ್ಟು ನಿಯಮದಂತೆ ಪದವಿಧರರನ್ನು ನೇಮಕ ಮಾಡಿ ಹಾಸ್ಟೇಲ್ ವಿಧ್ರ್ಯಾರ್ಥಿಗಳ ವಿದ್ಯಾರ್ಜನೆಯ ಗುಣಮಟ್ಟ ಹೆಚ್ಚಿಸಬೇಕು.

        ಪ.ಜಾತಿ / ವರ್ಗಗಳಿಗೆ ವಿವಿಧ ಇಲಾಖೆಗಳಿಂದ ನಿಗದಿಯಾದ ಎಸ್.ಸಿ ಪಿ/ಟಿ ಎಸ್.ಪಿ ಅಭಿವೃದ್ದಿಯಲ್ಲಿ ಸರ್ಕಾರದ ನಿಯಮದಂತೆ ಕನಿಷ್ಟ 20ಲಕ್ಷಕ್ಕಿಂತ ಕಡಿಮೆ ಇಲ್ಲದಂತೆ ಪ್ರತ್ಯೇಕ ಕ್ರಿಯಾಯೋಜನೆ ಮಾಡಬೇಕು. ಈ ಯೋಜನೆಯ ಎಲ್ಲಾ ಕಾಮಗಾರಿಗಳನ್ನುಪ.ಜಾತಿ / ವರ್ಗದ ಗುತ್ತಿಗೆದಾರರಿಗೆ ನೀಡಬೇಕು ಸೇರಿದಂದೆ ಅನೇಕ ಬೇಡಿಕೆ ಹಾಗೂ ಹಕ್ಕೊತ್ತಾಯಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.

       ಈ ಸಂದರ್ಭದಲ್ಲಿ ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ,ಮುಖಂಡರಾದ ಮಾಲತೇಶ ಯಲ್ಲಾಪೂರ,ನಿಂಗಪ್ಪ ನಿಂಬಕ್ಕನವರ, ಮಂಜಪ್ಪ ಮರೋಳ, ಸಂಜಯಗಾಂಧಿ ಸಂಜೀವಣ್ಣನವರ, ನೀಲಪ್ಪ ಮಾದರ, ರಂಗಪ್ಪ ಮೈಲಮ್ಮನವರ, ಬಸಪ್ಪ ಮುಗಳಿ, ಬಸವರಾಜ ಕಾಳೆ, ಮೈಲಪ್ಪ ದಾಸಪ್ಪನವರ, ನೀಲಪ್ಪ ದೊಡ್ಡಮರಿಯಮ್ಮನವರ, ಬಸವರಾಜ ತಡಸದ, ರಮೇಶ ಕರಡೆಪ್ಪನವರ, ಶಂಕರ ತಿಮ್ಮಾಪೂರ, ಹುಲಗೇಶ ಭಜಂತ್ರಿ, ಕುಮಾರ ಹುಚ್ಚಮ್ಮನವರ ಅನೇಕರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link