ಶಿಗ್ಗಾವಿ :
ಭಾರತ ದೇಶದ ಮಹಾನ್ ಉಕ್ಕಿನ ಮಹಿಳೆ ಹಾಗೂ ಮಾಜಿ ಪ್ರಧಾನಿಯಾದ ದಿ. ಇಂದಿರಾ ಗಾಂಧಿಯವರ 101 ನೇ ವರ್ಷದ ಹುಟ್ಟು ಹಬ್ಬವನ್ನು ಕಾಂಗ್ರೇಸ್ ಪಕ್ಷದ ವತಿಯಿಂದ ಪಟ್ಟಣದ ಎಪಿಎಮ್‍ಸಿ ಯಾರ್ಡನಲ್ಲಿ ದಿ. ಇಂದಿರಾ ಗಾಂದಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಆಚರಿಸಲಾಯಿತು.
ನಂತರ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ 14 ಬ್ಯಾಂಕ್‍ಗಳನ್ನು ಖಾಸಗೀಕರಣ, ಹಸಿರು ಕ್ರಾಂತಿ, ಉಳುವವನೆ ಭೂಮಿಯ ಒಡೆಯ, ದೇಶದಲ್ಲಿ ಪ್ರಥಮ ಬಾರಿಗೆ ನ್ಯೂಕ್ಲಿಯರ್ ಫೋಕ್ರಾನ್ ಪ್ರಯೋಗ ಸೇರಿದಂತೆ ವಿವಿಧ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಆಡಳಿತವನ್ನ ಮೆಚ್ಚುವ ರೀತಿಯಲ್ಲಿ ಮಾಡಿದ ವಿವಿಧ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ಎಪಿಎಮ್‍ಸಿ ಅಧ್ಯಕ್ಷ ಪ್ರೇಮಾ ಪಾಟೀಲ್ ಮಾತನಾಡಿದರು, ಉಪಾಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಮುಖಂಡರಾದ ವಿರೇಶ ಆಜೂರ, ಮಂಜುನಾಥ ಮಣ್ಣಣ್ಣವರ, ಫೀರೊಜ ಕಾಮನಹಳ್ಳಿ, ಈರಣ್ಣ ಬಡ್ಡಿ, ವಿಶಾಲ ಮರಾಠ, ಸುನಿಲ್ ವಡ್ಡರ, ಮುತ್ತುರಾಜ ಗೋಟಗೊಡಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ