ಕುಣಿಗಲ್
ಪಟ್ಟಣದ ಕೆನರಾ ಬ್ಯಾಂಕ್ ಪಕ್ಕದ ರಸ್ತೆಗೆ ಡಾಂಬರೀಕರಣಗೊಳಿಸುವ ನೆಪದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಮಣ್ಣುತೆಗೆದು ಸಂಪರ್ಕ ರಸ್ತೆಗೆ ಹೊಂದಿಕೊಳ್ಳದಂತೆ ಅಸಮರ್ಪಕ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆಂದು ನಾಗರೀಕರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಿವಾಸಿಗಳಾದ ವೆಂಕಟೇಶ್, ಬಿದನಗೆರೆ ದೇವರಾಜ್, ಉಮೇಶ್ ಸೇರಿದಂತೆ 10ನೇ ವಾರ್ಡ್‍ನ ನಾಗರೀಕರು ದೂರಿದ್ದು ಮದ್ದೂರು ರಸ್ತೆಯಿಂದ ಬಂದಂತಹ ವಾಹನಗಳು ರಸ್ತೆಗೆ ಇಳಿಯಲಾಗದೇ ಅರ್ಧದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಆಟೋರಿಕ್ಷಗಳು ಹತ್ತಲಾಗದೆ ಆಯತಪ್ಪಿ ಬೀಳುವುದು ಮತ್ತು ದ್ವಿಚಕ್ರವಾಹನ ಸವಾರರು ಮತ್ತು ಶಾಲಾ ಮಕ್ಕಳು ನಿತ್ಯ ಪರದಾಡುವಂತಾಗಿದೆ. ಈ ಬಗ್ಗೆ ಕಂಡೂ ಕಾಣದಂತಿರುವ ಪುರಸಭಾ ಅಧಿಕಾರಿಗಳ ಬೇಜವಾಬ್ದಾರಿಯೇ ಇಂತಹ ಅಸಮರ್ಪಕ ರಸ್ತೆಗಳ ನಿರ್ಮಾಣಕ್ಕೆ ಕಾರಣವಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ. .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
