ಹೊಸಪೇಟೆ:
ನಗರದಲ್ಲಿ ಅಂತರ ರಾಷ್ಟ್ರೀಯ ರಕ್ತದಾನ ದಿನ ನಿಮಿತ್ತ ಜೇಸೆಸ್ ಸಂಸ್ಥೆ ಹಾಗೂ ವಾಸಂತಿದೇವಿ ಬಲ್ಡೋಟಾ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು.
ಈ ಶಿಬಿರದಲ್ಲಿ ಸದಸ್ಯರು, ಗೃಹ ರಕ್ಷಕದಳ ಸಿಬ್ಬಂದಿಗಳು ಹಾಗೂ ನಾಗರಿಕರು ರಕ್ತದಾನ ಮಾಡಿದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಜನರು ರಕ್ತ ನೀಡಿದರು.
ಶಿಬಿರದ ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಅಶ್ವಿನ್ ಕೋತ್ತಂಬರಿ, ಕಾರ್ಯದರ್ಶಿ ಡಾ. ವೆಂಕಟೇಶ್ ಬಾಬು, ಉಪಾಧ್ಯಕ್ಷೆ ಡಾ. ಪಲ್ಲವಿ ಆರ್. ಡಾ. ನಟರಾಜ್, ತಿಪ್ಪೇಸ್ವಾಮಿ, ಶಿಲ್ಪಾಸಿಂಗ್ ಉಪಸ್ಥಿತರಿದ್ದರು. ಈ ರಕ್ತದಾನ ಶಿಬಿರವನ್ನು ಡಾ. ಸುಲೋಚನಾ ಸಾಗರ ನಡೆಸಿಕೊಟ್ಟರು.