ಹಾವೇರಿ :
ಹೆಣ್ಣು ಜಗದ ಕಣ್ಣು , ತೊಟ್ಟಿಲು ತೂಗವ ಕೈ ಜಗತ್ತನ್ನೆ ಆಳಬಲ್ಲದು ಇಂತಹ ಮಹಿಳೆಯು ತನ್ನ ಜೀವನದಲ್ಲಿ ವಿವಿಧ ರೀತಿಯ ಪಾತ್ರ ನಿರ್ವಹಿಸಿ ಕುಟುಂಬ ಸಲಹುತ್ತಾಳೆ ಇಂತಹ ಮಹಿಳೆಯನ್ನು ಗೌರವಿಸಬೇಕು ಎಂದು ರೋಶಿನಿ ಕೇಂದ್ರದ ಸಿಸ್ಟರ್ ಡಿಂಪಲ್ ಡಿಸೋಜ ಹೇಳಿದರು
ಜಿಲ್ಲೆಯ ಹಾನಗಲ್ ತಾಲೂಕಿನ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಡೊಳ್ಳೇಶ್ವರದ ಮೀನಾ ತಂಡ ಹಾಗೂ ಜ್ಯೋತಿ ಹೊಲಗೆ ಕೇಂದ್ರ ಡೊಳ್ಳೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರುಗಳಾದ ಅಶೋಕ ಹನಮಾಪುರ ಅವರು ಮಾತನಾಡಿ ಹೆಣ್ಣಾಗಲಿ ಗಂಡಾಗಲಿ ಎಲ್ಲರನ್ನು ಸಮಾನವಾಗಿ ಬೆಳೆಸಿ ತಪ್ಪದೆ ಶಿಕ್ಷಣ ದೊರಕುವಂತೆ ಮಾಡಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎನ್ ಡಿ ಎಚ್ ಎಸ್ ಶಾಲೆಯ ಶಿಕ್ಷಕಿ ಶ್ರೀಮತಿ ವಿದ್ಯಾ ಮೋರಟಗಿ ಮಾತನಾಡಿ ಹೆಣ್ಣುಮಕ್ಕಳು ಎಂದುಕೊಂಡು ಅವರನ್ನು ಬೇಗನೆ ಬಾಲ್ಯ ವಿವಾಹ ಮಾಡಬೇಡಿ ಅವರ ಹಕ್ಕುಗಳನ್ನು ಮೊಟಕು ಗೊಳಿಸಬೇಡಿ ಎಂದು ಹೇಳಿದರು. ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ಡೊಳ್ಳೇಶ್ವರದ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಚೇತನ ಅವರು ಸ್ತ್ರೀ ಸಬಲೀಕರಣ ಕುರಿತು ಮಾತನಾಡಿದರು.
ಶಾಲೆಯ ಮೀನಾ ತಂಡದ ಮಾರ್ಗದರ್ಶಿ ಶಿಕ್ಷಕಿ ಶ್ರೀಮತಿ ಶ್ವೇತಾ ನಾಯಕ ಪ್ರಸ್ತಾವಿಕವಾಗಿ ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹುಟ್ಟಿ ಬಂದ ಬಗೆಯನ್ನು ಹಾಗೂ ನಡೆದುಕೊಂಡು ಬರುತ್ತಿರುವ ಕುರಿತು ಮಾಹಿತಿ ನೀಡಿದರು
ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಅರಿಷಿಣ ಕುಂಕುಮ ಕೊಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ ಸದಸ್ಯರಾದ ಶ್ರೀ ಮತಿ ಅನ್ನಪೂರ್ಣ ಕುಂಟನಹೊಸಳ್ಳಿ, ಶ್ರೀಮತಿ ಲಕ್ಷ್ಮವ್ವ ಹರಿಜನ, ಆರೋಗ್ಯ ಕಾರ್ಯಕರ್ತೆಯರಾದ ಶಮಿ ಉಪ್ಪಿನ, ಹಾಗೂ ಮಹಿಳಾ ಪತ್ರಕರ್ತೆ ಶ್ರೀಮತಿ ಮಾನಸ ಅಪ್ಪಾಜಿ,ಶಾಲೆಯ ಶಿಕ್ಷಕರಾದ ಶಿವಾನಂದ ಪಾಟೀಲ, ಎಸ್ ಬಿ ಕಂಟೆಣ್ಣನವರ, ದೇವಾಚಾರಿ ಆರ್, ಶ್ರೀಮತಿ ಶ್ವೇತಾ ನಾಯಕ ವಿನಯಕುಮಾರ್ ಪೂಜಾರ ಊರಿನ ಮಹಿಳೆಯರು, ಮಕ್ಕಳ ತಾಯಂದಿರು, ಮೀನಾ ತಂಡದ ವಿಧ್ಯಾರ್ಥಿನಿಯರು.ಜ್ಯೋತಿ ಹೊಲಗೆ ಕೆಂದ್ರದ ಸದಸ್ಯೆಯರು ಹಾಜರಿದ್ದರು
ಕಾರ್ಯಕ್ರಮವನ್ನು ಕುಮಾರಿ ಕಾವೇರಿ ವರ್ದಿ ನಿರೂಪಿಸಿದದು , ಕುಮಾರಿ ಅನುಪಮ ಬಾರ್ಕಿ ಸ್ವಾಗತಿಸಿದರು, ಕುಮಾರಿ ಜ್ಯೋತಿ ಕುಮ್ಮುರ ವಂದಿಸಿದರು