ಅಂತಾರಾಜ್ಯ ದರೋಡೆಕೋರರ ಬಂಧನ

ಬೆಂಗಳೂರು

     ಆನ್‍ಲೈನ್ ಮೂಲಕ ಸಂಪರ್ಕಿಸಿ ಬಾಡಿಗೆಗೆ ಬುಕ್ ಮಾಡಿದ ಕಾರಿನ ಚಾಲಕರನ್ನು ಪ್ರಯಾಣಿಕರ ಸೋಗಿನಲ್ಲಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಹೋದ ನಂತರ ಆತನನ್ನು ಮಧ್ಯಭಾಗಕ್ಕೆ ಎಳೆದು ಕೈ ಕಾಲು ಕಟ್ಟಿಹಾಕಿ ಬಲವಂತದಿಂದ ಮದ್ಯಪಾನ ಮಾಡಿಸಿ ಹಲ್ಲೆ ನಡೆಸಿ ಕಾರಿನಿಂದ ಹೊರದಬ್ಬಿ ಕಾರು ದೋಚಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಅಂತಾರಾಜ್ಯ ದರೋಡೆಕೋರರ ಗ್ಯಾಂಗ್‍ನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಉತ್ತರ ವಿಭಾಗದ ಲೀಸರು 1ಕೋಟಿ 26 ಲಕ್ಷ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ಯಾಂಗ್‍ನಲ್ಲಿದ್ದ       ಕೊರಟಗೆರೆಯ ಶ್ರೀನಿವಾಸ್ (29), ಲಗ್ಗೆರೆಯ ಜೀವನ್ (26), ಶಿರಾದ ಮಂಜುನಾಥ್ ಅಲಿಯಾಸ್ ಮಂಜ (29), ಚನ್ನಪಟ್ಟಣದ ಪ್ರವೀಣ್ ಅಲಿಯಾಸ್ ಅರಕೇಶ್ (23), ಹೊಸದುರ್ಗದ ಅಬ್ದುಲ್ ವಹಾಬ್ ಅಲಿಯಾಸ್ ಅಂಜು (24), ನುರುಲ್ಲಾ ಅಲಿಯಾಸ್ ವಿಜಯ್ (22)ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

       ಬಂಧಿತರಿಂದ ಒಂದು ಕೋಟಿ 26 ಲಕ್ಷ ರೂ. ಮೌಲ್ಯದ 4 ಇನೋವಾ, 6 ಮಾರುತಿ, ತಲಾ ಎರಡು ನಿಸಾನ್ ಸನ್ನಿ, ಫೋರ್ಡ್ ಅಸೈರ್, ತಲಾ ಒಂದು ಪುಂಟೋ, ಸ್ಕೋಡಾ ಫ್ಯಾಬಿಯಾ ಸೇರಿ 17 ಕಾರುಗಳನ್ನು ವಶಪಡಿಸಿಕೊಂಡು ಬೆಳಗಾವಿಯ ಯಮಕನಮರಡಿಯ ಮಂಗಳೂರಿನ ಬರ್ಕೆ, ತಮಿಳುನಾಡಿನ ಕೊಂಡಲಂಪಟ್ಟಿ ಪೊಲೀಸ್ ಠಾಣೆಯ ತಲಾ ಒಂದು ಸೇರಿ, ಮೂರು ದರೋಡೆ ಹಾಗೂ ಸುಲಿಗೆ ಪ್ರಕರಣಗಳು ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

ಕಾರು ಕಳವು       ಆರೋಪಿಗಳು ಕಳೆದ 6 ತಿಂಗಳುಗಳಿಂದ ಕಾರು ದರೋಡೆ ಕೃತ್ಯಕ್ಕೆ ಇಳಿದಿದ್ದು, ಮಂಗಳೂರಿನಲ್ಲಿ ಸ್ವಿಫ್ಟ್ ಡಿಸೈರ್ ಕಾರು, ಬೆಳಗಾವಿಯಲ್ಲಿ ಇನೋವಾ, ತಮಿಳುನಾಡಿನ ಸೇಲಂನಲ್ಲಿ ಇನೋವಾ ಕಾರುಗಳನ್ನು ರಾತ್ರಿವೇಳೆ ಟ್ರಿಪ್‍ಗೆಂದು ಬಾಡಿಗೆಗೆ ಬುಕ್ ಮಾಡಿ ಯಾವುದೇ ಫೋನ್ ಕರೆ ಮಾಡದೆ, ಇಂಟರ್‍ನೆಟ್ ಮೂಲಕ ತಪ್ಪು ನಂಬರ್ ಬರುವ ಹಾಗೆ ಕರೆ ಮಾಡಿ ವಾಹನದ ಚಾಲಕರನ್ನು ನಂಬಿಸಿ, ಪ್ರಯಾಣಿಕರಂತೆ ಹೋಗುತ್ತಿದ್ದರು.

   ಸ್ವಲ್ಪದೂರ ಹೋದ ನಂತರ ನಿರ್ಜನ ಪ್ರದೇಶದಲ್ಲಿ ಚಾಲಕನಿಗೆ ಕಾರು ನಿಲ್ಲಿಸುವಂತೆ ಹೇಳಿ, ಆತನನ್ನು ಮಧ್ಯಭಾಗಕ್ಕೆ ಎಳೆದುಕೊಂಡು ಹಗ್ಗದಿಂದ ಕೈ ಕಾಲು ಕಟ್ಟಿ ಬಲವಂತದಿಂದ ಮದ್ಯಪಾನ ಮಾಡಿಸಿ, ಗಮ್ ಟೇಪ್ ಅನ್ನು ಬಾಯಿಗೆ ಅಂಟಿಸಿ, ಚಾಕು, ಏರ್ ಗನ್ ತೋರಿಸಿ ಬೆದರಿಸಿ ಆತನನ್ನು ಕಾರಿನಿಂದ ಹೊರಗೆ ದಬ್ಬಿ, ವಾಹನವನ್ನು ದೋಚಿ ಪರಾರಿಯಾಗುತ್ತಿದ್ದರು.

ಓಎಲ್‍ಎಕ್ಸ್‍ನಲ್ಲಿ ಮಾರಾಟ    ದೋಚಿದ ಕಾರುಗಳನ್ನು ಮಾರಾಟ ಮಾಡಿ ಮೋಜು ಮಾಡಲು ಓಎಲ್‍ಎಕ್ಸ್, ಇನ್ನಿತರ ಆನ್ ಲೈನ್ ಜಾಹೀರಾತಿನಲ್ಲಿ ಕಾರು ಖರೀದಿದಾರರು ಹಾಗೂ ಗುತ್ತಿಗೆ ಪಡೆಯುವವರ ಮಾಹಿತಿ ಪಡೆದುಕೊಂಡು ಕಾರನ್ನು ಮಾರುವುದಾಗಿ ನಂಬಿಸಿ, ಮುಂಗಡ ಪಡೆದು ಆ ವಾಹನ ತಮ್ಮ ವಶಕ್ಕೆ ಪಡೆದು ಸಾರಿಗೆ ಇಲಾಖೆಯಿಂದ ನೀಡುವ ಆರ್.ಸಿ. ಕಾರ್ಡ್ ರೀತಿಯಲ್ಲೇ ನಕಲು ಆರ್.ಸಿ. ಕಾರ್ಡ್‍ಗಳನ್ನು ಸೃಷ್ಟಿಸಿ, ವಾಹನಗಳ ಸಂಖ್ಯೆಯನ್ನು ಬದಲಿಸುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap