ಕುಖ್ಯಾತ ಅಂತರರಾಜ್ಯ ಕಳ್ಳರ ಬಂಧನ..!!

ಬೆಂಗಳೂರು

          ದುಬಾರಿ ಬೆಲೆಯ ಬೈಕ್‍ಗಳನ್ನು ಕಳವು ಮಾಡಿ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳರ ಗ್ಯಾಂಗ್‍ನ್ನು ವಿವಿಪುರಂ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

         ತಮಿಳುನಾಡಿನ ಆಂಬೂರ್‍ನ ಮುನೀರ್ ಪಾಷ (20), ಉಮ್ರಾಬಾದ್‍ನ ಮೊಹ್ಮದ್ ಮುಜಾಯಿದ್ (25), ವಾಣಿಯಂಬಾಡಿಯ ಮೋಹನ್ (19) ಬಂಧಿತ ಆರೋಪಿಗಳ ಗ್ಯಾಂಗ್ ಆಗಿದ್ದು, ಬಂಧಿತರಿಂದ 20 ಲಕ್ಷ ಮೌಲ್ಯದ 8 ಬುಲೆಟ್, 3 ಬಜಾಜ್ ಪಲ್ಸರ್, ಯಮಹಾ ಎಫ್‍ಜೆಡ್, ಡಿಯೋ, ಹೋಂಡಾ ಶೈನ್ ಸೇರಿದಂತೆ 17ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

        ಆರೋಪಿಗಳು ಬ್ಯಾಟರಾಯನಪುರ, ಜಯನಗರ, ಅಶೋಕ್ ನಗರ, ಹೆಬ್ಬಗೋಡಿ, ಬಂಡೆಪಾಳ್ಯ, ವಿಲ್ಸನ್ ಗಾರ್ಡನ್ ಇನ್ನಿತರ ಕಡೆಗಳಲ್ಲಿ ಹಗಲು-ರಾತ್ರಿ ವೇಳೆ ಸಂಚರಿಸುತ್ತ ದುಬಾರಿ ಬೈಕ್‍ಗಳನ್ನು ಗುರುತಿಸಿ ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡರ್ ಮುರಿದು ಕಳವು ಮಾಡಿ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು

       ಆರೋಪಿಗಳು ತಮಿಳುನಾಡಿನ ಶ್ರೀ ಪೆರಂಬದೂರ್, ವೆಲ್ಲೂರ್, ಹೊಸೂರುಗಳಲ್ಲಿಯೂ ಬೈಕ್‍ಗಳನ್ನು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ. ವಿವಿಪುರ, ಜಯನಗರ ಇನ್ನಿತರ ಕಡೆಗಳಲ್ಲಿ ಬೈಕ್ ಕಳವು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ವಿವಿಪುರಂ ಪೊಲೀಸ್ ಇನ್ಸ್‍ಪೆಕ್ಟರ್ ಶಿವಶಂಕರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿದೆ.

        ಆರೋಪಿಗಳಲ್ಲಿ ಇಬ್ಬರು ವಿವಿಪುರಂ ಬಳಿ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದಾಗ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಓರ್ವ ತಪ್ಪಿಸಿಕೊಂಡು, ಓಡಿ ಹೋದರೆ, ಮತ್ತೊಬ್ಬ ಸಿಕ್ಕಿ ಬಿದ್ದಿದ್ದು, ಆತನನ್ನು ವಿಚಾರಣೆ ನಡೆಸಿ ಉಳಿದಿಬ್ಬರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link