ಇರಾನ್‌ನ ವಿದೇಶಾಂಗ ಸಚಿವರಿಂದ ಇರಾಕ್ ಪ್ರಧಾನಿಯ ಭೇಟಿ

ಮಾಸ್ಕೋ

       ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜವಾದ್ ಜಾರಿಫ್ ಅವರು ಇರಾಕಿನ ಪ್ರಧಾನಮಂತ್ರಿ ಆದಿಲ್ ಅಬ್ದುಲ್ ಮಹ್ದಿ ಅವರನ್ನು ಬಾಗ್ದಾದ್‌ನಲ್ಲಿ ಭೇಟಿಯಾಗಿ ಟೆಹ್ರಾನ್‌ ಮತ್ತು ವಾಷಿಂಗ್ಟನ್‌ ನಡುವೆ ಉಂಟಾಗಿರುವ ಉದ್ವಿಗ್ನತೆಯಿಂದ ಮಧ್ಯಪ್ರಾಚ್ಯದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ ಎಂದು ಇರಾಕ್ ಸರ್ಕಾರ ತಿಳಿಸಿದೆ.

       ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜವಾದ್ ಜಾರಿಫ್ ಅವರು ಪ್ರಧಾನಮಂತ್ರಿ ಆದಿಲ್ ಅಬ್ದುಲ್ ಮಹ್ದಿ ಅವರನ್ನು ಶನಿವಾರ ಸಂಜೆ ಬಾಗ್ದಾದ್‌ನಲ್ಲಿ ಭೇಟಿಯಾದರು.

       ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಕುರಿತು ಹಾಗೂ ಈ ಪ್ರಾಂತ್ಯ ಮತ್ತು ಜಗತ್ತಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಇರಾಕ್‌ ಸರ್ಕಾರ ತಿಳಿಸಿದೆ.

        2018ರ ಮೇ ತಿಂಗಳಿನಿಂದ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರಮಾಣು ಒಪ್ಪಂದದ ದೀರ್ಘಕಾಲದ ಟೀಕಾಕಾರರಾಗಿದ್ದು, ಮೇ 2018 ರಲ್ಲಿ ಅಮೆರಿಕ ಒಪ್ಪಂದದಿಂದ ಹೊರಬಂದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.ಇರಾನ್‌ನ ಹಣಕಾಸು, ಸಾರಿಗೆ, ಸೇನೆ ಮತ್ತಿತರ ವಲಯಗಳನ್ನು ಗುರಿಯಾಗಿಸಿ ಕಳೆದ ಒಂದು ವರ್ಷದಿಂದ ವಾಷಿಂಗ್ಟನ್‌ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ.

      ಇದಕ್ಕೂ ಮೊದಲು ಇರಾನ್, ಮೇ ತಿಂಗಳಲ್ಲಿ, ಒಪ್ಪಂದದ ಅಡಿಯಲ್ಲಿ ತನ್ನ ಬದ್ಧತೆಯನ್ನು ಭಾಗಶಃ ಸ್ಥಗಿತಗೊಳಿಸಿರುವುದಾಗಿ ಘೋಷಿಸಿತು. ಇರಾನ್‌ನ ಹಿತಾಸಕ್ತಿಗಳನ್ನು ಒಪ್ಪಂದದ ಅಡಿಯಲ್ಲಿ ರಕ್ಷಿಸಲು 60 ದಿನಗಳ ಅವಧಿಯನ್ನು ಯುರೋಪ್‌ಗೆ ನೀಡಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link