ಬಳ್ಳಾರಿ ಮತ್ತು ಬೆಂಗಳೂರು ರಸ್ತೆಯಲ್ಲಿ ದಿಢೀರ್ ಕಣ್ಮರೆಯಾದ ಕಬ್ಬಿಣದ ಗ್ರೀಲ್‍ಗಳು .

ಚಳ್ಳಕೆರೆ

     ನಗರದ ಬೆಂಗಳೂರು ಮತ್ತು ಬಳ್ಳಾರಿ ರಸ್ತೆಗಳಲ್ಲಿ ನಗರಸಭೆ ಎರಡೂ ಕಡೆ ಸುಗಮವಾಗಿ ನೀರು ಹರಿಯುವ ದೃಷ್ಠಿಯಿಂದ ಚರಂಡಿ ನಿರ್ಮಿಸಿ ಚರಂಡಿಯ ಮೇಲೆ ರಕ್ಷಣೆಗಾಗಿ ಆರ್‍ಸಿಸಿ ಸ್ಲ್ಯಾಬ್ ಹಾಕಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.

     ಆದರೆ, ಕಳೆದ ಎಡ್ಮೂರು ತಿಂಗಳುಗಳಿಂದ ಬಳ್ಳಾರಿ ರಕ್ಷಣೆಯ ಚರಂಡಿಯ ಮೇಲೆ ರಕ್ಷಣೆಗಾಗಿ ಹಾಕಿದ್ದ ಆರ್‍ಸಿಸಿ ಸ್ಲ್ಯಾಬ್‍ಗಳು ಕಣ್ಮರೆಯಾಗಿ ಅಪಾಯಕ್ಕೆ ಅಹ್ವಾನ ನೀಡುತ್ತಿವೆ. ಇದರ ಜೊತೆಯಲ್ಲಿ ಕಬ್ಬಿಣದ ಸರಳುಗಳಿಂದ ನಿರ್ಮಿಸಿದ್ದ ಗ್ರೀಲ್ ಕೂಡ ಕಳವಾಗುತ್ತಿದ್ದು, ಈ ಬಗ್ಗೆ ಇಂತಹ ಕೃತ್ಯಗಳನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿರುವುದಾಗಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ತಿಳಿಸಿದ್ಧಾರೆ.

     ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಬಳ್ಳಾರಿ ರಸ್ತೆ ಮತ್ತು ಬೆಂಗಳೂರು ರಸ್ತೆಗಳಲ್ಲಿ ಸ್ಲ್ಯಾಬ್ ಹಾಗೂ ಕಬ್ಬಿಣದ ಗ್ರೀಲ್‍ಗಳು ದಿಢೀರನೆ ಕಣರೆಯಾಗುತ್ತಿವೆ. ಈ ಬಗ್ಗೆ ಸಾಕಷ್ಟು ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಸಹ ಸಾಧ್ಯವಾಗುತ್ತಿಲ್ಲ. ಅದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಸ್ಲ್ಯಾಬ್ ಕಳ್ಳತನ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ಧಾರೆ.
ವಿಶೇಷವಾಗಿ ಬೆಂಗಳೂರು ರಸ್ತೆಯಲ್ಲೂ ಸಹ ಬಹಳಷ್ಟು ಕಡೆ ರಸ್ತೆಯ ಮಧ್ಯಭಾಗದಲ್ಲಿ ಹಾಕಲಾಗಿದ್ದ ಕಬ್ಬಿಣದ ಗ್ರೀಲ್‍ಗಳು ಸಹ ಕಾಣೆಯಾಗಿರುತ್ತವೆ. ನಗರಸಭೆ ಈ ಬಗ್ಗೆ ಹಲವಾರು ಬಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಇವುಗಳ ರಕ್ಷಣೆ ಮಾಡುವುದು ಅಸಾಧ್ಯವಾಗಿದೆ. ಅದ್ದರಿಂದ ಪೊಲೀಸ್ ಇಲಾಖೆ ಸ್ಲ್ಯಾಬ್ ಮತ್ತು ಕಬ್ಬಿಣದ ಗ್ರೀಲ್‍ಗಳನ್ನು ಕಳ್ಳತನ ಮಾಡುವ ಕಳ್ಳರನ್ನು ಪತ್ತೆ ಹಚ್ಚಿ ಸಾರ್ವಜನಿಕ ಆಸ್ತಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಮಹಲಿಂಗಪ್ಪ ಮನವಿ ಮಾಡಿದ್ಧಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap