ಅ.6 ರಿಂದ ಇಸ್ರೋದಿಂದ ಬಳ್ಳಾರಿಯಲ್ಲಿ ವಿಶ್ವ ಅಂತರಿಕ್ಷ ಸಪ್ತಾಹ

ಬಳ್ಳಾರಿ

      ಭಾರತ ಸರ್ಕಾರ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಿಐಟಿಎಂ ಹಾಗೂ ಜೆಎಸ್ಡಬ್ಲ್ಯೂ ಸಂಯುಕ್ತಾಶ್ರಯದಲ್ಲಿ ನಗರದ ಬಿಐಟಿಎಂ(ಬಳ್ಳಾರಿ ಇನ್ಸ್ಟಿಟ್ಯೂಶನ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್) ಎಂಜನಿಯರಿಂಗ್ ಕಾಲೇಜಿನಲ್ಲಿ ಅ.6ರಿಂದ 10ರವರೆಗೆ 5 ದಿನಗಳ ಕಾಲ “ವಿಶ್ವ ಅಂತರಿಕ್ಷ ಸಪ್ತಾಹ” ಏರ್ಪಡಿಸಲಾಗಿದ್ದು, ಅಂದಾಜು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

     ಅನೇಕ ರಾಷ್ಟ್ರಗಳು ಬಾಹ್ಯಾಕಾಶದ ಸ್ಥಳಾವಕಾಶದ ಉಪಯುಕ್ತತೆಯನ್ನು ಸಂಶೋಧಿಸಲು ಪ್ರಬುದ್ಧವಾಗಿವೆ; ಅದರಲ್ಲಿ ಭಾರತವು ಸೇರಿರುವುದು ಗಮನಾರ್ಹ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪ್ರಯೋಜನಗಳನ್ನು ವೈಜ್ಞಾನಿಕ, ಅಕಾಡೆಮಿಕ್ ಮತ್ತು ಸಾಮಾನ್ಯ ಜನರಿಗೆ ತಿಳಿಸಬೇಕು ಎಂಬ ಸದುದ್ದೇಶದಿಂದ ವಿವಿಧ ಸ್ಥಳಗಳಲ್ಲಿ ಸತೀಶ ಧವನ್ ಬಾಹ್ಯಾಕಾಶ ಕೇಂದ್ರ ಪ್ರಚಾರ ಮಾಡುತ್ತಿದೆ.
ವಿಶೇಷವಾಗಿ ಈ ವರ್ಷ ತನ್ನ ಈ ವಿಶ್ವ ಅಂತರಿಕ್ಷ ಸಪ್ತಾಹ ಎಂಬ ವೈಜ್ಞಾನಿಕ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಅ.6ರಿಂದ 10ರವರೆಗೆ 5 ದಿನಗಳಲ್ಲಿ ಏರ್ಪಡಿಸಿದೆ.

       ಅ.6ರಂದು ಬೆಳಗ್ಗೆ 10ಕ್ಕೆ ಬಳ್ಳಾರಿಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ರಸಪ್ರಶ್ನೆ ಸ್ಪರ್ಧೆಗಳು ಏರ್ಪಡಿಸಲಾಗಿದೆ. ಅ.7ರಂದು ಬೆಳಗ್ಗೆ 8.30ಕ್ಕೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನ ಆವರಣದಿಂದ ಸ್ಪೇಸ್ ವಾಕಥಾನ್ ಆರಂಭವಾಗಲಿದ್ದು, ಡಿಸಿ ಕಚೇರಿಯವರೆಗೆ ನಡೆಯಲಿದೆ. ಅ.8ರಂದು ಬೆಳಗ್ಗೆ 10.30ಕ್ಕೆ ವಿಶ್ವ ಅಂತರಿಕ್ಷ ಸಪ್ತಾಹ ಮತ್ತು ತಾಂತ್ರಿಕ ಸಮ್ಮೇಳನ ಉದ್ಘಾಟನೆ ನಡೆಯಲಿದ್ದು ಜೆಎಸ್ಡಬ್ಲ್ಯೂ ಉಪಾಧ್ಯಕ್ಷ ಸೂರ್ಯಪ್ರಕಾಶ, ಸತೀಶಧವನ್ ಬಾಹ್ಯಕಾಶ ಕೇಂದ್ರದ ಎಂ.ಎನ್.ಸತ್ಯನಾರಾಯಣ ಮತ್ತು ವಿ.ನಾಗರಾಜು, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮತ್ತಿತರರು ಅತಿಥಿಗಳಾಗಿ ಆಗಮಿಸಲಿದ್ದಾರೆ.

      ಅ.8ರಿಂದ 10ರವರೆಗೆ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಬಾಹ್ಯಾಕಾಶ ಪ್ರದರ್ಶನ, ಬಾಹ್ಯಕಾಶ ಮಾದರಿ ಪ್ರದರ್ಶನ, ಬಾಹ್ಯಕಾಶ ಚಲನಚಿತ್ರ ಪ್ರದರ್ಶನಗಲು, ತಾರಾಲಯ ಪ್ರದರ್ಶನಗಳು, ಪಿಕ್-ಎನ್-ಸ್ಪೀಚ್ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ. ಅ.10ರಂದು ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲೆಯ 3 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ವಿಶ್ವ ಅಂತರಿಕ್ಷ ಸಪ್ತಾಹದಲ್ಲಿ ಭಾಗಿಯಾಗಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link