ಹೊಸದುರ್ಗ:
ನನ್ನ ಶಾಸಕತ್ವದ ಕಾರ್ಯ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಮೂಗು ತೂರಿಸುವುದು ಸರಿಯಲ್ಲ ಹಾಗೂ ಪಕ್ಷ ಮತ್ತು ಸರಕಾರದ ಮೇಲಿನ ಹಂತದಲ್ಲಿ ನನ್ನನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕಡೆಗಣಿಸಲಾಗುತ್ತಿದ್ದು, ಅನಿವಾರ್ಯ ಸಂದರ್ಭದಲ್ಲಿ ನಾನು ತೆಗೆದುಕೊಳ್ಳುವ ತೀರ್ಮಾನಕ್ಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬದ್ದರಾಗಿರಬೇಕು ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಭಾನುವಾರ ಕರೆಯಲಾಗಿದ್ದ ಗೂಳಿಹಟ್ಟಿ ಡಿ.ಶೇಖರ್ ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನನ್ನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಮೇಲಿನ ಹಂತದಲ್ಲಿ ನನಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ಹೊಸದುರ್ಗಕ್ಕೆ ಇಂತವರನ್ನೇ ಪಿಎಸ್‍ಐ ಆಗಿ ನಿಯೋಜನೆ ಮಾಡಿ ಎಂದು ಮುಖ್ಯಮಂತ್ರಿ ಕಚೇರಿಯಿಂದ ದಾವಣಗೆರೆ ಡಿಐಜಿಗೆ ಶಿಪಾರಸ್ಸು ಮಾಡುತ್ತಾರೆ.
ಪಕ್ಷ ಮತ್ತು ಸರಕಾರ ನನ್ನನ್ನು ಅನುಮಾನದಿಂದ ನೋಡುತ್ತಿದೆ. ಅವಕಾಶವಿದ್ದಲ್ಲಿ ನನ್ನನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕೇಳುವುದೇ ತಪ್ಪೇ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ನನ್ನ ತೀರ್ಮಾನಗಳಿಗೆ ನೀವು ಬೆಂಬಲ ನೀಡುವುದರ ಜತೆಗೆ ಕ್ಷೇತ್ರದ ಜನತೆ ಕೇಳುವ ಪ್ರೆಶ್ನೆಗಳಿಗೆ ನನ್ನ ಪರವಾಗಿ ಸಮರ್ಥನೆ ಮಾಡಿಕೊಳ್ಳುವ ಜವಬ್ದಾರಿ ನಿಮ್ಮದು ಎಂದರು.
ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರವಿದ್ದಾಗ ನಮ್ಮ ಯಾವುದೇ ಕಡತಗಳಿಗೂ ಮಾನ್ಯತೆ ಸಿಗುತ್ತಿರಲಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನನ್ನ ಕ್ಷೇತ್ರಕ್ಕೆ ನಯಾ ಪೈಸೆ ಅನುದಾನ ನೀಡದೇ ತಾರತಮ್ಯ ಮಾಡಲಾಗಿದೆ. ಮೈತ್ರಿ ಸರಕಾರದ ಅವಯಲ್ಲಿ ನಮ್ಮ ಕಾರ್ಯಕರ್ತರು ಸಾಕಷ್ಟು ನೋವ್ವು ಅನುಭವಿಸಿದರು. ಅನೇಕ ಕಡೆ ಕೆಲಸ ಮಾಡಿಕೊಡುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು. ಇದಕ್ಕೆಲ್ಲಾ ಮೈತ್ರಿ ಸರಕಾರದ ಆಡಳಿತವೇ ಕಾರಣ. ಇಂದು ನಮ್ಮ ಸರಕಾರ ಆಡಳಿತಕ್ಕೆ ಬಂದಿದ್ದು, ಕ್ಷೇತ್ರದ ಜನರ ಕೆಲಸ ಮಾಡಿಕೊಡಲಾಗುವುದು ಎಂದರು.
ಮೈತ್ರಿ ಸರಕಾರದಲ್ಲಿ ಕ್ಷೇತ್ರಕ್ಕೆ ಬೇಕಾದ ಅನುದಾನ ಕೇಳಲು ಹೋಗುವುದನ್ನೇ ತಪ್ಪಾಗಿ ಅರ್ಥೈಸಿಕೊಂಡ ಮಾಧ್ಯಮಗಳು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುತ್ತಾರೆಂದು ಸುದ್ದಿ ಹಬ್ಬಿಸಿದರು. ಈ ಸಮಯದಲ್ಲಿ ಬಿಜೆಪಿ ಸಹ ನನ್ನ ಮೇಲೆ ಅನುಮಾನದ ನಡೆ ಅನುಸರಿಸಿತು. ಬಿ.ಎಸ್.ಯಡಿಯೂರಪ್ಪ ಅವರ ಬಳಿ ನನ್ನ ಬಗ್ಗೆ ಇಲ ್ಲಸಲ್ಲದ ದೂರು ಹೇಳುತ್ತಾರೆ. ನಾನು ಸಾಕಷ್ಟು ಸಾಲ ಮಾಡಿಕೊಂಡಿರುವೆ, ಮೈತ್ರಿ ಸರಕಾರದಲ್ಲಿ ನನಗೆ ಸಾಕಷ್ಟು ಆಫರ್ ಬಂದವೂ ಅವೆಲ್ಲವನ್ನು ತಿರಸ್ಕರಿಸಿದೆ. ಎಲ್ಲಾ ಅವಮಾನಗಳಿಂದ ಸಾಕಷ್ಟು ನೊಂದಿದ್ದರೂ ಕ್ಷೇತ್ರದ ಜನತೆಗಾಗಿ ಸಹಿಸಿ ಕೊಂಡಿರುವೆ ಎಂದರು.
ಬಿಜೆಪಿ ಹೈಕಮಾಂಡ್‍ನಲ್ಲಿ ನನಗ್ಯಾರು ಪರಿಚಿತರಿಲ್ಲ. ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಆರ್. ಅಶೋಕ್ ಮಾತ್ರ ನನಗೆ ಪರಿಚಿತರು. ಅವರು ಹೇಳಿದಂತೆ ನಾನು ಕೇಳುತ್ತೇನೆ. ಚುನಾವಣೆಯಲ್ಲಿ ಪಕ್ಷೇತರನಾಗಿ ಕಣಕ್ಕಿಳಿದಿದ್ದರೇ ನನ್ನನ್ನು ಒಳಗೊಂಡು ಬಿಜೆಪಿಯೂ ಇಲ್ಲಿ ಗೆಲ್ಲಲ್ಲು ಸಾಧ್ಯವಾಗುತ್ತಿರಲಿಲ್ಲ. ಮತ್ತೊಮ್ಮೆ ಬೆಲಗೂರಿನ ಯಜಮಾನ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರೇ ಪುನಃ ಗೆದ್ದು ಬರುತ್ತಿದ್ದರು. ಮಾಜಿ ಶಾಸಕರ ಉಪಟಳವನ್ನು ಸಹಿಸಲಾಗದೇ ಕ್ಷೇತ್ರದ ಜನ ನನ್ನನ್ನು ಆಯ್ಕೆ ಮಾಡಿದರು. ಇದಕ್ಕೆ ಪೂರಕವಾಗಿ ಸ್ಥಳೀಯ ಬಿಜೆಪಿ ನಾಯಕರ ಓತ್ತಾಯಕ್ಕೆ ಮಣಿದು ಪಕ್ಷದಿಂದ ಸ್ಪರ್ಧಿಸಿದೆ. ಚುನಾವಣೆಯಲ್ಲಿ ಹಣ ಮತ್ತು ಅನ್ನ ನೀಡಿ ವೋಟ್ ಹಾಕಿದ ಮತದಾರರಿಗೆ ಮಾತ್ರ ಗೌರವಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ