ಚಿತ್ರದುರ್ಗ:
ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಒಂದು ಕೋಟಿಗೂ ಹೆಚ್ಚು ಬಿಜೆಪಿ.ಕಾರ್ಯಕರ್ತರ ಮನೆಗಳ ಮೇಲೆ ಬಿಜೆಪಿ.ಭಾವುಟ ಕಟ್ಟಲಿದ್ದಾರೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಹೇಳಿದರು.ನಗರದ ವಿ.ಪಿ.ಬಡಾವಣೆಯಲ್ಲಿರುವ ತಮ್ಮ ನಿವಾಸದ ಮೇಲೆ ಸೋಮವಾರ ಬಿಜೆಪಿ.ಭಾವುಟ ಕಟ್ಟಿ ಮಾತನಾಡಿದ ಕೆ.ಎಸ್.ನವೀನ್ ಮೇರಾ ಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನ ಫೆ.12 ರಿಂದ ದೇಶದಲ್ಲಿ ಆರಂಭಗೊಂಡಿದ್ದು, ಬಿಜೆಪಿ.ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮನೆಗಳ ಮೇಲೆ ಬಿಜೆಪಿ.ಭಾವುಟ ಹಾರಾಡಲಿದೆ.
ಜಿಲ್ಲೆಯಾದ್ಯಂತ ಈ ಅಭಿಯಾನ ಮಾರ್ಚ್ 20 ರವರೆಗೆ ನಡೆಯಲಿದ್ದು, ಸ್ಟಿಕರ್‍ಗಳನ್ನು ಕಾರ್ಯಕರ್ತರ ಮನೆ ಮನೆಗಳಿಗೆ ಅಂಟಿಸಲಾಗುವುದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರಮೋದರವರು ಗೆದ್ದು ದೇಶದ ಪ್ರಧಾನಿಯಾಗಲಿ ಎಂಬುದು ಈ ಅಭಿಯಾನದ ಉದ್ದೇಶ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಬೂತ್‍ಮಟ್ಟಗಳಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳ ಮನೆಗಳ ಮೇಲೆ ಬಿಜೆಪಿ.ಭಾವುಟ ಹಾರಾಡಲಿದೆ. ಯುವ ಮತದಾರರು ಬಿಜೆಪಿ.ಪರವಾಗಿರುವುದರಿಂದ ದೇಶದಲ್ಲಿ ಬಿಜೆಪಿ. ಅಲೆ ಎದ್ದಿದೆ. ಈ ನಿಟ್ಟಿನಲ್ಲಿ ಇನ್ನೆರಡು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಿಕ್ಕೆ ತರುವ ಹೊಣೆಗಾರಿಕೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳ ಮೇಲಿದೆ ಎಂದು ಹೇಳಿದರು.
38 ದಿನಗಳ ಕಾಲ ಜಿಲ್ಲೆಯಲ್ಲಿ ನಡೆಯುವ ಮೇರಾಪರಿವಾರ್ ಬಿಜೆಪಿ.ಪರಿವಾರ್ ಅಭಿಯಾನದಲ್ಲಿ ನಗರ ಘಟಕದ ಅಧ್ಯಕ್ಷರು, ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.ಮೋದಿ ಮತ್ತೊಮ್ಮೆ ಮತ್ತು ನಮ್ಮ ಕುಟುಂಬ ಬಿಜೆಪಿ.ಕುಟುಂಬ ಸ್ಟಿಕರ್‍ಗಳನ್ನು ಕೆ.ಎಸ್.ನವೀನ್ ತಮ್ಮ ನಿವಾಸದ ಸುತ್ತಮುತ್ತ ಕೆಲವು ಮನೆಗಳಿಗೆ ಅಂಟಿಸಿದರು.
ಪ್ರಧಾನ ಕಾರ್ಯದರ್ಶಿ ಮುರಳಿ, ಸುಜಯ ಶಿವಪ್ರಕಾಶ್, ವಕ್ತಾರರದಾದ ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಶಿವಪ್ರಕಾಶ್, ಕಾರ್ಯದರ್ಶಿ ನವೀನ್ ಚಾಲುಕ್ಯ, ಖಜಾಂಚಿ ನರೇಂದ್ರ, ಜಿತೇಂದ್ರಮರಿಕುಂಟೆ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ಓ.ಬಿ.ಸಿ. ಸಂಪತ್, ಅಸ್ಲಾಂಪಾಷ, ಮಕ್ಸೂದ್, ಸತ್ಯನಾರಾಯಣ, ಶಂಭು, ಸಂತೋಷ್, ಅರುಣ್, ಕೆಂಚಪ್ಪ, ಮಂಜುನಾಥ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
