ಕೇಂದ್ರವನ್ನು ಟೀಕಿಸುವುದು ಸರಿಯಲ್ಲ : ಅರವಿಂದ ಲಿಂಬಾವಳಿ

ಬೆಂಗಳೂರು:

       ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ಅನುದಾನ ಒದಗಿಸಿದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ, ಕೇಂದ್ರವನ್ನು ಟೀಕಿಸುವುದು ಸರಿಯಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

       ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಭಯ ಯೋಜನೆಯಡಿ 650 ಕೋಟಿ ರೂಪಾಯಿ, ಅಮೃತ ಯೋಜನೆಯಡಿ, ನಗರಗಳಿಗೆ 1435 ಕೋಟಿ ರೂಪಾಯಿ, ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ 2,640 ಕೋಟಿ ರೂಪಾಯಿ ಅನುದಾನ ಒದಗಿಸಿದೆ.

      ಬೆಂಗಳೂರು ಮೆಟ್ರೊ 1 ಮತ್ತು 2ನೇ ಹಂತದ ಯೋಜನೆಗಳಿಗೆ 5,260 ಕೋಟಿ ರೂಪಾಯಿ, ಕುಡಿಯುವ ನೀರಿನ ಯೋಜನೆಗೆ 1 ಸಾವಿರದ 762 ಕೋಟಿ ರೂಪಾಯಿ, ಬರಪರಿಹಾರಕ್ಕಾಗಿ ಎನ್‍ಡಿಆರ್‍ಎಫ್ 7 ಸಾವಿರದ 170 ಕೋಟಿ ರೂಪಾಯಿ, ನೀರಾವರಿ ಯೋಜನೆಗಳಿಗೆ 1 ಸಾವಿರದ 833 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ.

      14ನೇ ಹಣಕಾಸು ಆಯೋಗದ ಶಿಫಾರಿಸ್ಸಿನಂತೆ ರಾಜ್ಯಕ್ಕೆ 3 ವರ್ಷಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದಾಗ 13ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5 ವರ್ಷದಲ್ಲಿ 75 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿತ್ತು ಎಂದು ಅವರು ಅಂಕಿ ಅಂಶಗಳ ವಿವರ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link