ಚಿತ್ರದುರ್ಗ
ಸಹಕಾರ ಕ್ಷೇತ್ರದಲ್ಲಿ ಜಾತಿ ಮತ್ತು ರಾಜಕೀಯವನ್ನು ಬೆರಸದೆ ಸೇವಾ ಮನೋಭಾವದಿಂದ ಕೆಲಸವನ್ನು ಮಾಡಿದರೆ ಮಾತ್ರ ಸಹಕಾರ ಕ್ಷೇತ್ರ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‍ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ಜಿಂಕಲ್ ಬಸವರಾಜಪ್ಪ ಅಭೀಪ್ರಾಯಪಟ್ಟಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ.ಚಿತ್ರದುರ್ಗ, ಇದರ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಪ್ರಾರಂಭವಾದ 66 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು ಚುನಾವಣೆಯ ಸಮುದಲ್ಲಿ ಮಾತ್ರವೇ ಜಾತಿ ಮತ್ತು ಪಕ್ಷವನ್ನು ತರಬೇಕು ಆಯ್ಕೆಯಾದ ಮೇಲೆ ಸಹಕಾರ ಸಂಘದಲ್ಲಿ ಇದನ್ನು ತಾರದೇ ಸೇವಾಮನೋಭಾವದಿಂದಲೇ ಕೆಲಸವನ್ನು ಮಾಡಬೇಕಿದೆ, ಸರ್ಕಾರ ಕಾಲ ಕಾಲಕ್ಕೆ ನೀಡುವ ಮಾರ್ಗದರ್ಶನದಂತೆ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಹಕಾರ ಕ್ಷೇತ್ರವನ್ನು ಬಲಗೊಳಿಸುವ ಕಾರ್ಯವನ್ನು ಎಲ್ಲಾ ಸಹಕಾರಿಗಳು ಜೊತೆಗೂಡಿ ಮಾಡಬೇಕಿದೆ ಎಂದು ಜಿಂಕಲ್ ಬಸವರಾಜಪ್ಪ ಕರೆ ನೀಡಿದರು.
ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರುರವರು ದೇಶ ಸ್ವಾತಂತ್ರ ಬಂದ ನಂತರ ಸಹಕಾರದಿಂದ ದೇಶದ ಪ್ರಗತಿಗೆ ಕಾರಣರಾದರು ಈ ಹಿನ್ನಲೆಯಲ್ಲಿ ಅವರ ಹುಟ್ಟು ಹಬ್ಬದ ದಿನವನ್ನೇ ಸಹಕಾರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇದು ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು ಇಂದಿಗೆ 66 ವರ್ಷಗಳಾಗಿದೆ ಎಂದ ಅವರು, ಇಂದಿನ ಸಭೆಗಳಾಗಲಿ ಸಪ್ತಾಹವಾಗಲೀ ಸಹಕಾರಿ ಬಂಧುಗಳು ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಿದೆ ಹಿಂದಿನ ವರ್ಷದಲ್ಲಿ ಏನು ಕಾರ್ಯಕ್ರಮ ಮಾಡಿದ್ದೇವೆ ಆದರ ಫಲ ಏನಾಯಿತು ಎಂದು ಅರಿಯುವ ದಿನ ಇದಾಗಿದೆ ವರ್ಷದಲ್ಲಿ ಬೇರೆ ಬೇರೆ ಹಬ್ಬಗಳನ್ನು ಆಚರಿಸುವ ರೀತಿಯಲ್ಲಿ ಸಹಕಾರ ಸಪ್ತಾಹವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.
ಚುನಾವಣೆಯ ಸಮಯದಲ್ಲಿ ಮಾತ್ರವೇ ಶೂರತ್ವವನ್ನು ತೋರಿಸದೇ ಆಯ್ಕೆಯಾಗಿ ಬಂದ ಮೇಲೂ ಸಹಾ ಸಂಘದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂಘ ಮತ್ತು ಸದಸ್ಯರ ಪ್ರಗತಿಗೆ ಕಾರಣರಾಗಬೇಕಿದೆ, ಸಹಕಾರ ಸಂಘಗಳು ಸ್ಥಾಪನೆಯಾಗದಿದ್ದರೆ ಉತ್ಪಾದನೆಯಾದ ವಸ್ತುಗಳ ಮಾರಾಟ ಕಷ್ಟವಾಗುತ್ತಿತು ಆದರೆ ಈಗ ವಿವಿಧ ರೀತಿಯ ಸಹಕಾರ ಸಂಘಗಳು ಸ್ಥಾಪನೆಯಾಗಿ ಅದರ ಪ್ರಗತಿಗೆ ಕಾರಣರಾಗಿದ್ದಾರೆ. ಜಿಂಕಲ್ ಬಸವರಾಜಪ್ಪ ಹೇಳಿದರು.
ಡಿಸಿಸಿ ಬ್ಯಾಂಕ್ ನಿದೇಶಕರಾದ ದ್ಯಾಮಣ್ಣ ಮಾತನಾಡಿ, ಸಹಕಾರ ಸಂಘಗಳನ್ನು ಆದಷ್ಟು ಶೀಘ್ರವಾಗಿ ಕಂಪ್ಯೂಟರೀಕರಣ ಮಾಡಬೇಕಿದೆ ಇದರಿಂದ ಸರ್ಕಾರ ಮತ್ತು ಇಲಾಖೆಯ ಕೆಲಸಗಳು ಸುಲಭವಾಗಿ ಆಗಲಿದೆ, ಈಗ ಏನಾದರೂ ಆದೇಶ ಬಂದರೆ ಅದನ್ನು ಪಡೆಯುವುದಕ್ಕಾಗಿ ಸಹಕಾರ ಇಲಾಖೆಗೆ ವ್ಯಕ್ತಿಯನ್ನು ಕಳುಹಿಸಬೇಕು ಇದರಿಂದ ಸಮಯ ಮತ್ತು ಕೆಲಸ ಕುಂಠಿತವಾಗುತ್ತದೆ ಇದರ ಬದಲಿಗೆ ಸಂಘವನ್ನು ಗಣಕೀರಣ ಮಾಡಿದರೆ ಎಲ್ಲಿಂದ ಎಲ್ಲಿಗೆ ಬೇಕಾದರು ಸಹಾ ಅದೇಶ ಮತ್ತು ಸೂಚನೆಗಳನ್ನು ಪಡೆಯಬಹುದಾಗಿದೆ ಎಂದರು.
ನ.15 ರಂದು ಹೊಸದುರ್ಗದಲ್ಲಿ, ನ. 16ರಂದು ಚಳ್ಳಕೆರೆಯಲ್ಲಿ ನ. 17 ರಂದು ಹಿರಿಯೂರಿನಲ್ಲಿ, ನ.18 ರಂದು ಮೊಳಕಾಲ್ಮೂರಿನಲ್ಲಿ, ನ,19 ರಂದು ಚಿತ್ರದುರ್ಗದ ಶ್ರೀಮಠದ ಅನುಭವ ಮಂಟಪದಲ್ಲಿ ಯುವಜನ ಮಹಿಳಾ ಮತ್ತು ಅಬಲವರ್ಗಕ್ಕಾಗಿ ಸಹಕಾರ ಸಂಸ್ಥೆಗಳು ಎಂಬ ವಾಕ್ಯದಡಿಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಲಿದ್ದು ಗೃಹ ಮತ್ತು ಸಹಕಾರ ಸಚಿವರಾದ ಬಸವರಾಜ್ ಬೊಮ್ಮಯಿ ಭಾಗವಹಿಸಲಿದ್ದಾರೆ ನ. 20ರಂದು ಹೊಳಲ್ಕೆರೆ ಶಿವಪುರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿಸಿಸಿ ಬ್ಯಾಂಕ್ ನ ಮತ್ತೋರ್ವ ನಿರ್ದೇಶಕರಾದ ಸಿ.ವೀರಭದ್ರಬಾಬು ಮಾತನಾಡಿ ಈ ಬಾರಿ ಗ್ರಾಮೀಣ ಸಹಕಾರ ಸಂಸ್ಥೆಗಳ ಮೂಲಕ ಅನ್ವೇಷಣೆ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಸಹಕಾರ ಸಪ್ತಾಹವನ್ನು ಜಿಲ್ಲೆಯ ಎಲ್ಲಾ ಸಹಕಾರಿಗಳು ಹಬ್ಬದ ರೀತಿಯಲ್ಲಿ ಆಚರಣೆಯನ್ನು ಮಾಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಮರೆಡ್ಡಿ ಮಾತನಾಡಿ, ನಮ್ಮ ಯೂನಿಯನ್‍ನಿಂದ ಸಹಕಾರ ಸಂಘಗಳ ಬಗ್ಗೆ ಜನತೆಗೆ ಅರಿವನ್ನು ಮೂಡಿಸುವ ತರಬೇತಿ, ಕಾಲ ಕಾಲಕ್ಕೆ ಸರ್ಕಾರ ಜಾರಿ ಮಾಡುವ ವಿವಿಧ ರೀತಿಯ ಕಾಯ್ದೆಗಳನ್ನು ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಜಿಲ್ಲೆಯಲ್ಲಿ ವಿವಿಧ ರೀತಿಯ 900 ಸಹಕಾರ ಸಂಘಗಳಿದ್ದು ಇದರಲ್ಲಿ 753 ಸಹಕಾರ ಸಂಘಗಳು ಬ್ಯಾಂಕಿಂಗ್, ಹಾಲು ಉತ್ಪಾದನೆ, ಕೃಷಿಯೇತರ ಸಹಕಾರ ಸಂಘಗಳು ಮತ್ತು ಮಹಿಳಾ ಸಹಕಾರ ಸಂಘಗಳು ಕೃಷಿಯ ಪರವಾಗಿ ಕೆಲಸವನ್ನು ನಿರ್ವಹಿಸುತ್ತಿವೆ ಎಂದರು
ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಕರಿಯಪ್ಪ, ನಿರ್ದೇಶಕರಾದ ಪರಮೇಶ್ವರಪ್ಪ, ಕೆ.ಎ.ಸಿದ್ದಪ್ಪ ಶ್ರೀಧರ್, ಹೆಚ್.ಅಂಜನೇಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥಪ್ಪ, ಡಿಸಿಸಿ ಬ್ಯಾಂಕ್ ನಿದೇಶಕ ರಘುರಾಮರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೆಶಕರಾದ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರ ಸಂಘಗಳ ಉಪ ನಿಭಂದಕರಾದ ಗೋಪಾಲರೆಡ್ಡಿ, ಸಹಾಯಕ ನಿಬಂಧಕರಾಧ ತಿಮಯ್ಯ, ಸಹಕಾರ ಅಭೀವೃದ್ದಿ ಅಧಿಕಾರಿ ಬಷೀರ್ ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು .ಜಿಲ್ಲಾ ಸಹಕಾರ ಯೂನಿಯನ್‍ನ ಪ್ರ. ಮುಖ್ಯ ಕಾರ್ಯನಿರ್ವಹಕಾಧಿಕಾರಿ ಮಾರುತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
