ಹೊನ್ನಾಳಿ:
ಪಟ್ಟಣದ ಮೋಹನ್ ಎನ್‍ಕ್ಲೇವ್‍ನ ವಿಜಯಲಕ್ಷ್ಮೀ ಲಾಡ್ಜ್ ಮೇಲೆ ಭಾನುವಾರ ಐಟಿ ದಾಳಿ ನಡೆದಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸುರೇಶ್ ರೆಡ್ಡಿ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಎಸಿಬಿ, ಸಿಪಿಐ ನೇತೃತ್ವದ ತಂಡ ಈ ದಾಳಿ ನಡೆಸಿದೆ.ಲಾಡ್ಜ್‍ನ ಎಲ್ಲಾ ಸಿಸಿಟಿವಿ, ಹಾರ್ಡ್ ಡಿಸ್ಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಣದ ವ್ಯವಹಾರದ ಬಗ್ಗೆ ಮಾಹಿತಿ ಲಭ್ಯವಿಲ್ಲ. ನ್ಯಾಮತಿ ತಾಲೂಕು ಗಂಗನಕೋಟೆ ಗ್ರಾಮದ ಭೋಜರಾಜ್ ಎಂಬಾತನನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ