ಬ್ಯಾಡಗಿ:
ಪುಸ್ತಕಗಳು ಒಂದು ಸಿದ್ಧಾಂತವಿದ್ದಂತೆ ಸಮಾಜದ ಇತಿಹಾಸವನ್ನು ಜೀವಂತವಾಗಿಡುವ ಕೆಲಸವನ್ನು ಪುಸ್ತಕಗಳು ಮಾಡುತ್ತಿದ್ದರೇ, ಲೇಖಕರ ವಿಚಾರ ಗಳು ಸಮಾಜದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಲಿವೆ ಎಂದು ಡಾ.ಎಸ್.ಜಿ.ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಜರುಗಿದ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ರಚಿಸಿದ ‘ಜಗದ ಬೆಳಕು’ ಕವನ ಸಂಕಲನ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಅದರಲ್ಲಿನ ಅಡಕಗಳನ್ನು ಅಕ್ಷರ ರೂಪದಲ್ಲಿ ಹೊರತರುವಂತಹ ಕೆಲಸ ಲೇಖಕರಿಂದಾಗುತ್ತಿದೆ, ಆದರೆ ಪುಸ್ತಕಗಳನ್ನು ರಚಿಸುವ ಕೆಲಸವೆಂದರೆ ತಮ್ಮ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಥವಾ ಇನ್ನಾವುದೋ ಪ್ರಶಸ್ತಿ ಗಳಿಸಲು ನಡೆಸುವ ಪೂರ್ವಸಿದ್ಧತೆ ಎಂಬ ತಪ್ಪು ಕಲ್ಪನೆಗಳು ಮೂಡುತ್ತಿರುವುದು ಖೇದಕರ ಸಂಗತಿ ಎಂದರು.
ಪುಸ್ತಕಗಳನ್ನು ರಚಿಸುವುದರ ಹಿಂದಿರುವಂತಹ ಶ್ರಮವನ್ನು ಪರಿಗಣಿಸದೇ ಇಂತಹ ಅರ್ಥಹೀನ ಮಾತುಗಳಿಂದ ಕನ್ನಡದ ಬೆಳವಣಿಗೆಗೆ ಧಕ್ಕೆಯಾ ಗುತ್ತಿದೆ, ಕವನ ಸಂಕಲನದ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಲು ಸಾಕಷ್ಟು ಕಾಲವಕಾಶಬೇಕು, ಸಮಾಜದಲ್ಲಿ ಲೇಖಕರನ್ನು ಗೌರವಿಸುವ ಕೆಲಸವಾಗಬೇಕಾಗಿದೆ, ಅದರಲ್ಲೂ ವಿಶ್ರಾಂತ ಉಪನಿರ್ದೇಶಕರೊಬ್ಬರು ಕನ್ನಡದ ಬಗ್ಗೆ ಕಾಳಜಿ ವಹಿಸುವ ಮೂಲಕ ಕವನ ಸಂಕಲವನ್ನು ಹೊರ ತಂದಿರುವುದು ಸಂತಸದ ಸಂಗತಿ ಎಂದರು.
ಅನುವಾದಕನೆಂದರೆ ಕೊಲೆಗಾರ: ವಿಶ್ರಾಂತ ಪ್ರಾಧ್ಯಾಪಕ ಡಾ.ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ತುರ್ಜುಮೆ ಮಾಡುವುದೆಂದರೆ ಆಗಾಧವಾದ ಕೆಲಸ ಮತ್ತು ಬಹಳಷ್ಟು ಕಷ್ಟದ ಕೆಲಸವಾಗಿದೆ, ಅನುವಾದಕರು ಒಂದು ಸಣ್ಣ ತಪ್ಪು ಮಾಡಿದರೂ ಕೊಲೆಗಾರನ ಸ್ಥಾನವನ್ನು ನಿಭಾಯಿಸಬೇಕಾಗುತ್ತದೆ, ಹೀಗಾಗಿ ನೇರವಾಗಿ ಕವನ ಸಂಕಲನ ರಚಿಸಿಕೊಳ್ಳುವುದಕ್ಕಿಂತ ಅನುವಾದಕತೆ ಕಷ್ಟದ ಕೆಲಸ ಪ್ರಸ್ತುತ ಕವನ ಸಂಕಲನದಲ್ಲಿ ಆಂಗ್ಲ ಭಾಷೆಯ ಪದಗಳನ್ನು ಕನ್ನಡೀಕರಣ ಮಾಡಿ, ಅರ್ಥವತ್ತಾಗಿ ಬಳಸಿಕೊಳ್ಳಲಾಗಿದೆ ಎಂದರು. ಕಥನ ಕವನಗಳಂತೆ, ಮಕ್ಕಳಿಗೆ ನೀತಿ ಬೋಧನೆಯ ಕಥೆಗಳನ್ನು ಬರೆಯುವ ಅವಶ್ಯಕತೆಯಿದೆ ಅಂದಾಗ ಮಾತ್ರ ನಾವುಗಳು ಸಾಂಸ್ಕøತಿಕ ಸಮಾಜವನ್ನು ಕಟ್ಟುವ ಕೆಲಸ ಮಾಡಿದಂತಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕವಿ ಗಂಗಾಧರ ನಂದಿ, ಜಿ.ಎಂ.ಮಠದ, ಎಸ್.ಎಂ.ಪಾಟೀಲ, ತಾಲೂಕಾ ಕ.ಸಾ.ಪ.ಅಧ್ಯಕ್ಷ ಜಗಾಪೂರ, ಜಿಲ್ಲಾ ಶ.ಸಾ.ಪ.ಅಧ್ಯಕ್ಷ ಮಾರುತಿ ಶಿಡ್ಲಾಪೂರ. ಜಿಲ್ಲಾ ಚು.ಸಾ.ಪ.ಅಧ್ಯಕ್ಷ ಜೀವರಾಜ ಛತ್ರದ, ಅಂತರರಾಷ್ಟ್ರೀಯ ಛಾಯಾಗ್ರಾಹಕ ಶಶಿಧರಸ್ವಾಮಿ. ಹಿರೇಮಠ, ರಾಮಣ್ಣ ಮತ್ತೂರು, ಕೆ.ಪಿ.ಬ್ಯಾಡಗಿ, ಶಿವಬಸಪ್ಪ ಕುಳೇನೂರ, ಮಲ್ಲಿಕಾರ್ಜುನ ಬಳ್ಳಾರಿ, ಶಿವಾನಂದ ಬೆನ್ನೂರ, ಮಲ್ಲಪ್ಪ ಕರೆಣ್ಣನವರ, ವೀರೇಶ ಹಿತ್ತಲಮನಿ, ಎ.ಟಿ.ಪೀಠದ, ನಾಮದೇವ ಕಾಗದಗಾರ, ಸುರೇಶ ಬೆಟಗೇರಿ ಎಸ್.ಎನ್.ಪೋಲೇಶಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸನ್ಮಾನಿಸಲಾಯಿತು. ಪ್ರಕಾಶ ಮನ್ನಂಗಿ ಸ್ವಾಗತಿಸಿದರು, ಶಿಕ್ಷಕ ಮಲ್ಲಪ್ಪ ಕರೆಣ್ಣನವರ ವಂದಿಸಿದರು, ಶಿಕ್ಷಕರಾದ ನಾಗರಾಜ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








