ಜಲಕ್ಷಾಮಾಕ್ಕೆ ಮಳೆನೀರು ಸಂಗ್ರಹವೇ ಪರಿಹಾರ

ಹಿರಿಯೂರು :

     ಚಿತ್ರದುರ್ಗ ಜಿಲ್ಲೆ ಹಿರಿಯೂರು, ಶಿರಾ ಭಾಗಗಳಲ್ಲಿ ಅತಿಯಾದ ಜಲಕ್ಷಾಮಾ ಉಂಟಾಗಲು ಪರಿಸರ ಮಳೆ ಕೊರತೆ ಕಾರಣವಾಗಿದ್ದು, ಇದಕ್ಕೆ ಮಳೆ ನೀರು ಸಂಗ್ರಹವೇ ಪರಿಹಾರವೆಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಹೇಳಿದರು.

      ಹಿರಿಯೂರು ಸುಗ್ಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನದಿ, ಕೆರೆ ಸಂರಕ್ಷಣೆ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜಸ್ಥಾನದ ಮರಳುಗಾಡು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪ್ರದೇಶದಲ್ಲಿ ಅತಿ ಕಡಿಮೆ ಮಳೆಯಾಗುವ ಹವಾಗುಣವಿದ್ದು, ನೀರಿನ ಕೊರತೆ ನಿಗ್ರಹಿಸಲು ಮಳೆ ನೀರನ್ನು ಸಂಗ್ರಹಿಸುವಂತಹ ವ್ಯವಸ್ಥೆಯನ್ನು ರೂಢಿಸಿಕೊಳ್ಳುವುದು ಅಗತ್ಯವೆಂದು ಹೇಳಿದರು.

      ಜಲ ಮೂಲಗಳ ಬಗ್ಗೆ ಅಧ್ಯಯನ, ಸಂಶೋಧನೆಗಳಂತಹ ಪರಿಪಾಠಗಳು ನಡೆಯುತ್ತಿವೆ. ಆದರೆ ನೀರಿನ ಪೂರ್ಣ ಪ್ರಮಾಣದ ಮೂಲವಾಗಿರುವ ಮಳೆ ನೀರನ್ನು ಹೊರತುಪಡಿಸಿದರೆ ಯಾವುದೇ ಜಲಮೂಲಗಳು ನೀರನ್ನು ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈಗಾಗಲೇ ಹಲವು ತಾಂತ್ರಿಕ ಅಧ್ಯಯನಗಳು, ವರದಿಗಳು ಹೇಳಲ್ಪಟ್ಟಿರುವ ಹಾಗೆ ಕೆಲವೇ ವರ್ಷಗಳಲ್ಲಿ ಸಂಪೂರ್ಣ ಜಲಕ್ಷಾಮಾದಿಂದ ನರಳಬೇಕಾದ ಪರಿಸ್ಥಿತಿ ಬರಬಹುದೆಂಬ ಆತಂಕದ ಮಾತುಗಳು ನಮ್ಮನ್ನು ಕಂಗೆಡಿಸಿದೆ ಎಂದು ಪ್ರೋ.ರವಿವರ್ಮ ಕುಮಾರ್ ಹೇಳಿದರು.

      ಜಲಮೂಲಗಳ ಸಂರಕ್ಷಣೆ, ಮಳೆ ನೀರು ಸಂಗ್ರಹ, ಕೆರೆ, ಕುಂಟೆ, ಕಾಲುವೆಗಳ ರಕ್ಷಣೆ, ನದಿಗಳ ಪುನಃಶ್ಚೇತನದಂತಹ ಕಾರ್ಯಕೈಗೊಳ್ಳಲು ಯುವಜನರು ಸಜ್ಜಾಗಬೇಕಾದ ಅನಿವಾರ್ಯತೆ ಇದ್ದು, ಆ ನಿಟ್ಟಿನಲ್ಲಿ ಸಂಘಟನೆ ಮಾಡಬೇಕಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿ, ಬೈಲು ಸೀಮೆಯ ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆ ಈಗಾಗಲೇ ಕಾಮಗಾರಿ ಆರಂಭಗೊಂಡು ಇನ್ನೊಂದು ವರ್ಷಕ್ಕೆ ಹತ್ತುವರ್ಷಗಳೇ ಕಳೆಯುತ್ತಾ ಬಂತು.

      ಆದರೂ ಸಹ ಕಾಮಗಾರಿಯಲ್ಲಿ ನಿರಂತರವಾಗಿ ವಿಳಂಭವಾಗುತ್ತಿದೆ. ಆದರಿಂದಾಗಿ ರೈತರು ಬೆಳೆದಂತಹ ಅಡಿಕೆ, ತೆಂಗು, ಬಾಳೆ, ತೋಟಗಳು ಒಣಗುತ್ತಿದ್ದು, ರೈತ ಜೀವಿಗಳು ಕಂಗಾಲಾಗುತ್ತಿದ್ದಾರೆ. ಅಷ್ಟಕ್ಕೆ ನಿಲ್ಲದ ಪರಿಸ್ಥಿತಿಯು ಇಡೀ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

       ತುಮಕೂರಿನ ಸಾಮಾಜಿಕ ಕಾರ್ಯಕರ್ತ ಯತಿರಾಜ್‍ರವರು ಮಾತನಾಡಿ, ರಾಜಸ್ಥಾನದಲ್ಲಿ ಬತ್ತಿಹೋದ ನದಿ, ಕೆರೆ, ಕುಂಟೆ, ಕಾಲುವೆಗಳನ್ನು ಮಳೆ ನೀರು ಸಂಗ್ರಹಿಸುವ ಮೂಲಕ ಪುನರುಜ್ಜೀವಗೊಳಿಸಿದ ರಾಜೇಂದ್ರ ಸಿಂಗ್ ಅವರನ್ನು ಮಾದರಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚಿತ್ರದುರ್ಗ, ಹಿರಿಯೂರು, ಶಿರಾ ತಾಲ್ಲೂಕುಗಳಲ್ಲಿರುವಂತಹ ನದಿ, ಕೆರೆ, ಕಾಲುವೆಗಳಿಗೆ ಜೀವ ತುಂಬುವಂತಹ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.

       ಸಭೆಯಲ್ಲಿ ಹಿರಿಯೂರು ತಾಲ್ಲೂಕು ಪಂಚಾಯತಿಯ ಮಾಜಿ ಅಧ್ಯಕ್ಷ ತಿಪ್ಪೀರಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಡಿ.ರವಿ, ನೀರಾವರಿ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ. ಸಿ. ಹೊರಕೇರಪ್ಪ , ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಕುಂಬರೇಶ್, ನಗರಸಭೆ ಸದಸ್ಯ ವಿ. ಶಿವಣ್ಣ ಯಾದವ್, ವಕೀಲರಾದ ಜಬೀವುಲ್ಲಾ, ರೈತ ಮುಖಂಡರಾದ ಬಬ್ಬೂರು ಸುರೇಶ್, ಮಲ್ಲಿಕಾರ್ಜುನಪ್ಪ, ಸಂಪತ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಪರಮೇಶ್ವರಪ್ಪ, ಭೀಮಸಮುದ್ರ ಈಶ್ವರಪ್ಪ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap