ಉತ್ತರ ಕೊರಿಯಾ:
ಉತ್ತರ ಕೊರಿಯಾ ದೇಶದಲ್ಲಿ ನಿರಂಕುಶ ಪ್ರಭುತ್ವವು ಅಸ್ತಿತ್ವದಲ್ಲಿದ್ದು, ಅದು ಪ್ರಪಂಚದ ಇತರ ಭಾಗಗಳಿಗಿಂತ ವಿಭಿನ್ನ ನಿಯಮಗಳನ್ನು ಅನುಸರಿಸುತ್ತದೆ. ಅವರ ಸರ್ವೋಚ್ಚ ನಾಯಕನಾಗಿರುವ ಕಿಮ್ ಜೊಂಗ್-ಉನ್ ನ ಕೆಲವು ವಿಚಿತ್ರ ಹಾಗೂ ಆಘಾತಕಾರಿ ನಿರ್ಧಾರಗಳಿಂದಾಗಿ ಈ ದೇಶ ಆಗಾಗ್ಗೆ ಸುದ್ದಿಯಲ್ಲಿರುತ್ತದೆ.
ಇದೀಗ ನಿರಂಕುಶ ರಾಷ್ಟ್ರವು ಮತ್ತೊಂದು ವಿಲಕ್ಷಣ ಸುದ್ದಿಯಲ್ಲಿದೆ. ಕಿಮ್ ಜೊಂಗ್-ಇಲ್ ಅವರ ಜನ್ಮದಿನದಂದು ಹೂವುಗಳು ಅರಳಿಲ್ಲವಾದ್ದರಿಂದ ಸರ್ವೋಚ್ಚ ನಾಯಕ ಕಿಮ್ ಜೊಂಗ್-ಉನ್ ತೋಟದ ಕೆಲಸದಾಳುಗಳನ್ನು ಕಾರ್ಮಿಕ ಶಿಬಿರಗಳಿಗೆ ಕಳುಹಿಸುವ ಮುಖಾಂತರ ಶಿಕ್ಷೆ ವಿಧಿಸಲಾಗಿದೆ.
ವರದಿಗಳ ಪ್ರಕಾರ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ನ ತಂದೆಯ ಜನ್ಮದಿನದ ಸಂದರ್ಭದಲ್ಲಿ ಕಿಮ್ಜೋಂಗಿಲಿಯಾ ಬೆಗೋನಿಯಾ ಹೂವುಗಳು ಸಕಾಲದಲ್ಲಿ ಅರಳುವುದಿಲ್ಲ ಎಂದು ತಿಳಿಸಲಾಗಿದೆ. ಇದರಿಂದ ಸರ್ವಾಧಿಕಾರಿಯು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಿಮ್ಜೊಂಗಿಲಿಯಾ ಬೆಗೊನಿಯಾಸ್ ಹೂವಿಗೆ ಕಿಮ್ ಜೊಂಗ್-ಇಲ್ ಅವರ ಹೆಸರನ್ನು ಇಡಲಾಗಿದೆ. ಅವು ಸಮಯಕ್ಕೆ ಸರಿಯಾಗಿ ಅರಳಿದ್ದರೆ, ಫೆಬ್ರವರಿ 16 ರಂದು ಜನ್ಮದಿನ ಆಚರಿಸಲು ಈ ಹೂವುಗಳೇ ಕೇಂದ್ರಬಿಂದುವಾಗಿರುತ್ತಿದ್ದವು.
ಡಿಸೆಂಬರ್ 2021ರಲ್ಲಿ, ಮಾಜಿ ನಾಯಕ ಕಿಮ್ ಜೊಂಗ್ ಇಲ್ ಅವರ ಹತ್ತನೇ ವರ್ಷದ ಪುಣ್ಯತಿಥಿಯಂದು, ಉತ್ತರ ಕೊರಿಯಾ ನಾಗರಿಕರಿಗೆ 11 ದಿನಗಳವರೆಗೆ ನಗುವುದು, ಮದ್ಯಪಾನ ಸೇವನೆ ಮತ್ತು ದಿನಸಿ ಶಾಪಿಂಗ್ ಮಾಡುವುದನ್ನು ನಿರ್ಬಂಧಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ