ಜನನ ಕಲಿಕಾ ಕಾರ್ಯಕ್ರಮ ಆರಂಭ

ದಾವಣಗೆರೆ:

      ಬೆಂಗಳೂರಿನ ಕಾರ್ಗಿಲ್ ಬಿಜಿನೆಸ್ ಸರ್ವೀಸಸ್(ಸಿಬಿಎಸ್), ಯುನೈಟೆಡ್ ವೇ ಸಹಯೋಗದೊಂದಿಗೆ ಬೆಳ್ಳಂದೂರಿನ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗಾಗಿ ಜನನ ಕಲಿಕಾ ಕಾರ್ಯಕ್ರಮ ಆರಂಭಿಸಲಾಗಿದೆ

      0-6 ವರ್ಷ ವಯೋಮಿತಿಯೊಳಗಿರುವ 1000ಕ್ಕಿಂತ ಹೆಚ್ಚಿನ ಮಕ್ಕಳಿಗೆ ಗರಿಷ್ಠ ಕಲಿಕಾ ಪರಿಸರವನ್ನು ಖಾತರಿಪಡಿಸಿ ಆರೋಗ್ಯ, ಶುಚಿತ್ವ, ಮತ್ತು ಪೌಷ್ಟಿಕಾಂಶದ ಬಗ್ಗೆ ಅವರ ಜಾಗೃತಿಯನ್ನು ಹೆಚ್ಚಿಸಲಿದೆ.

      ಈ ಅಂಗನವಾಡಿ ಕೇಂದ್ರಗಳ ಪೈಕಿ ನಾಲ್ಕು ಅಂಗನವಾಡಿಗಳಲ್ಲಿ ಈಗಾಗಲೇ ಕಲಿಕಾ ಕಾರ್ಯಕ್ರಮ ಪೂರ್ಣಗೊಂಡಿದ್ದು, ಉಳಿದ ಆರು ಕೇಂದ್ರಗಳನ್ನು ಈ ವರ್ಷದ ಅಂತ್ಯದ ವೇಳೆಗೆ, ಸುಧಾರಿತ ಹೊರಾಂಗಣ ಮತ್ತು ಒಳಾಂಗಣ ಸೌಲಭ್ಯಗಳೂ ಒಳಗೊಂಡಂತೆ ಸಂಪೂರ್ಣ ಮೂಲಭೂತ ಸೌಕರ್ಯ ಮಾರ್ಪಾಡಿಗೆ ಒಳಗಾಗಲಿವೆ. ಕಾರ್ಗಿಲ್, ದೊಡ್ಡಬಳ್ಳಾಪುರದಲ್ಲೂ ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅಲ್ಲಿನ ಐದು ಕೇಂದ್ರಗಳಿಗೆ ಬೆಂಬಲ ಒದಗಿಸುತ್ತಿದೆ. ಇದರಿಂದ ಬೆಂಗಳೂರಿನಲ್ಲಿ ಕಾರ್ಗಿಲ್ ಬೆಂಬಲ ನೀಡುತ್ತಿರುವ ಕೇಂದ್ರಗಳ ಸಂಖ್ಯೆ 15 ಆಗಲಿದೆ.

      ಕಾರ್ಗಿಲ್‍ಮತ್ತು ಯುನೈಟೆಡ್ ವೇ ಬೆಂಗಳೂರು, ಬಡತನ, ಹಸಿವೆ, ಆರೋಗ್ಯ(ಶಿಶು ಮರಣ ಒಳಗೊಂಡಂತೆ), ಶಿಕ್ಷಣ, ಲಿಂಗ, ನೀರು, ನೈರ್ಮಲ್ಯ, ಮತ್ತು ಅಸಮಾನತೆ ಎಂಬ ವಿಶ್ವ ಸಂಸ್ಥೆಯ ಕನಿಷ್ಟ ಏಳು ಊರ್ಜಿತವಾಗಬಲ್ಲ ಅಭಿವೃದ್ಧಿ ಗುರಿಗಳ ಮೇಲೆ ಒಟ್ಟಿಗೆ ಕಾರ್ಯನಿರ್ವಹಿಸಲಿವೆ.   

       ಕಾರ್ಗಿಲ್ ಬಿಜಿನೆಸ್ ಸರ್ವೀಸಸ್‍ನ ನಿರ್ದೇಶಕಿ ಲಲಿತಾ ಇಂದ್ರಕಾಂತಿ ಮಾತನಾಡಿ , ನಾವು ವಿಶೇಷವಾಗಿ ಮಕ್ಕಳ ಆರೋಗ್ಯ, ನೈರ್ಮಲ್ಯ ಮತ್ತು ಸರಿಯಾದ ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಾರ್ಯನಿರ್ವಹಿಸಲ ಬದ್ದರಾಗಿದ್ದೇವೆ. ಬರುವ ಮೂರು ವರ್ಷಗಳಲ್ಲಿ 1000ಕ್ಕಿಂತ ಹೆಚ್ಚಿನ ಮಕ್ಕಳು, ತಾಯಂದಿರು ಮತ್ತು ಐಸಿಡಿಎಸ್ ಸಿಬ್ಬಂದಿ ತಲುಪಿ, ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕೆ ತಯಾರಿಸುವಲ್ಲಿ ಅವರಿಗೆ ಆರಂಭಿಕ ಶೈಕ್ಷಣಿಕ ಬೆಳವಣಿಗೆ, ಆರೈಕೆ, ಹಾಗು ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಗುಣಮಟ್ಟದ ಪ್ರವೇಶಾವಕಾಶವನ್ನು ಖಾತರಿಪಡಿಸುವುದು ನಮ್ಮ ಗುರಿಯಾಗಿದೆ ಎಂದರು.ಯುನೈಟೆಡ್ ವೇ ಬೆಂಗಳೂರಿನ ಮುಖ್ಯ ಕಾರ್ಯಕಾರಿ ಅಧಿಕಾರಿ ಮನೀಶ್ ಮೈಕೇಲ್‍ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link