ದಾವಣಗೆರೆ :
ಇಲ್ಲಿನ ಬಿಐಇಟಿ ಕಾಲೇಜಿನ ಜವಳಿ ವಿಭಾಗದಿಂದ ಕಾಲೇಜು ಆವರಣದಲ್ಲಿರುವ ಎಸ್ಸೆಸ್ಸೆಂ ಸಾಂಸ್ಕೃತಿಕ ಸಭಾ ಭವನದಲ್ಲಿ ಇಂದು ಮತ್ತು ನಾಳೆ ಟೆಕ್ಸ್ ಕ್ರಿಯೇಟಿವ್-19 ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಎಂ.ಸಿ.ನಟರಾಜ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.29ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಶಾಹಿ ಎಕ್ಸ್ಪೋಟ್ಸ್ ಪ್ರೈವೇಟ್ ಲಿಮಿಟೆಡ್ನ ಸೀನಿಯರ್ ಮರ್ಚೆಂಡೈಸರ್ ಶಗುಫ್ತಾ ಪರ್ವಿನ್, ಸಹರಾ ಅಪೆರಲ್ಸ್ನ ಜನರಲ್ ಮ್ಯಾನೇಜರ್ ರೇವತಿ ರಾಮನ್ ಮತ್ತಿತರರು ಭಾಗವಹಿಸಲಿದ್ದಾರೆ. ವಿಭಾಗದ ಮುಖ್ಯಸ್ಥ ಡಾ.ಕೆ.ಮುರುಗೇಶ್ ಬಾಬು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ದೇಶದ ವಿವಿಧ ಟೆಕ್ಸ್ಟೈಲ್ ಮತ್ತು ಫ್ಯಾಷನ್ ಕಾಲೇಜಿನ ವಿದ್ಯಾರ್ಥಿಗಳು ಜವಳಿ ಉದ್ಯಮದಲ್ಲಿ ಇತ್ತೀಚೆಗೆ ಆಗಿರುವ ಹೊಸ ಆವಿಷ್ಕಾರ, ಸಂಶೋಧನೆ ಮತ್ತು ಬೆಳವಣಿಗೆಗಳ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ರಾಜ್ಯಗಳ ವಿದ್ಯಾರ್ಥಿಗಳು ವಿಚಾರ ಸಂಕಿರಣಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ಫ್ಯಾಷನ್ ಉಡುಪುಗಳ ಪ್ರದರ್ಶನ ಸಹ ನಡೆಯಲಿದೆ ಎಂದು ಅವರ ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ