ಹಾವೇರಿ :
ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಸಾಹಿತ್ಯ ಮತ್ತು ಸಾಂಸ್ಕತಿಕ ಪ್ರತಿರೋಧದ ಮೂಲಕ ಉತ್ತರ ಕಂಡುಕೊಳ್ಳುವ ಆಶಯದೊಂದಿಗೆ ಹುಟ್ಟಿಕೊಂಡಿರುವುದೇ ಜನನುಡಿ, ದೇಶದ ಅಂತಃಸತ್ವವೇ ಬಹುಸಂಸ್ಕøತಿ ಮತ್ತು ಸಾಮರಸ್ಯ. ಇಂದು ಈ ಸಾಮರಸ್ಯ ಮತ್ತು ಬಹುತ್ವದ ಮೇಲಿನ ಧಾಳಿ ಹೆಚ್ಚಾಗುತ್ತಿದ್ದು ದೇಶಾದ್ಯಂತ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಎದೆಯೊಡ್ಡಿ ಧೈರ್ಯದಿಂದ ಮಾತನಾಡತೊಡಗಿದ್ದಾರೆ.
ಬೀದಿಗಿಳಿದು ಪ್ರತಿಭಟಿಸತೊಡಗಿದ್ದಾರೆ. ಜನತೆಯನ್ನು ಒಡೆದು, ಪರಸ್ಪರ ಅಪನಂಬಿಕೆ ಹುಟ್ಟಿಸಿ, ಪ್ರತ್ಯೇಕವಾಗಿಸಿ ಸ್ವತಃ ಕಾದಾಡಿ ನಾಶವಾಗುವಂತೆ ಮಾಡುತ್ತಿರುವ ಕೋಮುವಾದದ ದುಷ್ಟತನವನ್ನು ಪ್ರಶ್ನಿಸುತ್ತಿದ್ದಾರೆ. ಇಂತಹ ಎಚ್ಚರ ಮೂಡಿಸುವ ಕೆಲಸಕ್ಕಾಗಿಯೇ ಜನನುಡಿ ಜನ್ಮ ತಾಳಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್.ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಜನನುಡಿ ಕಾರ್ಯಕ್ರಮದ ಆಹ್ವಾನಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಇಡೀ ದೇಶ ಸಂಕ್ರಮಣ ಪರ್ವದಲ್ಲಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಶೋಷಣೆಗೊಳಗಾಗಿ ತಮ್ಮ ದನಿ ಕಳೆದುಕೊಂಡಿದ್ದ ಬಡವರು, ಮಹಿಳೆಯರು,ಶೋಷಿತರು, ಕಾರ್ಮಿಕರು, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಇಂದು ತಮ್ಮ ದನಿ ಪಡೆದುಕೊಂಡು ಶೋಷಣೆ, ಕಟ್ಟುಪಾಡುಗಳು ದೌರ್ಜನ್ಯಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಪ್ರಭುತ್ವ ವಿರುದ್ಧ ಮಾತನಾಡುವ ಕತೆ, ಕವನ ಸಾಹಿತಿ, ಚಳುವಳಿಗಾರರನ್ನು ಅರ್ಬನ್ ನಕ್ಸಲ್ ಎಮಬ ಹೆಸರಿನಲ್ಲಿ ಬಂಧಿಸಲಾಗುತ್ತಿದೆ ಈ ಮೂಲಕ ಸತ್ಯ, ನಿಷ್ಠುರ ಮತ್ತು ನ್ಯಾಯದ ಪರ ಮಾತನಾಡುವವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡಲಾಗುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಕ್ತವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದ ಉಸಿರುಕಟ್ಟಿಸುವ ವಾತಾವರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿದೆ. ಚುನಾಯಿತ ಪ್ರಧಾನಿ ವಿರುದ್ಧ ಮಾತ್ರವಲ್ಲ, ಮೂಡನಂಬಿಕೆ, ಕಂದಾಚಾರ, ಜಾತೀಯತೆ, ಪುರೋಹಿತಶಾಹಿ ವಿರುದ್ಧ ಮಾತನಾಡುವವರ ಕೊರಳು ಹಿಸುಕುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಸಾಹಿತಿಗಳು, ವಿಚಾರವಾದಿಗಳು, ಹೋರಾಟಗಾರರ ಬಗ್ಗೆ ಸಮಾಜದಲ್ಲಿ ತಾತ್ವಿಕವಾದ ಭಿನ್ನಾಭಿಪ್ರಾಯ ಹೊಂದಿದ್ದರೂ ಕೂಡ ಪರಸ್ಪರ ಗೌರವದಿಂದ ನಡೆಸಿಕೊಳ್ಳುವ ಸಂಸ್ಕತಿ ನಮ್ಮದು.
ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾಹಿತಿಗಳು, ಚಿಂತಕರು, ಬುದ್ದೀಜೀವಿಗಳು, ಪತ್ರಕರ್ತರು, ಹೋರಾಟಗಾರರಲ್ಲಿ ಒಬ್ಬೊಬ್ಬರನ್ನೆ ಆಯ್ದು ಅವರನ್ನು ಹಂಗಿಸಿ, ನಿಂದಿಸಿ ಅಪಹಾಸ್ಯ ಮಾಡಿ, ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ ಹರಣ ಮಾಡುವ ಪ್ರಯತ್ನಗಳು ನಡೆದಿದೆ. ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಡಾ. ಎಂಎಂ ಕಲಬುರ್ಗಿ ಮತ್ತು ನಮ್ಮೆಲ್ಲರ ಮಾರ್ಗದಶಿಯಾಗಿದ್ದ ಗೌರಿ ಲಂಕೇಶ್ ರನ್ನು ಕನ್ನಡದ ನೆಲದಲ್ಲೇ ಗುಂಡಿಕ್ಕಿ ಕೊಲ್ಲುವವರೆಗೆ ಮುಂದುವರೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಾರಿಯ ಜನನುಡಿಯನ್ನು ಜಸ್ಟೀಸ್ ನಾಗಮೋಹನದಾಸ್ ಉದ್ಘಾಟಿಸಲಿದ್ದು,ಖ್ಯಾತ ಬಹುಭಾಷಾ ನಟರಾದ ಪ್ರಕಾಶ ರೈ, ಚಿಂತಕರಾದ ಡಾ. ಹಸೀನಾ ಖಾದ್ರಿ, ದಲಿತ ಹೋರಾಟಗಾರರಾದ ಎಂ ದೇವದಾಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಡಾ. ವಿನಯಾ ವಕ್ಕುಂದ ಅಧ್ಯಕ್ಷತೆ ವಹಿಸಲಿದ್ದಾರೆ. ಭವಿಷ್ಯದ ಭಾರತ: ಮಾಕ್ರ್ಸ, ಅಂಬೇಡ್ಕರ್, ಗಾಂಧಿ, ಲೋಹಿಯಾ ಎಂಬ ಮೊದಲ ಗೋಷ್ಟಿ ನಡೆಯಲಿದ್ದು ಜಿ. ರಾಜಶೇಖರ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಮುಜಾಪರ ಅಸ್ಸಾದಿ, ಡಾ. ಡಿ. ಡಾಮನಿಕ್ ವಿಚಾರ ಮಂಡನೆ ಮಾಡಲಿದ್ದಾರೆ.
ಭಾರತದ ಮುಸ್ಲಿಮರು” ಘೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಅಬ್ದುಸಲ್ಲಾಂ ಪುತ್ತಿಗೆಯವರು ಉಪನ್ಯಾಸ ನೀಡಲಿದ್ದಾರೆ. ಮೊದಲ ದಿನದ ಸಂಜೆ ಕೊರಗರ ಗಜಮೇಳ, ಬ್ಯಾರಿ ಸಮುದಾಯದ ದಪ್ಪುಕುಣಿತ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳುನಡೆಯಲಿದ್ದು ದಲಿತ ಹೋರಾಟಗಾರ್ತಿ ಸುಶೀಲಾ ನಾಡ ಸಾಂಸ್ಖøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಎರಡನೆಯ ದಿನವಾದ ಡಿಸೆಂಬರ್ 2 ರಂದು ಬೆಳಿಗ್ಗೆ ಕವಿಗೋಷ್ಠಿ ನಡೆಯಲಿದ್ದು ಹಿರಿಯ ಕವಿ ಚಿದಂಬರ ನರೇಂದ್ರ ಅವರು ಕವಿಗೋಷ್ಠಿಗೆ ಚಾಲನೆ ನೀಡುವರು. ರಾಜ್ಯದ ವಿವಿಧ ಜಿಲ್ಲೆಗಳ ಇಪ್ಪತ್ತು ಜನ ಕವಿಗಳು ಕವಿತೆ ವಾಚನ ಮಾಡುವರು. ಹೊರಳುನೋಟ ಎಂಬ ಘೋಷ್ಠಿಯಲ್ಲಿ ಮಹೇಂದ್ರಕುಮಾರ್, ಸುಧೀರ ಕುಮಾರ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ವಿಷಯ ಮಂಡನೆ ಮಡಲಿದ್ದಾರೆ.
ದಲಿತ ಭಾರತ ಎಂಬ ಸಂವಾದ ಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ದಲಿತ ಚಿಂತಕರಾದ ಡಾ. ಎಂನಾರಾಯಣಸ್ವಾಮಿ ವಹಿಸಲಿದ್ದು, ರವಿಕುಮಾರ ಟೆಲೆಕ್ಸ್, ಡಾ. ಪುಷ್ಪಾ ಅಮರೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಮಹಿಳಾ ಭಾರತ ಸಂವಾದ ಗೋಷ್ಟಿ ಅಧ್ಯಕ್ಷತೆಯನ್ನು ಡಾ. ಎಚ್.ಎಸ್ ಅನುಪಮಾ ನಡೆಸಿಕೊಡಲಿದ್ದು, ಡಾ. ಚಮನ್ ಪರ್ಜನ್, ಸೌಮ್ಯ ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ದಿನೇಶ್ ಅನೀನ್ ಮಟ್ಟು ರವರು ವಹಿಸಲಿದ್ದು, ಪ್ರೊ. ವಲೇರಿಯನ್ ರೋಡ್ರಿಗಸ್ ಸಮಾರೋಪ ಭಾಷಣ ಮಾಡುವರು. ಹಿರಿಯ ದಲಿತ ಚಳುವಳಿಗಾರ ಮಾವಳ್ಳಿ ಶಂಕರ್, ಹಿರಿಯ ಕಾರ್ಮಿಕ ಮುಖಂಡರಾದ ಎಸ್.ವರಲಕ್ಷ್ಮಿ ಸೇರಿದಂತೆ ಖ್ಯಾತನಾಮರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಹಾವೇರಿ ಜಿಲ್ಲೆಯಿಂದಲೂ ಹಲವಾರು ಚಿಂತಕರು, ಸಾಹಿತಿ-ಕಲಾವಿದರು, ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ, ಪ್ರಗತಿಪರ ಚಿಂತಕರಾದ ಮಹಾಂತೇಶ್ ದೊಡ್ಮನಿ, ಸಾಮಾಜಿಕ ಪರಿವರ್ತನ ಜನಾಂಧೋಲನದ ಹಸೀನಾ ಹೆಡಿಯಾಲ, ಡಿಎಸ್.ಎಸ್ ರಾಜ್ಯ ಸಹ ಸಂಚಾಲಕರಾದ ಹೊನ್ನೇಶ್ವರ ತಗಡಿನಮನಿ, ಎಸ್.ಎಫ್.ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ವಕೀಲ ನಾರಾಯಣ ಕಾಳೆ, ಮೋಹನ್ ಆರ್.ಬಿ, ಬಸವರಾಜ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ