ಜನರ ಆಶೋತ್ತರಗಳ ಇಡೇರಿಸುವಂತಹ ಅಯವ್ಯಯ ಮಂಡನೆ

ಹಾವೇರಿ :

      ರಾಜ್ಯದ ಜನರ ಆರ್ಶಿವಾದ ಹಾಗೂ ದೇಶದ ಸಂವಿಧಾನ ಬದ್ದವಾಗಿ ರಚಿತವಾದ ಮೈತ್ರಿ ಸರ್ಕಾರ ರೈತಪರ ಹಾಗೂ ಸುಭದ್ರವಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವಾನಾಥ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಜನರ ಹಾಗೂ ರೈತರ ಕುಟುಂಬಗಳ ಪರವಾದ ಎಲ್ಲ ವರ್ಗದ ಜನರ ಆಶೋತ್ತರಗಳ ಇಡೇರಿಸುವಂತಹ ಅಯವ್ಯಯವನ್ನು ಸಿಎಂ ಕುಮಾರಸ್ವಾಮಿ ಮಂಡಿಸಿದ್ದಾರೆ.

        ನೀರಾವರಿ, ಕೆರೆಗಳಿಗೆ ನೀರು ತುಂಬಿಸುವುದು.ಇಸ್ರೇಲ್ ಮಾದರಿ ಬೇಸಾಯಿ ಪದ್ದತಿ. 1 ಸಾವಿರ ಆಂಗ್ಲ ಮಾಧ್ಯಮ ಶಾಲೆ.ಆರೋಗ್ಯ ಸೇರಿದಂತೆ ಜನರಿಗೆ ಅನುಕೂಲವಾಗುವ ಯೋಜನೆಗಳಿಗೆ ಬಜೆಟ್ ಪ್ರೇರಕವಾಗಿದೆ.ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಹೊಸ ಆದಾಯ ತರುವ ಪ್ರಯತ್ನವಾಗಿದೆ.ಇದೊಂದು ಉತ್ತಮ ಬಜೆಟ್ ಎಂದು ಹೇಳಿದರು. ಬಿಜೆಪಿ ನಡೆಗೆ ಆಕ್ರೋಶ : ರಾಜ್ಯ ಜನರಿಗೆ ಆಡಳಿತ ಬಗ್ಗೆ ನಂಬಿಕೆ ಬರುವ ಹಾಗೆ ಇರಬೇಕು.

        ಆದರೆ ಬಿಜೆಪಿ ಪಕ್ಷದವರ ವರ್ತನೆ ಜನರಿಗೆ ಬೇಸರ ತರಿಸಿದೆ. ಅನುಭವಿ ಮಾಜಿ ಸಿಎಂ ಬಿಎಸ್‍ವೈ ಅನ್ಯ ಮಾರ್ಗದ ಮೂಲಕ ಅಧಿಕಾರ ಹಿಡಿಯಲಿಕ್ಕಾಗಿ ತಪ್ಪು ಸಂದೇಶವನ್ನು ರವಾನಿ ಮಾಡುತ್ತಿದ್ದಾರೆಯೇ ? ಅವರಿಗೆ ಅದು ಶೋಭೆ ಅಲ್ಲ. ರಾಷ್ಟೀಯ ಪಕ್ಷ ಬಿಜೆಪಿ ಆಡಳಿತ ನಡೆಸುವ ಮೈತ್ರಿ ಸರ್ಕಾರ ಉತ್ತಮ ಜನಪರ ಕೆಲಸ ಮಾಡುವಾಗ ಅಧಿಕಾರಕ್ಕಾಗಿ ಅನ್ಯಮಾರ್ಗ ಹಿಡಿಯುವುದು ಸರಿಯಾದ ಮಾರ್ಗವಲ್ಲ ಆಪರೇಷನ್ ಕಮಲ ಫಲಿಸಲ್ಲ ಎಂದು ಆಕ್ರೋಶಿತರಾದರು.

         ವಿಶ್ವವಿದ್ಯಾಯಲಗಳು ಏನು ಮಾಡುತ್ತೀವೆ ? : ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು ರಾಜ್ಯದ ಜನರ ಹಾಗೂ ಆರ್ಥಿಕ ಸ್ಥಿಗತಿಗಳ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು. ಬಜೆಟ್ ಮಂಡಿಸುವ ತಿಂಗಳ ಮುಂಚೆ ರಾಜ್ಯದ ಆಗುಹೋಗುಗಳ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಿಸುವಂತೆ ಬುದ್ಧಿವಂತರು ಮಾಡಬೇಕು.

        ಆದರೆ ವಿಶ್ವವಿದ್ಯಾಲಯಗಳು ಏನು ಮಾಡುತ್ತಿವಿ ಎಂಬುವುದು ಗೋತ್ತಾಗುತ್ತಿಲ್ಲ. ರಾಜ್ಯದ ಅಭಿವೃದ್ದಿಗಳ ಮೇಲೆ ಚರ್ಚೆ ಮಾಡುವಂತೆ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದು ಹಳ್ಳಿಹಕ್ಕಿ ಹೆಸರುವಾಸಿ ಎಚ್. ವಿಶ್ವನಾಥ ಎಚ್ಚರಿಸಿದ್ದಾರೆ. ಜೆಡಿಎಸ್ ಪಕ್ಷ ಸಂಘಟನೆ : ಈ ಪಕ್ಷ ಎಲ್ಲ ಪಕ್ಷಗಳಿಗೆ ನಾಯಕರನ್ನು ಕಳುಹಿಸಿದ ಕೀರ್ತಿಇದೆ.

        ದೇಶಕ್ಕೆ ಪ್ರಧಾನಿಯನ್ನು ಹಾಗೂ ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದೆ. ಜನಪರ ರೈತಪರ ಕೆಲಸಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದು,ಎಲ್ಲ ಭಾಗದಿಂದ ಪಕ್ಷ ಬಲವರ್ದನೆಗೊಳ್ಳುತ್ತಿದೆ ಎಂದು ಜೆಡಿಎಸ್ ಪಕ್ಷದ ಸಂಘಟನೆಯ ಬಗ್ಗೆ ಮಾತನಾಡಿದರು.

      ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ : ದೇಶದಲ್ಲಿ 16 ರಾಜ್ಯಗಳಲ್ಲಿ ಮೈತ್ರಿ ಸರ್ಕಾಗಳು ಆಡಳಿತ ನಡೆಸುತ್ತಿದ್ದು, ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಬಲವರ್ದನೆಯಾಗುತ್ತಿವೆ. ರಾಜ್ಯಗಳು ಅಭಿವೃದ್ದಿ ಇವುಗಳಿಂದ ಬೇಗವಾಗುತ್ತಿವೆ. ಸರ್ಕಾರ ರಚನೆಗೆ ನಿರ್ಣಾಯಕ ಪಾತ್ರವಹಿಸಲಿವೆ ಎಂದು ಎಚ್.ವಿಶ್ವನಾಥ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿಶಾಸಕ ಎನ್.ಎಚ್.ಕೋನರಡ್ಡಿ. ಪಕ್ಷದ ಪ್ರ.ಕಾ ಡಾ|| ಸಂಜಯ ಡಾಂಗೆ.ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸಿದ್ದಬಸಪ್ಪ ಯಾದವ್.ಜಿಲ್ಲಾಧ್ಯಕ್ಷರಾದ ಅಶೋಕ ಬೇವಿನಮರ ಅನೇಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link