ಬೆಂಗಳೂರು
ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿರುವ ಪ್ರಕರಣದ ಸಂಬಂಧ ಜೆಡಿಎಸ್ ಮುಖಂಡ ಅಲ್ತಾಫ್ಖಾನ್ನನ್ನು ಶನಿವಾರ ರಾತ್ರಿ ಉಪ್ಪಾರಪೇಟೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಬಂಧಿತ ಅಲ್ತಾಫ್ಖಾನ್ನನ್ನು ರಾತ್ರಿಯೇ ನ್ಯಾಯಾಧಿಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಲಾಗಿದೆ ನ್ಯಾಯಧೀಶರು ಅಲ್ತಾಫ್ಗೆ ಜಾಮೀನು ನೀಡಿದ್ದಾರೆ.
ಹೋಟೆಲ್ವೊಂದಕ್ಕೆ ನುಗ್ಗಿ ವ್ಯಕ್ತಿವೋರ್ವನಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ಅಲ್ತಾಫ್ ಖಾನ್ ಬಂಧಿಸಿ ವಿಚಾರಣೆ ನಡೆಸಿ ಬಳಿಕ ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








