ಹೂವಿನಹಡಗಲಿ :
ಹೈದ್ರಬಾದ ಕರ್ನಾಟಕ ಸಮಗ್ರ ಅಭಿವೃದ್ದಿಗಾಗಿ 17 ಸೆಪ್ಟಂಬರ್ 2018 ರಿಂದ ಬೀದರ್ ನಿಂದ ಬಳ್ಳಾರಿ ವರೆಗೆ ಭಾರತ ಕಮ್ಯುನಿಷ್ಟ್ ಪಕ್ಷ ಹಮ್ಮಿಕೊಂಡಿರುವ ಜನಜಾಗೃತಿ ಜಾಥವು ಭಾನುವಾರು ಸಂಜೆ ಹೂವಿನಹಡಗಲಿ ಪಟ್ಟಣಕ್ಕೆ ಆಗಮಿಸಲಿದೆ. ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ಸಂಚಾಲಕ ಹಲಗಿ ಸುರೇಶ್ ಹೇಳಿದರು. ಇಂದು ಪ್ರವಾಸಿ ಮಂದಿರದಲ್ಲಿ ಭಾರತ ಕಮ್ಯಿನಿಷ್ಟ್ ಪಕ್ಷ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದರು. ಈ ಜಾಥವನ್ನು ಮುನ್ನಡೆಸಲು ಸಿ.ಪಿ.ಐ.ಪಕ್ಷದ ಸಾಮೂಹಿಕ ಸಂಘಟನೆಗಳು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕೆಂದರು.
ಹೈದ್ರಾಬಾದ್ ಕರ್ನಾಟಕದ ಅಭಿವೃದ್ದಿಗಾಗಿ ಸಾವಿರಾರು ಕೋಟಿ ರೂಗಳನ್ನು ಇದೂವರೆಗೆ ವ್ಯಯಿಸಿದ್ದರೂ ಅಭಿವೃದ್ದಿಯಲ್ಲಿ ಹಿಂದುಳಿದಿರುವಿಕೆಗೆ ರಾಜಕಾರಣಿಗಳ ಭ್ರಮ್ಹಾಂಡ ಭ್ರಷ್ಟಾಚಾರ, ರಾಜಕೀಯ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ, 371 ಜೆ ಕಲಂನ ಅನುಷ್ಠಾನ ವಿಫಲತೆಯಿಂದಾಗಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದಾಗ ಅಭಿವೃದ್ದಿಯಲ್ಲಿ ಹಿಂದುಳಿದಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 17 ಸ್ಟೆಂಬರ್ 2018ರಿಂದ ಬೀದರ್ ನಿಂದ ಪ್ರಾರಂಭವಾಗಿ 25 ಸೆಪ್ಟಂಬರ್ 2018ರಂದು ಬಳ್ಳಾರಿಲ್ಲಿ ಅಂತ್ಯಗೊಳ್ಳುವುದು. ಎಂದು ಅಖಿಲ ಭಾರತ ಯೂಥ್ ಫೆಡರೇಷನ್‍ನ ರಾಜ್ಯ ಸಂಚಾಲಕ ಸಂತೋಷ್ ಎಚ್.ಎಂ. ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಿಜಯಲಕ್ಷ್ಮಿ ವಹಿಸಿದ್ದರು. ಎಚ್.ಬಿ.ಶಾಂತ, ಬಾವಾಜಿ ಜಂಗ್ಲಿಸಾಬ್, ಎಂ.ಚಿದಾನಂದ, ರಮೇಶ್‍ನಾಯ್ಕ್, ಕೆ.ಸುರೇಂದ್ರನಾಥ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ