ಜೀವರಾಶಿ ಉಳಿವಿಗೆ ಪರಿಸರ ಸಂರಕ್ಷಿಸಬೇಕು

ಚಿತ್ರದುರ್ಗ:

       ಪರಿಸರ ಸಂಪತ್ತು ಅರಣ್ಯ ಸಂಪತ್ತನ್ನು ಉಳಿಸಿದರೆ ಪ್ರತಿಯೊಬ್ಬರಿಗೂ ಉಸಿರಾಟಕ್ಕೆ ಶುದ್ದವಾದ ಗಾಳಿ ದೊರೆಯುತ್ತದೆ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ ಹೇಳಿದರು.ನೆಹರು ಯುವ ಕೇಂದ್ರ, ಪ್ರಿಯದರ್ಶಿನಿ ಮಹಿಳಾ ಮಂಡಳಿ ಸಂಯುಕ್ತಾಶ್ರಯದಲ್ಲಿ ಸಿಲಿಕಾನ್ ಕಂಪ್ಯೂಟರ್ಸ್‍ನಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ವನಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

       ಬೆಳಗಿನ ಜಾವ ವಾಯುವಿಹಾರಕ್ಕೆ ಹೋದರೆ ಮರಗಳಿಂದ ಶುದ್ದವಾದ ಆಮ್ಲಜನಕ ದೊರಕುತ್ತದೆ. ಅರಳಿ, ಆಲ, ಬೇವು ಹೀಗೆ ಇನ್ನು ಅನೇಕ ಮರಗಳನ್ನು ಬೆಳೆಸುವುದರಿಂದ ತಂಪಾದ ನೆರಳು, ಗಾಳಿ ಸಿಗುತ್ತದೆ. ಗಿಡ ಮರಗಳನ್ನು ಕಡಿದು ಕಾಡು ನಾಶ ಮಾಡುತ್ತಿರುವುದರಿಂದ ಪ್ರಕೃತಿಯಲ್ಲಿ ಅಸಮತೋಲನವುಂಟಾಗಿ ತಾಪಮಾನ ಜಾಸ್ತಿಯಾಗಿ ಸಕಲ ಜೀವರಾಶಿಗಳು ತತ್ತರಿಸುವಂತಾಗಿದ. ಅದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಗಿಡ ನೆಟ್ಟು ಪ್ರತಿನಿತ್ಯವೂ ನೀರುಣಿಸಿ ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದರೆ ಅದುವೇ ಪ್ರಕೃತಿಗೆ ನೀವು ನೀಡುವ ಬಹುದೊಡ್ಡ ಕೊಡುಗೆ ಎಂದು ತಿಳಿಸಿದರು.

       ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡಿ ಮನುಷ್ಯನ ಸ್ವಾರ್ಥಕ್ಕೆ ಮರ-ಗಿಡಗಳು ಬಲಿಯಾಗುತ್ತಿವೆ. ಸಕಾಲಕ್ಕೆ ಮಳೆ-ಬೆಳೆ ಇಲ್ಲದಂತಾಗಿದೆ. ಬೆಟ್ಟಗುಡ್ಡಗಳ ಸಂಪತ್ತು ಲೂಟಿಯಾಗುತ್ತಿದೆ. ಮರಳು ಮಾಫಿಯಾದಿಂದ ನದಿಯ ಒಡಲು ಬತ್ತುತ್ತಿದೆ. ಅಂರ್ತಜಲ ಬರಿದಾಗುತ್ತಿದೆ. ಇದರಿಂದ ನೀರು ಸಂಗ್ರಹವಾಗುತ್ತಿಲ್ಲ. ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಮುಂದಿನ ಪೀಳಿಗೆಗೆ ಹಸಿರು ಸಂಪತ್ತು ಉಳಿಸಬಹುದು ಎಂದು ಹೇಳಿದರು.ಟವರ್‍ಗಳ ಅಳವಡಿಕೆಯಿಂದ ಪಕ್ಷಿ, ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುತ್ತಿದೆ. ಹಾಗಾಗಿ ಮರ-ಗಿಡಗಳನ್ನು ಹೆಚ್ಚಾಗಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

       ಚಿತ್ರದುರ್ಗ ಜಿಲ್ಲಾ ಮಾರಾಟ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೆ.ಎಸ್.ಚಂದ್ರಮೋಹನ್ ಮಾತನಾಡುತ್ತ ಹೊಂಗೆ ಮರ ಎಲ್ಲಾ ಮರಗಳಿಗಿಂತಲೂ ಹೆಚ್ಚು ಆಮ್ಲಜನಕ ನೀಡುತ್ತದೆ. ಮರಗಳನ್ನು ಕಡಿಯಬಾರದು. ಗಿಡ-ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಿದರೆ ಶುದ್ದವಾದ ಗಾಳಿ ದೊರಕುತ್ತದೆ. ಪೌಷ್ಟಿಕಾಂಶಗಳ ಸೇವೆನೆಯಿಂದ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಬಹುದು. ಪ್ರಕೃತಿ ಸಂಪತ್ತು, ವನ ಸಂಪತ್ತನ್ನು ನಾಶ ಮಾಡದೆ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದೇ ನಿಜವಾಗಿಯೂ ಪ್ರಕೃತಿಗೆ ನೀಡುವ ಬಹುದೊಡ್ಡ ಕೊಡುಗೆ ಎಂದು ಹೇಳಿದರು.

      ಸಾಕಷ್ಟು ಗಿಡ-ಮರಗಳಲ್ಲಿ ಔಷಧೀಯ ಗುಣಗಳಿರುತ್ತದೆ. ಮನೆ ಮುಂಭಾಗ ತುಳಸಿ ಗಿಡ ಬೆಳೆಸುವುದರಿಂದಲೂ ಅನೇಕ ಪ್ರಯೋಜನಗಳಿದೆ ಎಂದು ಸಸ್ಯಗಳ ಮಹತ್ವ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link