ಸವಣೂರ :
ಮಾನವನಿಗೆ ಆರೋಗ್ಯ ಬಹಳ ಮುಖ್ಯವಾಗಿದ್ದು, ಕಣ್ಣುಗಳ ಸಂರಕ್ಷಣೆ ಮಾಡಿಕೊಳ್ಳಲು ಸರಿಯಾದ ಸಮಯಕ್ಕೆ ತಪಾಸಣೆ ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ಡಾ|| ವಿದ್ಯಾ ಎಸ್ ಮೋಸ್ ಹೇಳಿದರು.
ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.ಅಮ್ಮಾ ಸಂಸ್ಥೆ(ರಿ)ಹಿರೇಮುಗದೂರ,ಡಾ, ಎಪಿಜೆ ಅಬ್ದುಲ್ ಕಲಾಂ ಪ್ರಾಕೃತಿಕ ಚಿಕಿತ್ಸೆ ಹಾಗೂ ಯೋಗ ಕೇಂದ್ರ, ಕರ್ನಾಟಕ ವೃತ್ತಿಪರ ಶಿಕ್ಷಣ ಪದವೀಧರರ ಸಂಘ(ರಿ) .
ಶ್ರೀ ಹಡಪದ ಅಪ್ಪಣ್ಣ ವಿವಿದೊದ್ದೇಶಗಳ ಸಂಘ(ರಿ) ಹಾವೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಎಲ್ಲ ಬಡವರಿಗೂ ಅನುಕೂಲವಾಗಲು ಉಚಿತ ಕಣ್ಣಿನ ತಪಾಸಣೆ ಮಾಡುವಾಗ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಣ್ಣಿನ ಮಹತ್ವ ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್‍ಸಾಬ ಬುಡಂದಿ ಮಾತನಾಡಿ ಜೀವನವನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜಾಗೃತಿಯಿಂದ ಇಟ್ಟುಕೊಳ್ಳಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕುಸಾಮಾಜಿಕ ಸೇವೆ ಮಾಡಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ತಾಲೂಕ ನೇತ್ರಾಧಿಕಾರಿಗಳಾದ ಹೂರಭಾನು ಜಹಾಗಿರ್‍ದಾರ ಮಾತನಾಡಿ ಸೂಕ್ಷ್ಮ ಅಂಗವಾಗಿರುವ ಕಣ್ಣು ಬದುಕಿಗೆ ಮಹತ್ವದಾಗಿದೆ. ಹಿರಿಯರಿಗೆ ವಿದ್ಯಾವಂತರು ಇಂತಹ ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರಿಗೆ ಸಹಕಾರಿಯಾಗಬೇಕು ಎಂದು ಆರೋಗ್ಯ ಸಲಹೆ ನೀಡಿದರು.
ಆಸ್ಪತ್ರೆಯ ಆರೋಗ್ಯಮಿತ್ರ ಶಿವಕುಮಾರ,ಶೇಖಪ್ಪ ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದವರಾದ ಶಂಕರ ನಾಯ್ಕ,ವೆಂಕಟೇಶ್,ರಮ್ಯಾ, ಚೈತ್ರಾ ಮಹ್ಮದ ಯುಸೂಫ್ ಹೋಂಗಲ್, ಅಮ್ಮಾ ಸಂಸ್ಥೆ(ರಿ) ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 200 ಕ್ಕೂ ಜನರು ಭಾಗಿಯಾಗಿದ್ದರು.