ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ

ಸವಣೂರ :

     ಕಾಲ ಕಾಲಕ್ಕೆ ಕಣ್ಣುಗಳ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯವಾಗಿದ್ದು, ಜೀವನದ ಎಲ್ಲ ಚಟುವಟಿಕೆಗಳಿಗೆ ಮೂಲವಾಗಿವೆ. ಬದುಕಿಗೆ ಕಣ್ಣುಗಳು ಅವಶ್ಯಕವಾಗಿದೆ ಎಂದು ಶಂಕರ ಆಸ್ಪತ್ರೆಯ ಡಾ|| ಪ್ರದೀಪಕುಮಾರ ಹೇಳಿದರು. ನಗರದ ತಾಲೂಕ ಆಸ್ಪತ್ರೆಯಲ್ಲಿ ತಾಲೂಕ ವೈಧ್ಯಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ,ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ. ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ.

      ಅಮ್ಮಾ ಸಂಸ್ಥೆ (ರಿ)ಹಿರೇಮುಗದೂರ, ಕರ್ನಾಟಕ ವೃತ್ತಿಪರ ಶಿಕ್ಷಣ ಪದವೀಧರರ ಸಂಘ(ರಿ)ಹಾಗೂ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ನೇತ್ರದಾನ ಜಾಗೃತಿ ಶಿಬಿರದಲ್ಲಿ ಭಾಗಿಯಾಗಿ ಕಣ್ಣಿನ ಮಹತ್ವದ ಬಗ್ಗೆ ಮಾತನಾಡಿದರು. ಹೊರ ಪರಿಸರ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಉಚಿತ ತಪಾಸಣೆಗೆ ಕರೆತರುವ ಮೂಲಕ ಹಿರಿಯರ ಸೇವೆಗೆ ಅಮ್ಮಾ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ.

      ಇತಂಹ ಸಮಾಜಮುಖಿ ಕಾರ್ಯ ಮಾಡಲು ಎಲ್ಲರೂ ಬದ್ದರಾಗಿರಬೇಕು ಎಂದು ಡಾ|| ಡಾ|| ಪ್ರದೀಪಕುಮಾರ ಆರೋಗ್ಯ ಸಲಹೆ ನೀಡಿದರು. ಗ್ರಾ.ಪಂ ಸದಸ್ಯ ಮುತ್ತಪ್ಪ ತಳವಾರ ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸರ್ಕಾರಗಳ ಸೌಲಭ್ಯ ಬಡವರಿಗೆ ತಲುಪಲು ವಿದ್ಯಾವಂತರು ಮುಂದಾಗಬೇಕು ಎಂದರು. ಇದೇ ಅವಧಿಯಲ್ಲಿ ಶಂಕರ ಆಸ್ಪತ್ರೆಯ ವತಿಯಿಂದ ಹಿರಿಯರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ನೇತ್ರಾಧಿಕಾರಿಗಳಾದ ಹೂರಭಾನು ಜಹಾಗಿರ್‍ದಾರ.ಶಿವಮೊಗ್ಗದ ಶಂಕರ ಆಸ್ಪತ್ರೆಯ ಕಾರ್ಯವೃಂದದವರಾದ ವೆಂಕಟೇಶ್, ತ್ಯಾಗರಾಜ, ರೂಪಾ.ರಂಜಿತ್,ಶಿವಕುಮಾರ , ರಂಜಿತಾ , ಮಹ್ಮದ ಯುಸೂಫ್ ಹೋಂಗಲ್,ಶರಣಪ್ಪ ಗಾಣಗೇರ.ಶಿವಲಿಂಗಯ್ಯ ಕೆಂಭಾವಿಮಠ.ಅಮ್ಮಾ ಸಂಸ್ಥೆ(ರಿ)ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಈ ಶಿಬಿರದಲ್ಲಿ 150 ಕ್ಕೂ ಜನರು ಭಾಗಿಯಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link