ಜಿಲ್ಲಾ ಮಾದಿಗ ಪೂರ್ವಬಾವಿ ಸಭೆ

ಹಾವೇರಿ:

     ಮಾದಿಗ ಸಮಾಜಕ್ಕೆ ಯಾವುದೇ ಸಮಾಜ,ಪಕ್ಷಗಳು ಅನ್ಯಾಯ ಮಾಡಿಲ್ಲ ಇನ್ನೋಬ್ಬರ ಬಗ್ಗೆ ಆರೋಪ ಸರಿಯಲ್ಲ ಇತಿಹಾಸ ಇರುವ ನಮ್ಮ ಮಾದಿಗ ಸಮಾಜದ ಪರಿಸ್ಥಿತಿಗೆ ಸಂಘಟನೆ ಗಟ್ಟಿಗೊಳಿಸಬೇಕು. ತ್ಯಾಗ ಇಲ್ಲದೇ ಸಮಾಜ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಸಮಾಜದ ಮುಖಂಡರಿಗೆ ಕಿವಿ ಮಾತು ಹೇಳಿದರು.

      ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಮಾದಿಗ ಪೂರ್ವಬಾವಿ ಸಭೆಯಲ್ಲಿ ಮಾಜಿ ಸಚಿವ ಅಲ್ಕೋಡ ಹನುಮಂತಪ್ಪ ಮಾತನಾಡಿ ಜ.17 ರಂದು ರಾಜ್ಯ ಸರಕಾರ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪನೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಮಾದಿಗ ಸಮಾಜ ಬಾಂದವರು ಅಂದು ಸಮಾರಂಭದಲ್ಲಿ ಬಾಗವಹಿಸಿ ಸಮಾಜದ ಶಕ್ತಿ ಪ್ರದರ್ಶನ ನೀಡಬೇಕು ಸಮಾರಂಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.

       ಎ.ಜೆ ನ್ಯಾಯಮೂರ್ತಿಯವರ ಸದಾಶಿವ ಆಯೋಗ ಮಾದಿಗರದಷ್ಟೇ ಎನ್ನುವ ತಪ್ಪು ಕಲ್ಪನೆ ಮೂಡಿದೆ. ಇಲ್ಲಿ ಹತ್ತಾರು ಉಪಪಂಗಡ ಜಾತಿಗಳು ಇದರಲ್ಲಿ ಒಳಗೊಂಡಿವೆ. ಮಾದಿಗ ಜನಾಂಗ ಆದ ನಾವು ಸರ್ವರನ್ನು ಒಳಗೊಂಡ ವಿಚಾರ ಮಾಡುವರಾಗಿದ್ದೇವೆ ಸಮಾಜದಲ್ಲಿ ನಮ್ಮನ್ನು ಕಡೆಗಣಿಸಿ ಮೂಗಿಗೆ ತುಪ್ಪ ಒರಿಸುವ ಪಕ್ಷಗಳಿಗೆ ಪಕ್ಷಾತೀತವಾಗಿ ನಿರ್ಣಯ ಮಾಡಿ ತಕ್ಕ ಪಾಠ ಕಲಿಸಲಾಗುತ್ತದೇ ಸದಾಶಿವ ಆಯೋಗ ವಿರುದ್ಧ ಮಾಡಿದ್ದು ನಮ್ಮವರೇ ಅಂತಹ ಕೀಳಮಟ್ಟದಿಂದ ಹೊರ ಬಂದು ಸಮಾಜದ ಉದ್ದಾರಕ್ಕೆ ತ್ಯಾಗ ಮಾಡಿ ಎಂದು ತಿಳಿಸಿದರು.

       ದಲಿತರೆನಿಸಿಕೊಂಡಿರುವ ನೂರಾರು ಜಾತಿಗಳು ಸೌಜನ್ಯಕ್ಕಾದರೂ ಮಾದಿಗ ಸಮಾಜಕ್ಕೆ ರಾಜ್ಯ,ರಾಷ್ಟ್ರ ಮಟ್ಟದ ರಾಜಕೀಯ ಸ್ಥಾನ ಸಿಗುವಂತೆ ಸಹಕರಿಸಬೇಕು. ದಲಿತರಿಗೆ ದಲಿತರೇ ಶಕ್ತಿ ನೀಡಬೇಕು ಮೋಸ ಮಾಡಬಾರದು ಎಂದು ಹೇಳಿದರು. ನಮ್ಮನ್ನು ಬೆಳಿಸುವವರು ಹಳ್ಳಿಯಲ್ಲಿ ತಮ್ಮ ಜೀವನ ನಡೆಸುವ ಜನರು ಅಲ್ಲಿ ಹೋಗಿ ನಮ್ಮ ಸಮಾಜ ಸಂಘಟನೆಯನ್ನು ಗಟ್ಟಿಗೊಳಿಸಿಬೇಕು. ಸಮಾಜ ಉದ್ದಾರಕ್ಕೆ ಯಾವುದೇ ಅಸೂಯ ಮನೋಭಾವನೆ ಇಟ್ಟುಕೊಳ್ಳದೇ ಸಂಘಟಿತರಾಗಬೇಕು ಎಂದರು.ಸಭೆಯಲ್ಲಿ ಸಮಾಜದ ಸಂಘಟನೆ ಕುರಿತು ಜಿಲ್ಲಾ, ತಾಲೂಕಾ ಮುಖಂಡರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು.

        ಉಡಚಪ್ಪ ಮಾಳಗಿ ಮಾತನಾಡಿ ಜಿಲ್ಲೆಯಲ್ಲಿ ನೂರಾರು ಮುಖಂಡರಿದ್ದರೂ ಸರಿಯಾದ ಮಾಹಿತಿ ನೀಡದೇ ರಾಜಕೀಯ ಚುನಾವಣೆ ಬಂದಾಗ ಮಾತ್ರ ಸಮಾಜ ಜನರನ್ನು ಕರೆಯುವುದನ್ನು ಬಿಟ್ಟು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡ ಸಮಾಜ ಸಂಘಟನೆ ಮಾಡಿದರೇ ಮಾತ್ರ ರಾಜಕೀಯವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯ ವಾಗುತ್ತದೆ ಎಂದರು.ನಂತರ ಮಾತನಾಡಿ ಹೊನ್ನಪ್ಪ ತಗಡಿನಮನಿ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಸಮಾರಂಭಕ್ಕೆ ಜಿಲ್ಲೆ ಸಮಾಜದ ಜನರು ಬಾಗವಹಿಸಿ ಶಕ್ತಿ ತುಂಬಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

       ಎಸ್.ಜಿ ಹೊನ್ನಪ್ಪನವರ, ಸಮಾಜ ಸಂಘಟನೆ ಮಾಡುವರಲ್ಲಿ ಅಸೂಯೆ ಮನೋಭಾವನೆ ಇರಬಾರದು, ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಮಾಡೆದೇವು ಅನ್ನುವುದು ಬಹಳ ಮುಖ್ಯ ಹಾಗಾಗಿ ವೈಯುಕ್ತಿಕ ಸ್ವಾರ್ಥಕ್ಕೆ ಸಮಾಜವನ್ನು ಬಲಿ ಕೊಡಬೇಡಿ ಎಂದು ಹೇಳಿದರು

        ಈ ಸಂದರ್ಭದಲ್ಲಿ ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ಮಾಜಿ ಜಿ.ಪಂ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಡಿ.ಎಸ್ ಮಾಳಗಿ, ಅಶೋಕ ಮರೇಯಣ್ಣನವರ, ಸಂಜೀವಗಾಂಧಿ ಸಂಜೀವಣ್ಣನವರ, ಗಣೇಶ ಪೂಜಾರ, ಮಾರುತಿ ಬಣಕಾರ, ನಿಂಗಪ್ಪ ದಂಡೆಮ್ಮನವರ, ಮಾಲತೇಶ ಅಲ್ಲಪೂರ, ದೇವರಮನಿ ಸೇರಿದಂತೆ ಅನೇಕರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link