ಹಾವೇರಿ:
ರಾಜಕೀಯ ಪಕ್ಷಗಳು ಜಿಲ್ಲೆಯ ಮಾದಿಗ ಜನಾಂಗಕ್ಕೆ ರಾಜಕೀಯವಾಗಿ ಘೋರ ಅನ್ಯಾಯ ಮಾಡುತ್ತಲೇ ಬರುತ್ತಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ನಿರ್ಧಾರ ಇನ್ನು ಮಾಡಿಲ್ಲ ಎಂದು ಮಾದಿಗ ಸಮಾಜ ಮುಖಂಡ ಡಿ ಎಸ್ ಮಾಳಗಿ ಹೇಳಿದರು.
ನಗರದ ಖಾಸಗಿ ಹೊಟಲ್‍ನಲ್ಲಿ ಜಿಲ್ಲಾ ಮಾದಿಗ ಸಮಾಜದ ಸಂಘಟನೆ ಸಭೆಯಲ್ಲಿ ಮಾತನಾಡಿದ ಅವರು ಸಮಾಜ ಸಂಘಟನೆ ಎಂದೂ ನಿಲ್ಲದು, ಹಾವೇರಿ, ಗದಗ ಅಖಂಡ ಧಾರವಾಡ ಜಿಲ್ಲಾ ಭಾಗದಲ್ಲಿ 1.80 ಲಕ್ಷ ಮಾದಿಗ ಜನಾಂಗ ಮತದಾರರಿದ್ದರೂ ರಾಜಕೀಯವಾಗಿ ನಮ್ಮನ್ನು ಮೂರು ಪಕ್ಷದವರು ಕಡೆಗಣಿಸಿದ್ದಾರೆ. ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ನೀಡಿಲ್ಲ. ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಸಮಾಜ ಮುಖಂಡ ಮುಂದಿನ ಸಭೆ ನಡೆಸಿ ಯಾವ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ನಿರ್ಣಯ ಮಾಡಲಾಗುತ್ತದೆ ಎಂದರು.
ಮಾದಿಗ ಜನಾಂಗಕ್ಕೆ ಇಂದಿಗೂ ಸಮಾನತೆ ಸಿಗದಂತೆ ಮೂರು ಪಕ್ಷದವರೂ ಷಡ್ಯಂತ್ರ ಮಾಡುತ್ತಲೇ ಬರುತ್ತಿದ್ದಾರೆ. ಈ ಶೋಷಿತ ಸಮಾಜಕ್ಕೆ ಬಾಬಾ ಸಾಹೇಬ ಅಂಬೇಡ್ಕರವರ ಕೊಟ್ಟ ಅವಕಾಶಕ್ಕೂ ಕಲ್ಲಾಕೂವ ಜನರು ಇಂದಿಗೂ ಇದ್ದಾರೆ. ಇದನ್ನು ತಡೆಗಟ್ಟಲು ಮಾದಿಗ ಸಮಾಜ ಸಂಘಟನೆಯಾಗಬೇಕು. ಹಕ್ಕಿಗಾಗಿ ಪ್ರತಿಭಟಿಸುವ ಜಾಗೃತಿ ನಾವು ಬೆಳಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬಲಿಷ್ಠವಾಗಿ ಬೆಳಿಯಲು ಸಾಧ್ಯ ಎಂದು ಮಾಜಿ ಜಿ.ಪಂ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ಮಾದಿಗ ಜನಾಂಗಕ್ಕೆ ಸಮಾಜದಲ್ಲಿ ಭದ್ರತೆ ಇಲ್ಲ. ಮೇಲು ಕೀಳು ಭಾವನೆಗಳು ಪರೋಕ್ಷವಾಗಿ ಕಾಲಕಾಲಕ್ಕೆ ನಡೆಯುತ್ತಲೇ ಇದೆ. ಇದರಿಂದ ಹೊರಬರಬೇಕಾದರೇ ಮಾದಿಗ ಸಮಾಜದ ಜನರು ಶಿಕ್ಷಣ ಪಡೆದುಕೊಂಡು ಮುಂದೆ ಬರಬೇಕು. ಜೊತೆಗೆ ಸಂಘಟನೆ ಬಲಿಷ್ಠವಾಗಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಅಶೋಕ ಮರೆಣ್ಣನವರ, ಪುಟ್ಟಪ್ಪ ಮರೆಮ್ಮನವರ, ಚಂದ್ರಪ್ಪ ಹರಿಜನ, ಯಲ್ಲಪ್ಪ ಹರಿಜನ, ಮಲ್ಲೇಶ ಚಿಕ್ಕಣ್ಣನವರ, ಸಂಜಯಗಾಂಧಿ ಸಂಜೀವಣ್ಣನವರ, ನಿಂಗಪ್ಪ ದಂಡೆಮ್ಮನವರ, ರಾಜು ಹರಿಜನ, ಮಾಲತೇಶ ಯಲ್ಲಾಪೂರ, ಹೊನ್ನಪ್ಪ ತಗಡಿನಮನಿ, ಸುರೇಶ ಅಸಾದಿ, ಪ್ರೇಮಾ ಹರಿಜನ, ಸೇರಿದಂತೆ ಅನೇಕರಿದ್ದರು