ಜಿಲ್ಲಾ ಮಟ್ಟದ ರೈತ ಬೃಹತ್ ಸಮಾವೇಶ

ಹಾವೇರಿ :

     ರೈತರ ಎಲ್ಲ ಸಾಲಮನ್ನಾ ಮಾಡುವಂತೆ ಹಾಗೂ ಕೇಂದ್ರ ಸರ್ಕಾರ ಡಾ|| ಸ್ವಾಮಿನಾಥನ್ ವರದಿ ಜಾರಿಗಾಗಿ ಆಗ್ರಹಿಸಿ ಕ.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದಿ,25 ರಂದು ಜಿಲ್ಲೆಯ ಹಾನಗಲ್ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರೈತ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಹೇಳಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಎಲ್ಲ ಸರ್ಕಾರಗಳು ನೀರಾವರಿ ಯೋಜನೆಗಳನ್ನು ಪರಿಪೂರ್ಣ ಮಾಡಲು ವಿಫಲವಾಗಿವೆ. ರೈತರ ಬೀಜ ಗೊಬ್ಬರ ಖಾಸಗಿ ವ್ಯಕ್ತಿಗಳ ಒಡತನದಲ್ಲಿ ಇದ್ದು, ಅವರಿಗೆ ಹೇಗೆ ತಿಳಿಯುತ್ತದೇಯೋ ಹಾಗೆ ಮಾಡುತ್ತಾರೆ.

       ದೇಶಕ್ಕೆ ಅನ್ನ ನೀಡುವ ರೈತನ ಪಾಡು ಆರ್ಥಿಕ ಸಂಕಷ್ಟ ಹೇಳತೀರದು. ಕೇಂದ್ರ ,ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಸಂಘಟನೆ ಹಾಗೂ ನಮ್ಮ ಬೇಡಿಕೆಗಳ ಇಡೇರಿಕೆಗಾಗಿ ಹಾನಗಲ್ ತಾಲೂಕಾ ಕ್ರೀಡಾಂಗಣದಲ್ಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸೇರಿದಂತೆ ರಾಜ್ಯ ಮುಖಂಡರು ಆಗಮಿಸಲಿದ್ದು, ಸುಮಾರು ಈ ಜಿಲ್ಲಾ ಸಮಾವೇಶಕ್ಕೆ 10 ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿ ಜಿಲ್ಲೆಯ ಸಮಗ್ರ ರೈತರ ಅಭಿವೃದ್ಧಿ ಹಾಗೂ ಪರಿಹಾರ ಕ್ರಮಕ್ಕೆ ಮುಂದಿನ ಹೋರಾಟದ ತೀರ್ಮಾನ ಮಾಡಲು ಈ ಸಮಾವೇಶ ನೆರವಾಗಲಿದೆ ಎಂದು ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಎಂದರು.

         ರಾಜ್ಯ ಸಂಚಾಲಕ ಮಾಲತೇಶ ಪೂಜಾರ ಮಾತನಾಡಿ ಇಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳು ನಿಧಾನಗತಿಯ ಕೆಲಸಗಳಾಗುತ್ತಿದ್ದು,ಬರಗಾಲದಿಂದ ಬಳಲುತ್ತಿರುವ ನಮಗೆ ಸರ್ಕಾರ ಬೇಗನೇ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು.ರೈತರ ಸ್ಥಳೀಯ ಮಟ್ಟದ ಸಮಸ್ಯೆಗಳಿಗೆ ಎಲ್ಲ ರೈತ ಸಂಘಟನೆಗಳು ಒಂದಾಗಬೇಕಾಗಿದೆ.

         ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಜಮ್ಮು ಕಾಶ್ಮೀರ ಭಾಗದಲ್ಲಿ ನಮ್ಮ ರೈತ ಮಕ್ಕಳು ಹುತಾತ್ಮರಾಗುತ್ತಿದ್ದು, ಉಗ್ರ ಸಂಘಟನೆಗಳನ್ನು ಬೇಗನೆ ಮಟ್ಟಹಾಕಬೇಕು. ರಾಜಕಾರಣಿಗಳು ಆಗಬೇಕಾದರೆ 10 ವರ್ಷಗಳ ಕಾಲ ಅವರು ದೇಶದ ಸೇನಾ ಕಾರ್ಯದಲ್ಲಿ ಸೇವೆ ಸಲ್ಲಿಸಿ ಬಂದರೆ ಅವರ ಪಾಡು ಏನು ಎಂಬುವುದು ಅನುಭವ ಬರುತ್ತದೆ. ದಿ, 25 ರಂದು ಜರುಗುವ ಸಮಾವೇಶದ ಯಶಸ್ವಿಗಾಗಿ ಎಲ್ಲ ರೈತರು ಆಗಮಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ಮಾಡುವ ಮೂಲಕ ರೈತರ ಜೀವನ ಭದ್ರತೆಗೆ ನಾಂದಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಗೌರವಾಧ್ಯಕ್ಷ ದೀಪಕ್ ಘಂಟಿಸಿದ್ದಪ್ಪನವರ.ಪ್ರ.ಕಾ ಆಶೀಂ ಜಿಗಳೂರ.ಮುಖಂಡರಾದ ಪರಮೇಶಪ್ಪ ಕಟ್ಟೆಕಾರ. ಪ್ರಭು ರಾಗೇರ.ರಾಜೇಸಾಬ ತರ್ಲಘಟ್ಟ ಅನೇಕ ರೈತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link