ಹಾವೇರಿ
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯುವಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೆ.ಡಿ.ಪಿ.ಸಭೆ- ಸಮಾರಂಭ ಹಮ್ಮಿಕೊಳ್ಳದಂತೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸೂಕ್ತ ನಿರ್ದೇಶನ ನೀಡಲು ಜಿ.ಪಂ.ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿ.ಪಂ.ಅಧ್ಯಕ್ಷರ ಗಮನಕ್ಕೆ ಬಾರದೆ ಕೆಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತಿಯ ವಿವಿಧ ಫೈಲ್‍ಗಳನ್ನು ಜಿ.ಪಂ.ಅಧ್ಯಕ್ಷರ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು
ತಾಲೂಕು ಮಟ್ಟದ ಕೆಡಿಪಿ ಸಭೆ ಹಾಗೂ ಜಿ.ಪಂ.ಸಾಮಾನ್ಯ ಸಭೆ ಒಂದೇ ದಿನ ನಡೆದರೆ ಆಯಾ ಕ್ಷೇತ್ರದ ಜಿ.ಪಂ.ಅಧ್ಯಕ್ಷರು, ತಾ.ಪಂ.ಅಧ್ಯಕ್ಷರುಗಳು ಹಾಗೂ ಅಧಿಕಾರಿಗಳು ಯಾವ ಸಭೆಗೆ ಹಾಜರಾಗಬೇಕು. ಪೂರ್ಣ ಪ್ರಮಾಣದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದಿದ್ದರೆ ಅಲ್ಲಿ ಅಭಿವೃದ್ಧಿ ಕೆಲಸಗಳ ಚರ್ಚೆ ನಡೆಯಲು ಸಾಧ್ಯವೇ ಎಂದು ಓರ್ವ ಜಿ.ಪಂ. ಸದಸ್ಯರು ಪ್ರಶ್ನಿಸಿದರೇ, ಜಿ.ಪಂ.ಸದಸ್ಯೆ ಶ್ರೀಮತಿ ಗದಿಗೆವ್ವ ದೇಸಾಯಿ ಅವರು ಕೆಲವು ಇಲಾಖೆಗಳಲ್ಲಿ ಪೈಲ್‍ಗಳು ಕಳೆಯುತ್ತಿವೆ, ಇದಕ್ಕೆ ಯಾರು ಹೊಣೆ, ಇದರಿಂದ ಪರಿಹಾರ ಪಡೆಯುವ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಸಂಬಂಧಪಟ್ಟ ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ಬಣವಿಗೆ ಆಕಸ್ಮಿಕ ಬೆಂಕಿ ತಗಲು ಹಾನಿಗೊಳಗಾದ ಫಲಾನುಭವಿಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.
ಸಂಬಂಧಪ್ಟ ಅಧಿಕಾರಿಗಳಿಗೆ ಈ ವಿಷಯವಾಗಿ ಕಾರ್ಯಕೈಗೊಳ್ಳುವಂತೆ ಸೂಚಿಸಲಾಗುವುದು 10 ದಿನದೊಳಗಾಗಿ ಮಾಹಿತಿ ನೀಡಲು ತಿಳಿಸಲಾಗುವುದು ಎಂದು ಹೇಳಿದರು.ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ ಅವರು ಸುರಕ್ಷತಾ ಯೋಜನೆಯ ಗ್ಯಾಸ್ ಕಿಟ್ ಖರೀದಿಯಲ್ಲಿ ರೂ.10 ಲಕ್ಷಗಳ ಅವ್ಯವಹಾರ ನಡೆದಿದೆ. ರೂ.550ಕ್ಕೆ ದೊರೆಯು ಗ್ಯಾಸ್ ಕಿಟ್ ರೂ.3500ಕ್ಕೆ ಖರೀದಿಸಲಾಗಿದೆ. ಈ ಕುರಿತು ತನಿಖೆ ನಡೆಯಬೇಕು ಎಂದು ಕಳೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ವಿಷಯವಾಗಿ ತನಿಖೆಗೆ ಎಸಿಬಿ ಒಪ್ಪಿಸಲಾಗಿದೆ. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿ.ಪಂ.ಅಧ್ಯಕ್ಷರು ಹೇಳಿದರು.
ಸಭೆಯಲ್ಲಿ ಚರ್ಚೆಯಾದ ವಿಷಯ, ಠರಾವು, ಸದಸ್ಯರ ಹೆಸರು ಸಭೆ ನಡಾವಳಿಯಲ್ಲಿ ಬರುತ್ತಿಲ್ಲ ಹಾಗೂ ಕಳೆದ ಎರಡು ವರ್ಷಗಳಿಂದ ವಿವಿಧ ವಿಷಯಗಳ ಕುರಿತು ಚರ್ಚಿಸಲಾದ ಸಮಸ್ಯೆಗಳ ಕುರಿತು ಈವರೆಗೆ ಕ್ರಮಕೈಗೊಂಡಿಲ್ಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿವಿಧ ಸಮಿತಿ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ವಿವಿಧ ಜಿ.ಪಂ. ಸದಸ್ಯರು ಆರೋಪಿಸಿದರು.
ಜಿ.ಪಂ.ಸದಸ್ಯ ಸೊಪ್ಪಿನ ಅವರು ಕೂಡ್ಲ-ಬೆಂಚಳ್ಳಿ ಮಧ್ಯ ವರದಾ ನದಿಯಲ್ಲಿ ಎರಡು ಮೊಸಳೆಗಳಿವೆ, ಅವಘಡ ಸಂಭವಿಸುವ ಮೊದಲು ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಿ ಎಂದು ಹಿಂದೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಮೊಸಳೆ ಹಿಡಿಯಲು ಸೂಕ್ತ ಕ್ರಮಕೈಗೊಳ್ಳಿ ಎಂದು ಹೇಳಿದರು.
ಸಾಮಾನ್ಯ ಸಭೆಯಲ್ಲಿ ಈವರೆಗೆ ಏನು ಠರಾವ ಆಗಿವೆ, ಎಷ್ಟು ಠರಾವ ಪ್ರಗತಿಯಾಗಿವೆ ಹಾಗೂ ಎಷ್ಟು ಜಾರಿಗೆ ತರಲಾಗಿದೆ ಎಂಬ ಕುರಿತು ಸಮಗ್ರ ಮಾಹಿತಿ ನೀಡುವಂತೆ ವಿವಿಧ ಜಿ.ಪಂ.ಸದಸ್ಯರು ಜಿ.ಪಂ.ಅಧ್ಯಕ್ಷರನ್ನು ಆಗ್ರಹಿಸಿದರು.ಜಿ.ಪಂ.ಅಧ್ಯಕ್ಷರು ಮಾತನಾಡಿ, ಇನ್ನು 15 ದಿನದೊಳಗಾಗಿ ಎಲ್ಲ ಮಾಹಿತಿಯನ್ನು ಕಲೆಹಾಕಿ ಎಲ್ಲರಿಗೂ ಮಾಹಿತಿ ಪ್ರತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿ.ಪಂ.ಸದಸ್ಯ ಪ್ರಕಾಶ ಬನ್ನಿಕೋಡ ಅವರು ಮಾತನಾಡಿ, ಪ್ರತಿ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಮತ್ತೊಂದು ಸಭೆಯೊಳಗೆ ಕ್ರಮಕೈಗೊಳ್ಳಬೇಕು. ಆದರೆ ಸಭೆಯಲ್ಲಿ ಬರೆ ಸಮಸ್ಯೆಗಳ ಕುರಿತು ಚರ್ಚೆ ಆಗುತ್ತದೆ ವಿನಃ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಇಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಅನುಸರನಾ ವರದಿ ಪಡೆದು ಸಲ್ಲಿಸಲಾಗುವುದು ಎಂದು ಎಂದು ಹೇಳಿದರು.ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ನೀಲವ ಚವ್ಹಾಣ, ಜಿ.ಪಂ. ಸಹಾಯಕ ನಿರ್ದೇಶಕ ಜಾಫರ ಸುತಾರ, ಯೋಜನ ನಿರ್ದೇಶಕ ಎಚ್.ವೈ.ಮೀಸೆ, ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.