ಹಾವೇರಿ
ಜಿಲ್ಲಾ ತಂಬಾಕು ನಿಯಂತ್ರಣ ತಂಡ ಹಾವೇರಿ ನಗರದಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ತನಿಖಾ ವೇಳೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ 2003ರನ್ನು ಉಲ್ಲಂಘನೆಮಾಡಿದ ಅಂಗಡಿ ಮಾಲೀಕರಿಗೆ ಸೂಚನಾ ಪತ್ರ ನೀಡಿ, 18 ಪ್ರಕರಣಗಳಲ್ಲಿ ಕೋಟ್ಪಾ ಕಾಯ್ದೆ 2003ರ ಕಲಂ 4ರಡಿಯಲ್ಲಿ ರೂ.4800 ದಂಡ ವಸೂಲಿಮಾಡಿದೆ.ದಾಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಜಿಲ್ಲಾ ಸಲಹೆಗಾರ ಡಾ.ಸಂತೋಷ ವಿ.ದಡ್ಡಿ, ದಾದಾಪೀರ ಹುಲಿಕಟ್ಟಿ, ಎ.ಎಸ್.ಐ. ಚನಬಸಯ್ಯ ಕುಲಕರ್ಣಿ, ಹಿರಿಯ ಆರೋಗ್ಯ ನಿರೀಕ್ಷಕ ಪಿ.ಎನ್.ಪಾಟೀಲ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ